RCB No.1 ಲೆಕ್ಕವೇನು? – ಮೋದಿ ಸ್ಟೇಡಿಯಂನಲ್ಲಿ ಯಾರಿಗೆ ಗೆಲುವು?
KING V/s PRINCE ಫೈನಲ್ ಫೈಟ್!

ಪಾಯಿಂಟ್ ಟೇಬಲ್‌ನಲ್ಲಿ ಆರ್‌ಸಿಬಿ ಈಗ ನಂ.2 ಸ್ಥಾನದಲ್ಲಿದೆ. ಆದ್ರೆ ಈ ಸೀಸನ್‌ನಲ್ಲಿ ನಂ.1 ಆಗ್ಬೇಕು ಅಂದ್ರೆ, ಇವತ್ತಿನ GT ವಿರುದ್ಧದ ಮ್ಯಾಚ್ ಆರ್‌ಸಿಬಿ ಗೆಲ್ಲಬೇಕು . ಹಾಗೇ ಆರ್‌ಸಿಬಿ ವರ್ಸಸ್ ಪಿಬಿಕೆಎಸ್ ಮ್ಯಾಚ್ ಕೂಡ ಇದರಲ್ಲಿ ನಿರ್ಣಾಯಕ. ಹಾಗಿದ್ರೆ ಆರ್‌ಸಿಬಿ ನಂ1 ಸ್ಥಾನ ಉಳಿಸಿಕೊಂಡು ಹೋಗುವುದ್ದಕ್ಕೆ ಏನ್ ಮಾಡ್ಬೇಕು? ಇಂದಿನ ಪಂದ್ಯದಲ್ಲಿ ಆರ್‌ಸಿಬಿ ಪ್ಲೇಯಿಂಗ್ 11 ಹೇಗಿರಲಿ? ಮೋದಿ ಸ್ಪೇಡಿಯಂ ಯಾವ ತಂಡಕ್ಕೆ ಪ್ಲಸ್ ಆಗುತ್ತೆ ಅನ್ನೋದ್ದನ್ನ ನೋಡ್ತಾ ಹೋಗೋಣ.
ಹಾಲಿ ಚಾಂಪಿಯನ್ ಆರ್‌ಸಿಬಿ ಈ ಸೀಸನ್‌ನಲ್ಲೂ ಬೆಂಕಿ ಪ್ರದರ್ಶನ ನೀಡ್ತಿದೆ.. ಮತ್ತೊಮ್ಮೆ ಕಪ್ ನಮ್ದೇ ಅಂತ ಆರ್‌ಸಿಬಿ ಹೇಳ್ತಿದೆ.. ಪಾಯಿಂಟ್ಸ್ ಟೇಬಲ್‌ನಲ್ಲಿ ನಂ2 ಸ್ಥಾನದಲ್ಲಿರೋ ನಮ್ಮ ಬೆಂಗಳೂರು ತಂಡ ಇವತ್ತು ನಂಬರ್1 ಸ್ಥಾನಕ್ಕೆ ಬರುವುದ್ದಕ್ಕೆ ಬಿಗ್ ಫೈಟ್ ನಡೆಸೋಕೆ ರೆಡಿಯಾಗಿದೆ. ಇಂದಿನ ಪಂದ್ಯ ಆರ್‌ಸಿಬಿ vs GT ಕಾದಾಟ ನಡೆಸಲಿವೆ. ಈ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಸೋತಿರೋ ಗಿಲ್ ಪಡೆ ಇವತ್ತು ರಿವೇಂಜ್ ತೆೆಗೆದುಕೊಳ್ಳುವುದ್ದಕ್ಕೆ ಕಾದು ಕುಳಿತಿದೆ. ಆದ್ರೆ ನಾವು ಸೋಲೇ ಮಾತೇ ಇಲ್ಲ, ಗಿಲ್ ಪಡೆನ ಗಿಚ್ಚಿಗಿಲಿಗಿಲಿ ಮಾಡ್ತೀವಿ ಅಂತ ಆರ್‌ಸಿಬಿ ಹೇಳ್ತಿದೆ.
ಇದನ್ನೂ ಓದಿ: ಮುಂಬೈ ಸಾಮ್ರಾಜ್ಯ ಪತನ ಮಾಲೀಕರ ನಂಬಿಕೆ ಕಳ್ಕೊಂಡ್ರಾ ಪಾಂಡ್ಯ?
ಇಂದಿನ ಆರ್‌ಸಿಬಿ VS GT ಪಂದ್ಯ ವಿಶ್ವದ ದೊಡ್ಡ ಮೈದಾನ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದು ಬ್ಯಾಟರ್ ಸ್ನೇಹಿ ಪಿಚ್ ಆಗಿದ್ದು, ಮೊದಲು ಬ್ಯಾಟ್ ಮಾಡುವ ತಂಡ 190ಕ್ಕೂ ಹೆಚ್ ರನ್‌ಗಳನ್ನು ಕಲೆ ಹಾಕುವ ಸಾಧ್ಯತೆ ಇದೆ. ಆರಂಭದಲ್ಲಿ ವೇಗದ ಬೌಲರ್‌ಗಳು ಸಹ ಪಿಚ್ ಸಹಾಯ ಪಡೆಯಬಹುದಾಗಿದೆ. ಅಲ್ಲದೆ ಈ ಮೈದಾನದಲ್ಲಿ ಎರಡನೇ ಇನಿಂಗ್ಸ್ ವೇಳಿಗೆ ಇಬ್ಬನಿ ಬೀಳುವುದರಿಂದ ಟಾಸ್ ಮಹತ್ವದ ಪಾತ್ರವನ್ನು ವಹಿಸುತ್ತದೆೆೆ ಅಂತಾನೇ ಹೇಳಬಹುದು. ಆರ್‌ಸಿಬಿ ಮತ್ತು ಗುಜರಾತ್ 7 ಸಲ ಮುಖಾಮುಖಿಯಾಗಿದ್ದು, ಇದರಲ್ಲಿ ಆರ್‌ಸಿಬಿ 4 ಸಲ ಗೆದ್ರೆ, ಗುಜರಾತ್ 3 ಸಲ ಗೆದ್ದಿದೆ.
ಫಿಲ್ ಸಾಲ್ಟ್ ಬದಲು ಬೆಥಲ್
ಬೆಂಗಳೂರಿನಲ್ಲಿ ನಡೆದ ಅಭ್ಯಾಸದ ವೇಳೆ ಗಾಯಗೊಂಡಿದ್ದ ಆರ್‌ಸಿಬಿ ತಂಡದ ಸ್ಫೋಟಕ ದಾಂಡಿಗ ಫಿಲ್ ಸಾಲ್ಟ್ ಏಪ್ರಿಲ್ 24 ರಂದು ನಡೆದ ಗುಜರಾತ್ ಟೈಟಾನ್ಸ್ ಮತ್ತು ಏಪ್ರಿಲ್ 27 ರಂದು ಜರುಗಿದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಕಾರಣ ಸಾಲ್ಟ್ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಇಂದಿನ ನಡೆಯಲಿರುವ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲೂ ಆರ್‌ಸಿಬಿ ಪರ ಬೆಥೆಲ್ ಇನಿಂಗ್ಸ್ ಆರಂಭಿಸಲಿದ್ದಾರೆ.
ಆರ್‌ಸಿಬಿ ಪ್ಲೇಯಿಂಗ್ 11 ಹೇಗಿರಲಿದೆ?
ಇವತ್ತು ಆರ್‌ಸಿಬಿ ತನ್ನ ಟೀಂನಲ್ಲಿ ಯಾವುದೇ ಚೇಂಜಸ್ ಮಾಡಲ್ಲ. 6+2+4 ಲೆಕ್ಕಾಚಾರದಲ್ಲಿ ಆಟಗಾರರನ್ನ ಕಣಕ್ಕಿಳಿಸಲಿದೆ. ಅಂದ್ರೆ ಆರುಬ್ಯಾಟರ್ಗಳು, ಇಬ್ಬರು ಆಲ್ರೌಂಡರ್ಗಳು ಮತ್ತು ನಾಲ್ವರು ಬೌಲರ್ಗಳೊಂದಿಗೆ ಆರ್‌ಸಿಬಿ ತಂಡವು ತನ್ನ ಪ್ಲೇಯಿಂಗ್ ಇಲೆವೆನ್ ರೂಪಿಸಲಿದ್ದಾರೆ.
ಇವತ್ತಿನ ಪಂದ್ಯದಲ್ಲಿ ಆರ್‌ಸಿಬಿ ಪರ ಪೂರ್ಣ ಪ್ರಮಾಣದ ಬ್ಯಾಟರ್ಗಳಾಗಿ ವಿರಾಟ್ ಕೊಹ್ಲಿ, ಜೇಕಬ್ ಬೆಥೆಲ್, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್, ಜಿತೇಶ್ ಶರ್ಮಾ ಹಾಗೂ ಟಿಮ್ ಡೇವಿಡ್ ಕಾಣಿಸಿಕೊಳ್ಳಲಿದ್ದಾರೆ. ಆಲ್ರೌಂಡರ್ಗಳಾಗಿ ಕೃನಾಲ್ ಪಾಂಡ್ಯ ಹಾಗೂ ರೊಮಾರಿಯೊ ಶೆಫರ್ಡ್ ಕಣಕ್ಕಿಳಿಯಲಿದ್ದಾರೆ. ಹಾಗೆಯೇ ಬೌಲರ್ಗಳಾಗಿ ಆರ್‌ಸಿಬಿ ಪರ ಜೋಶ್ ಹೇಝಲ್ವುಡ್, ಭುವನೇಶ್ವರ್ ಕುಮಾರ್, ರಾಸಿಖ್ ದಾರ್ ಕಾಣಿಸಿಕೊಳ್ಳುವುದು ಖಚಿತ. ಇವರೊಂದಿಗೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಸ್ಪಿನ್ನರ್ ಸುಯಶ್ ಶರ್ಮಾ ಕೂಡ ಸೇರ್ಪಡೆಯಾಗಲಿದ್ದಾರೆ.
ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಗುಜರಾತ್?
ಮತ್ತೊಂದೆಡೆ ಗುಜರಾತ್ 8 ಪಂದ್ಯಗಳ ಪೈಕಿ 4ರಲ್ಲಿ ಗೆದ್ದಿದೆ. ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಸೋತಿದ್ದ ತಂಡ ಈ ಬಾರಿ ತವರಿನಲ್ಲಿ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ. ಗುಜರಾತ್‌ನಲ್ಲಿ ಮೂವರನ್ನ ಬಿಟ್ರೆ ಬೇರೆ ಯಾರು ಮಿಂಚಿನ ಪ್ರದರ್ಶನ ನೀಡುತ್ತಿಲ್ಲ. ತಂಡ ಈ ಬಾರಿ ಗಳಿಸಿದ ರನ್‌ಗಳಲ್ಲಿ ಶೇ.70ರಷ್ಟನ್ನು ಸಾಯಿ ಸುದರ್ಶನ್, ನಾಯಕ ಶುಭ್‌ಮನ್ ಗಿಲ್ ಹಾಗೂ ಜೋಸ್ ಬಟ್ಲರ್ ಕಲೆಹಾಕಿದ್ದಾರೆ. ಇತರ ಬ್ಯಾಟರ್‌ಗಳಿಂದಲೂ ಕೊಡುಗೆ ಸಿಗದೇ ಇರುವುದು ತಂಡಕ್ಕೆ ಹಿನ್ನಡೆಯಾಗುತ್ತಿದೆ. ಬೌಲಿಂಗ್‌ನಲ್ಲಿ ರಬಾಡ, ಸಿರಾಜ್, ಪ್ರಸಿದ್ಧ್ ಕೃಷ್ಣ ಮಿಂಚುತ್ತಿದ್ದು, ಆರ್‌ಸಿಬಿ ಬ್ಯಾಟರ್‌ಗಳನ್ನು ಕಟ್ಟಿಹಾಕಲು ಎದುರು ನೋಡುತ್ತಿದ್ದಾರೆ.
KING V/s PRINCE ಫೈನಲ್ ಫೈಟ್!
ಇನ್ನು ಇಂದಿನ ಪಂದ್ಯ ಆರ್‌ಸಿಬಿ Vs GT ಅನ್ನೋದ್ದಕ್ಕಿಂತ ಹೆಚ್ಚಾಗಿ, KING V/s PRINCE ಅಂತಾನೇ ಹೇಳಬಹುದು. ಯಾಕಂದ್ರೆ ಕಳೆದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಮತ್ತು ಪ್ರಿನ್ಸ್ ಗಿಲ್ ನಡುವೆ ಕಳೆದ ಪಂದ್ಯದಲ್ಲಿ ತಮಾಷೆಯ ಮೂಮೆಂಟ್‌ಗಳು ನಡೆದಿದ್ವು.ಆ ವಿಡಿಯೋಗಳು ಸಖತ್ ವೈರಲ್ ಆಗಿತ್ತು. ಆ ಕ್ಷಣವನ್ನ ಫ್ಯಾನ್ಸ್ ಕೂಡ ಸಖತ್ ಎಂಜಾಯ್ ಮಾಡಿದ್ರು. ಈ ಸೀಸನ್‌ನಲ್ಲಿ ಕಿಂಗ್ ಮತ್ತು ಪ್ರಿನ್ಸ್ ನಡುವೆ ಬಹುತೇಕ ಇಂದಿನ ಪಂದ್ಯವೇ ಫೈನಲ್ ಫೈಟ್ ಅಂತ ಹೇಳಬಹುದು. ಯಾಕಂದ್ರೆ ಜಿಟಿ ಸದ್ಯಕ್ಕಂತೂ ಪ್ಲೇ ಆಫ್‌ಗೆ ಬರುವ ಲಕ್ಷಣ ಕಾಣ್ತಿಲ್ಲ. ಹೀಗಾಗಿ ಈ ಎರಡು ಪಂದ್ಯ ಸೆಮಿ ಫೈನಲ್ ಆಗಲಿ, ಪೈನಲ್‌ನಲ್ಲಿ ಆಗಲಿ ಮುಖಾಮುಖಿ ಆಗಲ್ಲ.. ಹೀಗಾಗಿ ಇಂದಿನ ಪಂದ್ಯ ಸಾಕಷ್ಟು ಕುತೂಹಲ ಕೆರಳಿಸಿದೆ.
ನಂ.1 ಪಟ್ಟಕ್ಕೆ ಪಂಜಾಬ್ ಜೊತೆ ಫೈಟ್
ಇನ್ನು ಈಗ ಪಾಯಿಂಟ್ಸ್ ಟೇಬಲ್‌ನಲ್ಲಿ ಪಂಜಾಬ್ ನಂ1 ಸ್ಥಾನದಲ್ಲಿದ್ರೆ, ಆರ್‌ಸಿಬಿ ನಂ.2 ಸ್ಥಾನದಲ್ಲದೆ. ಇವತ್ತು ಆರ್‌ಸಿಬಿ GT ವಿರುದ್ಧ ಗೆದ್ರೆ ಒಟ್ಟು 14 ಪಾಯಿಂಟ್ಸ್ ಗಳಿಸಿ ನಂ.1 ಸ್ಥಾನಕ್ಕೆ ಹೋಗುತ್ತೆ.. ರನ್ ರೇಟ್ ವಿಷ್ಯಕ್ಕೆ ಬಂದ್ರೆ ಆರ್‌ಸಿಬಿ ರನ್ ರೇಟ್ ಪಂಜಾಬ್‌ಗಿಂತ ಜಾಸ್ತಿ ಇದೆ. ಪಂಜಾಬ್ ಮುಂದಿನ ಪಂದ್ಯದಲ್ಲ ಸೋತು, ಆರ್‌ಸಿಬಿ ವಿರುದ್ಧ ಸೋತ್ರೆ, ನಮ್ಮ ಆರ್‌ಸಿಬಿನೇ ಪಾಯಿಂಟ್ಸ್ ಟೇಬಲ್‌ನಲ್ಲ ಕಿಂಗ್ ಆಗಿ ಇರಲಿದೆ. ಆರ್‌ಸಿಬಿ ಹೇಗಾದ್ರೂ ಮಾಡಿ ಒಂದು ಅಥವಾ ಎರಡನೇ ಸ್ಥಾನ ಉಳಿಸಿಕೊಂಡ್ರೆ ಪೈನಲ್‌ಗೆ ಪಕ್ಕಾ ಬರುತ್ತೆ.. ಹೀಗಾಗಿ ಮುಂದಿನ ಪಂದ್ಯಗಳನ್ನ ಆರ್‌ಸಿಬಿ ಇನ್ನೂ ಚೆನ್ನಾಗಿ ಆಡಬೇಕಿದೆ..
RCB ಪ್ಲೇಯಿಂಗ್ 11
ವಿರಾಟ್ ಕೊಹ್ಲಿ
ಜೇಕಬ್ ಬೆಥೆಲ್
ದೇವದತ್ ಪಡಿಕ್ಕಲ್
ರಜತ್ ಪಾಟಿದಾರ್
ಜಿತೇಶ್ ಶರ್ಮಾ
ಟಿಮ್ ಡೇವಿಡ್
ಕೃನಾಲ್ ಪಾಂಡ್ಯ
ರೊಮಾರಿಯೊ ಶೆಫರ್ಡ್
ಜೋಶ್ ಹೇಝಲ್ವುಡ್
ಭುವನೇಶ್ವರ್ ಕುಮಾರ್
ರಾಸಿಖ್ ದಾರ್
ಸುಯಶ್ ಶರ್ಮಾ (ಇಂಪ್ಯಾಕ್ಟ್ ಪ್ಲೇಯರ್)

ನೋಡಿರಿ

