ಮಲಗಿದ್ದ ಕಂದಮ್ಮ ಮೇಲೆ ಏಳಲೇ ಇಲ್ಲ – ಬಾಲಕನ ಪ್ರಾಣ ತೆಗೆಯಿತು ಬೆಡ್!  

ಮಲಗಿದ್ದ ಕಂದಮ್ಮ ಮೇಲೆ ಏಳಲೇ ಇಲ್ಲ – ಬಾಲಕನ ಪ್ರಾಣ ತೆಗೆಯಿತು ಬೆಡ್!  

ಸಾವು ನಮಗೆ ಯಾವಾಗ ಯಾವ ರೂಪದಲ್ಲಿ ಬರುತ್ತದೆ ಎಂಬುದನ್ನು ಹೇಳುವುದಕ್ಕೆ ಸಾಧ್ಯವೇ ಇಲ್ಲ. ನಿದ್ದೆ ಬರುತ್ತಿದೆ ಎಂದು ಮಲಗಿದಾಲೂ ಜವರಾಯ ಬರಬಹುದು. ಇಲ್ಲೊಂದು ಪುಟ್ಟ ಕಂದಮ್ಮ ಗಾಢ ನಿದ್ರೆಯಲ್ಲಿ ಮಲಗಿತ್ತು. ಅದ್ಯಾರ ದೃಷ್ಟಿ ಬಿತ್ತೋ ಗೊತ್ತಿಲ್ಲ. ಮಲಗಿದ್ದ ಕಂದಮ್ಮ ಮತ್ತೆ ಮೇಲೆ ಏಳಲೇ ಇಲ್ಲ. ಹಾಯಾಗಿ ನಿದ್ರಿಸುತ್ತಿದ್ದ ಮಗು ಮೇಲೆ ಬೆಡ್‌ ಬಿದ್ದು ದುರಂತವೇ ನಡೆದುಹೋಗಿದೆ.

ಪುಟ್ಟ ಬಾಲಕ ಗಾಢ ನಿದ್ರೆಯಲ್ಲಿ ಇರುವ ವೇಳೆ ಆತನ ಮೇಲೆ ಬೆಡ್‌ ಬಿದ್ದಿದೆ. ಹೀಗಾಗಿ ಆತ ಮಲಗಿದ್ದಲೇ ಪ್ರಾಣ ಕಳೆದುಕೊಂಡಿದ್ದಾನೆ. ಈ ಘಟನೆ ಕೇರಳದ ಕೋಯಿಕ್ಕೋಡ್‍ನಲ್ಲಿ ನಡೆದಿದೆ. ಮೃತನನ್ನು ಜೆಫಿನ್ ಸಂದೀಪ್ (2) ಎಂದು ಗುರುತಿಸಲಾಗಿದೆ. ಈತ ಸಂದೀಪ್ ಹಾಗೂ ಜಿನ್ಸಿ ದಂಪತಿಯ ಪುತ್ರ.

ಇದನ್ನೂ ಓದಿ: ಪ್ಯಾಕೆಟ್‌ನಲ್ಲಿ ಒಂದೇ ಒಂದು ಬಿಸ್ಕೆಟ್‌ ಕಡಿಮೆ ಕೊಟ್ಟ ಕಂಪನಿ – 1 ಲಕ್ಷ ರೂಪಾಯಿ ಪರಿಹಾರ ಪಡೆದ ಗ್ರಾಹಕ!

ಬಾಲಕ ಮಲಗಿ ಗಾಢ ನಿದ್ದೆಯಲಿದ್ದ ಸಂದರ್ಭದಲ್ಲಿ ರ್ಯಾಕ್‍ನಲ್ಲಿಟ್ಟ ಬೆಡ್ ಆತನ ಮೈಮೇಲೆ ಬಿದ್ದಿದೆ. ಇತ್ತ ಬೆಡ್ ಬಾಲಕನ ಮೇಲೆ ಬಿದ್ದ ವಿಚಾರ ತಿಳಿಯುತ್ತಿದ್ದಂತೆಯೇ ಆತನ ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಘಟನೆ ನಡೆದ ಸಂದರ್ಭದಲ್ಲಿ ಜೆಫಿನ್ ಹಾಗೂ ಆತನ ತಾಯಿ ಇಬ್ಬರೇ ಮನೆಯೊಳಗಡೆ ಇದ್ದರು. ಜೆಫಿನ್ ತಂದೆ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಕೆಲಸವೊಂದರ ನಿಮಿತ್ತ ಅವರು ಹೊರಗಡೆ ಹೋಗಿದ್ದರು ಎಂಬುದಾಗಿ ವರದಿಯಾಗಿದೆ.

suddiyaana