ಫ್ಯಾಮಿಲಿ ಸಮೇತ ‘ಜವಾನ್’ ಸಿನಿಮಾ ನೋಡುವೆ ಎಂಬ ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು – ನಾನೂ ಬರುವೆ, ಧನ್ಯವಾದ ಗೆಳೆಯ ಎಂದ ಶಾರುಖ್ ಖಾನ್

ಫ್ಯಾಮಿಲಿ ಸಮೇತ ‘ಜವಾನ್’ ಸಿನಿಮಾ ನೋಡುವೆ ಎಂಬ ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು – ನಾನೂ ಬರುವೆ, ಧನ್ಯವಾದ ಗೆಳೆಯ ಎಂದ ಶಾರುಖ್ ಖಾನ್

ಬಾಲಿವುಡ್‌ನ ಬಹುನಿರೀಕ್ಷೆಯ ಸಿನಿಮಾ ಜವಾನ್ ಸೆಪ್ಟೆಂಬರ್ 7ರಂದು ರಿಲೀಸ್ ಆಗಿದೆ. ವಿಶ್ವಾದ್ಯಂತ ಸಾವಿರಾರು ಪರದೆಗಳಲ್ಲಿ ‘ಜವಾನ್’ ಬಿಡುಗಡೆ ಆಗುತ್ತಿದೆ. ಮೊದಲ ದಿನ ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಬಗ್ಗೆ ಚರ್ಚೆಗಳು ಜೋರಾಗಿದೆ. ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಹೈಪ್ ಸಿಕ್ಕಿದೆ. ಅನೇಕ ಸೆಲೆಬ್ರಿಟಿಗಳು ಈ ಸಿನಿಮಾವನ್ನು ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. ಇದೀಗ ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಕೂಡಾ ಜವಾನ್ ಸಿನಿಮಾ ನೋಡುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ‘ಜವಾನ್’ರಿಲೀಸ್‌ಗೂ ಮುನ್ನವೇ ಶಾರುಖ್‌ ಖಾನ್ ಟೆಂಪಲ್‌ ರನ್ ಶುರು – ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್‌ ನಟ

ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಬೇರೆ ಬೇರೆ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳ ಜೊತೆ ನಂಟು ಹೊಂದಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಜೊತೆಗೂ ಅವರಿಗೆ ಸ್ನೇಹ ಇದೆ. ಈಗ ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಬಿಡುಗಡೆಯಾಗಿದೆ. ಈ ಸಂದರ್ಭದಲ್ಲಿ ಅವರಿಗೆ ಮಹೇಶ್ ಬಾಬು ಶುಭ ಕೋರಿದ್ದಾರೆ. ಮಹೇಶ್ ಬಾಬು ಅವರು ಫ್ಯಾಮಿಲಿ ಸಮೇತರಾಗಿ ‘ಜವಾನ್’ ನೋಡುವುದಾಗಿ ತಿಳಿಸಿದ್ದಾರೆ.

ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ತಾನು ಕುಟುಂಬ ಸಮೇತ ಸಿನಿಮಾ ನೋಡುವೆ ಎಂದು ಟ್ವೀಟ್ ಮಾಡುತ್ತಲೇ ಅದಕ್ಕೆ ಪ್ರತಿಕ್ರಿಯಿಸಿರುವ ಶಾರುಖ್ ಖಾನ್ ‘ನಾನೂ ಬರ್ತೀನಿ’ ಎಂದು ಟ್ವೀಟ್ ಮಾಡಿದ್ದಾರೆ. ಅವರು ಮಾಡಿರುವ ಟ್ವೀಟ್ ವೈರಲ್ ಆಗಿದೆ. ಈ ಸಮಯ ಜವಾನ್ಗೋಸ್ಕರ್. ಶಾರುಖ್ ಖಾನ್ ಅವರ ಪವರ್ ದೊಡ್ಡ ಪರದೆಯಲ್ಲಿ ಕಾಣಲಿದೆ. ಎಲ್ಲ ಮಾರುಕಟ್ಟೆಯಲ್ಲಿ ಈ ಸಿನಿಮಾ ಸಾರ್ವತ್ರಿಕ ಯಶಸ್ಸು ಗಳಿಸಲಿ ಎಂದು ಜವಾನ್ ತಂಡಕ್ಕೆ ಹಾರೈಸುತ್ತೇನೆ. ಇಡೀ ಕುಟುಂಬದ ಜೊತೆ ಕುಳಿತು ಈ ಸಿನಿಮಾವನ್ನು ನೋಡಲು ಕಾದಿದ್ದೇನೆ’ ಎಂದು ಮಹೇಶ್ ಬಾಬು ಟ್ವೀಟ್ ಮಾಡಿದ್ದಾರೆ. ಇದರಿಂದ ಶಾರುಖ್ ಖಾನ್ಗೆ ಮತ್ತು ಅವರ ಅಭಿಮಾನಿಗಳಿಗೆ ಖುಷಿ ಆಗಿದೆ. ‘ಧನ್ಯವಾದಗಳು ನನ್ನ ಗೆಳಯ. ನಿಮಗೆ ಈ ಸಿನಿಮಾ ಇಷ್ಟ ಆಗುತ್ತದೆ ಎಂಬ ನಂಬಿಕೆ ನನಗಿದೆ. ನೀವು ಯಾವಾಗ ಚಿತ್ರಮಂದಿರಕ್ಕೆ ಹೋಗುತ್ತೀರಿ ಅಂತ ಹೇಳಿ. ನಾನು ಕೂಡ ನಿಮ್ಮೊಂದಿಗೆ ಬಂದು ಸಿನಿಮಾ ನೋಡುತ್ತೇನೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಪ್ರೀತಿಯ ಅಪ್ಪುಗೆ ಮತ್ತು ಹಾರೈಕೆಗಳು’ ಎಂದು ಶಾರುಖ್ ಖಾನ್ ಅವರು ಟ್ವೀಟ್ ಮಾಡಿದ್ದಾರೆ.

ಕಾಲಿವುಡ್ನ ಸ್ಟಾರ್ ನಿರ್ದೇಶಕ ಅಟ್ಲಿ ಅವರು ‘ಜವಾನ್’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ಸೌತ್ ಸಿನಿಮಾರಂಗದ ಸೊಗಡು ಕಾಣಿಸಲಿದೆ. ನಯನತಾರಾ, ವಿಜಯ್ ಸೇತುಪತಿ ಸೇರಿದಂತೆ ದಕ್ಷಿಣ ಭಾರತದ ಅನೇಕರು ನಟಿಸಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ದಕ್ಷಿಣ ಭಾರತದಲ್ಲಿ ಈ ಚಿತ್ರಕ್ಕೆ ಹೈಪ್ ಸಿಕ್ಕಿದೆ.

suddiyaana