ಬಿಗ್‌ಬಾಸ್ ಮನೆಯಲ್ಲಿ ನಿದ್ದೆ ಮಾಡಲು ಟಾಯ್ಲೆಟ್ ಬೆಸ್ಟ್ ಪ್ಲೇಸ್ – ರಕ್ಷಿತಾ ಶೆಟ್ಟಿ ಐಡಿಯಾ ಯೂ ಟರ್ನ್

ಬಿಗ್‌ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ ಆಟದ ರೀತಿ ಬದಲಾಗಿದೆ. ಜೊತೆಗೆ ರಕ್ಷಿತಾ ಶೆಟ್ಟಿ ರಾತ್ರಿ ಸಮಯ ನಿದ್ದೆ ಮಾಡೋದಿಲ್ವಂತೆ. ಹಗಲಲ್ಲಿ ಪಾಪ ಜೋರಾಗಿ ನಿದ್ದೆ ಬರುತ್ತಂತೆ. ಅದಕ್ಕಾಗಿ ಒಂದು ಐಡಿಯಾ ಮಾಡಿದ್ದಾರೆ. ಇದೇ ಐಡಿಯಾ ಈಗ ರಕ್ಷಿತಾ ಶೆಟ್ಟಿಗೆ ತಿರುಗುಬಾಣವಾಗಿದೆ.
ಇದನ್ನೂ ಓದಿ:ಸ್ಪಂದನಾ ಸೋಮಣ್ಣ ಸೈಲೆಂಟ್ – ಕಾಲು ನೋವಿನಿಂದಾಗಿ ಹೊರಗೆ ಹೋಗುತ್ತಾರಾ?
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯ ನಿಯಮಗಳನ್ನು ಮೀರಿದ್ದಾರೆ. ಟಾಯ್ಲೆಟ್ ಮತ್ತು ಚೇಂಜಿಂಗ್ ರೂಂಗಳಲ್ಲಿ ಗಂಟೆಗಟ್ಟಲೆ ನಿದ್ದೆ ಮಾಡಿದ್ದಾರೆ. ಈ ಬಗ್ಗೆ ಮನೆಯವರಿಗೆ ಮತ್ತೆ ಬಿಗ್‌ಬಾಸ್‌ಗೂ ಅನುಮಾನವಿತ್ತು. ಕೊನೆಗೂ ಅನುಮಾನ ನಿಜವಾಗಿದ್ದು, ಬಿಗ್ ಬಾಸ್ ರಕ್ಷಿತಾ ಶೆಟ್ಟಿಗೆ ಎಚ್ಚರಿಕೆ ನೀಡಿದ್ದಾರೆ. ಬಿಗ್‌ಬಾಸ್ ಅಂದಮೇಲೆ ಕೆಲವೊಂದು ನಿಯಮಗಳು ಇರುತ್ತವೆ. ಇದನ್ನು ಒಪ್ಪಿಕೊಂಡೇ ಶೋಗೆ ಕಾಲಿಟ್ಟಿರುತ್ತಾರೆ ಸ್ಪರ್ಧಿಗಳು. ಆದರೆ, ಗೊತ್ತಿದ್ದೂ ಗೊತ್ತಿದ್ದೂ ನಿಯಮ ಉಲ್ಲಂಘಿಸಿದ್ದಾರೆ ರಕ್ಷಿತಾ ಶೆಟ್ಟಿ.
ಲೈಟ್ಸ್ ಆಫ್ ಆಗುವ ಮೊದಲು ಸ್ಪರ್ಧಿಗಳು ನಿದ್ರಿಸುವಂತೆ ಇಲ್ಲ. ಕೆಲವೊಮ್ಮೆ ಸ್ಪರ್ಧಿಗಳು ಸುಸ್ತಾಗಿ ನಿದ್ದೆಗೆ ಜಾರಿದ್ದು ಇದೆ. ಆಗ ಬಿಗ್‌ಬಾಸ್ ಎಚ್ಚರಿಸಿದ್ದೂ ಇದೆ. ಇವರೆಲ್ಲರಿಗಿಂತ ರಕ್ಷಿತಾ ಶೆಟ್ಟಿ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ನಿದ್ದೆ ಮಾಡಲು ಸೇಫ್ ಜಾಗ ಕಂಡುಕೊಂಡಿದ್ದಾರೆ. ಬಾತ್ರೂಂ, ಟಾಯ್ಲೆಟ್ ಗೆ ಹೋಗಿ ಅಲ್ಲಿಯೇ ನಿದ್ರೆ ಮಾಡುತ್ತಿದ್ದಾರೆ. ರಕ್ಷಿತಾ ಶೆಟ್ಟಿ ರಾತ್ರಿ ನಿದ್ದೆ ಮಾಡಲ್ಲ ಅನ್ನೋ ಮಾತು ಕೇಳಿಬಂದಿತ್ತು. ಹೀಗಾಗಿಯೇ ಅವರು ಹಗಲಲ್ಲಿ ನಿದ್ದೆ ಮಾಡುತ್ತಾರೆ. ಈ ಮೊದಲು ಬಿಗ್ ಬಾಸ್ ಮನೆಯಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು ಇದೆ. ‘ರಕ್ಷಿತಾ ಹಗಲಲ್ಲಿ ನಿದ್ದೆ ಮಾಡುತ್ತಾರೆ’ ಎಂದು ಕೆಲವರು ಆರೋಪ ಮಾಡಿದ್ದಾರೆ. ಈಗ ಅವರು ಬಿಗ್ ಬಾಸ್ ಕೈಯಲ್ಲಿ ಸಿಕ್ಕಿ ಬಿದ್ದಿದ್ದಾರೆ. ಮೊದಲು ಡ್ರೆಸ್ ಚೇಂಜ್ ಮಾಡೋ ನೆಪದಲ್ಲಿ ಚೇಂಜಿಂಗ್ ರೂಂಗೆ ಹೋದರು. ಅಲ್ಲಿ ಅವರು ಕೆಲವು ಹೊತ್ತು ನಿದ್ದೆ ಮಾಡಿದಂತೆ ಇದೆ. ಈ ಬಗ್ಗೆ ಗಿಲ್ಲಿ ನಟನಿಗೆ ಅನುಮಾನ ಬಂದಿದೆ. ಅವರು ಈ ಬಗ್ಗೆ ಕೇಳಿದಾಗ ರಕ್ಷಿತಾ ಅವರು ನಾನು ಬಟ್ಟೆ ಚೇಂಜ್ ಮಾಡೋಕೆ ಹೋಗಿದ್ದು ಎಂದು ಹೇಳಿದ್ದಾರೆ. ಬಟ್ಟೆ ಚೇಂಜ್ ಮಾಡೋಕೆ ಒಂದು ತಾಸು ಬೇಕಾ ಎಂದು ಗಿಲ್ಲಿ ಕೇಳಿದ್ದಾರೆ. ಚೇಂಜಿಂಗ್ ರೂಂಗೆ ಹೋಗಿ ಅಲ್ಲಿಯೇ ಅವರು ನಿದ್ದೆ ಮಾಡುತ್ತಾರೆ ಎಂದು ಗಿಲ್ಲಿ ಹೇಳಿದರು. ಇದಾದ ನಂತರ ಟಾಯ್ಲೆಟ್ಗೆ ಹೋದ ರಕ್ಷಿತಾ ಅಲ್ಲಿ ನಿದ್ದೆ ಮಾಡಿದ್ದಾರೆ. ಎಷ್ಟು ಹೊತ್ತಾದರೂ ಅವರು ಬರದೇ ಇದ್ದಿದ್ದು ನೋಡಿ ಸ್ವತಃ ಬಿಗ್‌ಬಾಸ್ ಅಖಾಡಕ್ಕೆ ಇಳಿಯಬೇಕಾಯ್ತು. ನಾಯಿ ಬೊಗಳೋ ಸೌಂಡ್ ಹಾಕಿದ ಬಿಗ್ ಬಾಸ್, ರಕ್ಷಿತಾ ಎಂದು ಎಚ್ಚರಿಸಿದರು. ಆಗ ರಕ್ಷಿತಾ ಟಾಯ್ಲೆಟ್ನಿಂದ ಹೊರ ಬಂದಿದ್ದಾರೆ. ನಾನು ನಿದ್ದೆ ಮಾಡಿರಲಿಲ್ಲ ಎಂದು ಸಾಧಿಸಲು ಬಂದರು. ಆದರೆ, ನಿದ್ದೆ ಮಾಡಿದ ತಪ್ಪಿಗೆ ಮನೆಯ ಕ್ಯಾಪ್ಟನ್ ಧನುಷ್, ಶಿಕ್ಷೆಯಾಗಿ ರಕ್ಷಿತಾಗೆ ಸ್ವಿಮ್ಮಿಂಗ್ಪೂಲ್ಗೆ ಇಳಿಸಿದರು. ನಂತರ ರಕ್ಷಿತಾ ಅವರು ಸೂರಜ್ ಬಳಿ ತಾವು ನಿದ್ದೆ ಮಾಡಿದ್ದು ಹೌದು ಎಂದು ಒಪ್ಪಿಕೊಂಡಿದ್ದಾರೆ.

ನೋಡಿರಿ

