ಸಿಂಹವಾಹಿನಿ ಅಲಂಕಾರದಿಂದ ಕಂಗೊಳಿಸಿದ ನಾಡದೇವತೆ – ಆಷಾಢದ 4ನೇ ಶುಕ್ರವಾರ ಚಾಮುಂಡಿ ಬೆಟ್ಟದಲ್ಲಿ ಭಕ್ತಸಾಗರ!

ಆಷಾಢ ಮಾಸದ ಹಿನ್ನೆಲೆ ನಾಡಿನ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆಯಲು ರಾಜ್ಯ ಸೇರಿದಂತೆ ದೇಶದ ಇತರೆ ಭಾಗಗಳಿಂದಲೂ ಸಹ ಭಕ್ತರು ಮೈಸೂರಿಗೆ ಆಗಮಿಸುತ್ತಾರೆ. ಆಷಾಢ ಮಾಸದ ನಾಲ್ಕನೇ ಶುಕ್ರವಾರದ ಇಂದು ನಾಡದೇವತೆ ಚಾಮುಂಡೇಶ್ವರಿಗೆ ಸಿಂಹವಾಹಿನಿ ಅಲಂಕಾರದಿಂದ ಕಂಗೊಳಿಸುತ್ತಿದ್ದಾಳೆ.
ಇದನ್ನೂ ಓದಿ: ಟೀ ಜೊತೆ ಈ ತಿನಿಸು ಸೇವಿಸ್ತೀರಾ? – ಎಚ್ಚರ.. ತೂಕ ಹೆಚ್ಚಳದ ಜೊತೆ ಈ ಎಲ್ಲಾ ಸಮಸ್ಯೆ ಬರುತ್ತೆ!
ಆಷಾಢ ಶುಕ್ರವಾರದ ಹಿನ್ನೆಲೆ ದೇವಿಯನ್ನ ವಿವಿಧ ಬಗೆಯ ಹೂವು ಹಾಗೂ ನವಿಲಿನಗರಿ ಹಾರದ ಅಲಂಕಾರ ಮಾಡಲಾಗಿದೆ. . ದೇವಾಲಯದ ಆವರಣಕ್ಕೆ ವಿವಿಧ ಪುಷ್ಪಗಳಿಂದ ಅಲಂಕಾರ ಮಾಡಲಾಗಿದೆ. ಮುಂಜಾನೆ 4:30ರಿಂದ ತಾಯಿಗೆ ವಿಶೇಷ ಪೂಜೆ ನೆರವೇರುತ್ತಿದೆ.
ತಾಯಿ ದರ್ಶನ ಕಣ್ತುಂಬಿಕೊಳ್ಳಲು ಮುಂಜಾನೆ 5 ಗಂಟೆಯಿಂದಲೇ ಮೆಟ್ಟಿಲು ಮಾರ್ಗವಾಗಿ ಬರುತ್ತಿರುವ ಭಕ್ತರು ದರ್ಶನ ಪಡೆದು ದೇವಿ ಕೃಪೆಗೆ ಪಾತ್ರರಾಗುತ್ತಿದ್ದಾರೆಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ಭಕ್ತರು ತಾಯಿಯ ದರ್ಶನ ಪಡೆಯುತ್ತಿದ್ದಾರೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದರಿಂದ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳನ್ನು ನಿಷೇಧಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ತೆರಳಲು ಲಲಿತ ಮಹಲ್ ಪಾರ್ಕಿಂಗ್ ಸ್ಥಳದಿಂದ ಶುಕ್ರವಾರ (ಇಂದು) ಬೆಳಗ್ಗೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಮೈಸೂರು ನಗರ ಸಂಚಾರ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಡಿರಿ

