ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಜೇಬು ಗಟ್ಟಿ ಇರಬೇಕು! – 25 ಲಕ್ಷ ರೂ ಡೆಪಾಸಿಟ್‌, 2.5 ಲಕ್ಷ ರೆಂಟ್‌!

ಬೆಂಗಳೂರಿನಲ್ಲಿ ಮನೆ ಬಾಡಿಗೆ ಪಡೆಯಲು ಜೇಬು ಗಟ್ಟಿ ಇರಬೇಕು! – 25 ಲಕ್ಷ ರೂ ಡೆಪಾಸಿಟ್‌, 2.5 ಲಕ್ಷ ರೆಂಟ್‌!

ವಿಶ್ವದ ಅತೀ ವೇಗವಾಗಿ ಬೆಳೆಯುತ್ತಿರುವ ನಗರ ಬೆಂಗಳೂರು. ಇಲ್ಲಿ ಬಂದವರಿಗೆ ಒಂದು ಉದ್ಯೋಗ, ವಿದ್ಯಾರ್ಥಿಗಳಿಗೆ ಶಿಕ್ಷಣ, ವ್ಯಾಪಾರ ವಹಿವಾಟಿಗೆ ಬರವಿಲ್ಲ. ಹೀಗಾಗಿ ದೇಶ ಹಾಗೂ ವಿಶ್ವದ ಹಲವು ರಾಷ್ಟ್ರಗಳಿಂದ ಬೆಂಗಳೂರಿಗೆ ಆಗಮಿಸುವವರ ಸಂಖ್ಯೆ ಜಾಸ್ತಿ. ಹೀಗೆ ಬಂದವರು ಇಲ್ಲಿ ಮನೆ ಖರೀದಿಸುತ್ತಾರೆ.. ಇಲ್ಲದಿದ್ದರೆ ಬಾಡಿಗೆ ಮನೆ ಪಡೆಯುತ್ತಾರೆ.. ಇಲ್ಲಾ ಪಿಜಿ, ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡು ಬದುಕು ಕಟ್ಟಿಕೊಳ್ಳುತ್ತಾರೆ. ನಗರದಲ್ಲಿ ಸುಲಭವಾಗಿ ಮನೆ ಬಾಡಿಗೆಗೆ ಸಿಗುವುದಿಲ್ಲ. ಕಾರಣ ವಿಳಾಸ, ಕುಲ ಗೋತ್ರ, ವೆಜ್ ನಾನ್ ವೆಜ್ ಎಲ್ಲಾ ಮಾಹಿತಿಗಳು ಮನೆ ಮಾಲೀಕರಿಗೆ ಒಕೆಯಾಗಬೇಕು. ಬಳಿಕ ಮನೆ ಬಾಡಿಗೆಗೆ ಕೊಡುವ ಬಗ್ಗೆ ಯೋಚಿಸುತ್ತಾರೆ. ಇನ್ನು ಹೇಗಾದರೂ ಮಾಡಿ ಇವೆಲ್ಲವೂ ಮಾಲೀಕ ಕೇಳುವ ಬೇಡಿಕೆಯಂತೆ ಇದ್ದರೆ, ಮತ್ತೆ ಬಾಡಿಗೆ ಹಾಗೂ ಡೆಪಾಸಿಟ್ ಟೆನ್ಶನ್. ಇದೀಗ ವರ್ಕ್ ಫ್ರಮ್ ಹೋಮ್ ಅಂತ್ಯಗೊಂಡಿರುವ ಕಾರಣ ಬೆಂಗಳೂರ ಮನೆ ಮಾಲೀಕರು ಬಾಡಿಗೆ ಹೆಚ್ಚಿಸಿದ್ದಾರೆ. ಇದೀಗ ಬೆಂಗಳೂರ ಮನೆ ಬಾಡಿಗೆ ಮತ್ತೊಂದು ಕಹಾನಿ ಬಹಿರಂಗವಾಗಿದೆ.

ಇದನ್ನೂ ಓದಿ: ಮದುವೆ ದಿನವೇ ನವದಂಪತಿಯ ರಿಸ್ಕ್..! – ‘ಸ್ಕೈಡೈವಿಂಗ್’ ಮೂಲಕ ಡಿಫರೆಂಟ್ ಮ್ಯಾರೇಜ್

ಪಿಜಿಗಳ ಬಾಡಿಗೆ ದುಬಾರಿ.. ಉತ್ತಮ ಗುಣಮಟ್ಟದ ಆಹಾರ ಸಿಗುವುದಿಲ್ಲ ಎಂದು ಅನೇಕರು ಬಾಡಿಗೆ ಮನೆಗಳತ್ತ ಮುಖ ಮಾಡುತ್ತಾರೆ. ಆದರೆ ಇದೀಗ ಮನೆ ಮಾಲೀಕರು ವಿಚಿತ್ರ ರೂಲ್ಸ್‌ ಮಧ್ಯೆ ಮನೆ ಬಾಡಿಗೆಯನ್ನೂ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಹಾಗೂ ಡೆಪಾಸಿಟ್ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಎಂದರೆ ಊಹಿಸಿಕೊಳ್ಳಲು ಅಸಾಧ್ಯ. ಹೆಚ್ಎಸ್ಆರ್ ಲೇಔಟ್‌ನಲ್ಲಿನ ಮನೆಯೊಂದರ ಬಾಡಿಗೆ ಹಣ ಎಷ್ಟು ಎಂದು ಕೇಳಿ ಜನರು ದಂಗಾಗಿ ಹೋಗಿದ್ದಾರೆ.

ತೇಜಸ್ವಿ ಶ್ರೀವಾತ್ಸವ್ ಅನ್ನೋ ವ್ಯಕ್ತಿ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದಾರೆ.  ತೇಜಸ್ವಿ ಶ್ರೀವಾತ್ಸವ್ ಅವರು ಮನೆ ಬಾಡಿಗೆ, ಮಾರಾಟ ಪ್ಲಾಟ್‌ಫಾರ್ಮ್ ಮೂಲಕ ಹುಡುಕಾಟವನ್ನು ನಡೆಸಿದ್ದಾರೆ. ಈ ವೇಳೆ ನೋ ಬ್ರೋಕರ್ ವೆಬ್‌ಸೈಟ್‌ನಲ್ಲಿ ಮನೆಯೊಂದು ಪತ್ತೆಯಾಗಿದೆ. ಈ ಮನೆಯ ಬಾಡಿಗೆ ಹಾಗೂ ಡೆಪಾಸಿಟ್ ನೋಡಿ ದಂಗಾಗಿದ್ದಾರೆ.

ಹೆಚ್‌ಎಸ್ಆರ್ ಲೇಔಟ್‌ನಲ್ಲಿನ ಮನೆಯೊಂದು ವೆಬ್‌ಸೈಟ್‌ ಲಿಸ್ಟ್‌ನಲ್ಲಿ ಹಾಕಲಾಗಿತ್ತು. ಇದು 4 ಬಿಹೆಚ್‌ಕೆ ಮನೆ. ಸರಿಸುಮಾರು 5,000 ಚದರ ಅಡಿ ವಿಸ್ತೀರ್ಣ. ಇವೆಲ್ಲಾ ಒಕೆ, ಮನೆ ಬಾಡಿಗೆ ಹಾಗೂ ಅಡ್ವಾನ್ಸ್ ನೋಡಿ ತೇಜಸ್ವಿ ಬೆಚ್ಚಿ ಬಿದ್ದಿದ್ದಾರೆ. ಈ ಮನೆಗೆ 25 ಲಕ್ಷ ರೂಪಾಯಿ ಡೆಪಾಸಿಟ್. ಇನ್ನು ಪ್ರತಿ ತಿಂಗಳ ಬಾಡಿಗೆ 2.5 ಲಕ್ಷ ರೂಪಾಯಿ ಎಂದು ಇದರಲ್ಲಿ ನಮೂದಿಸಲಾಗಿತ್ತು. ಈ ಮನೆಯನ್ನು ಬಾಡಿಗೆ ಪಡೆಯಬೇಕಾ ಅಥವಾ ಖರೀದಿಸಬೇಕಾ ಎಂದು ಹಲವರು ಪ್ರಶ್ನಿಸಿದ್ದಾರೆ.

ಈ ಮನೆಯ ಜಾಹೀರಾತು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತೇಜಸ್ವಿ ಶ್ರೀವಾತ್ಸವ್ ತಮ್ಮ ಟ್ವಿಟರ್ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಸಾಲದ ಜೊತೆ ಮತ್ತೊಂದು ಆಯ್ಕೆಯನ್ನು ನೀಡಬೇಕು. ಕಿಡ್ನಿ ಡೋನೇಷನ್‌ಗೆ ಅವಕಾಶ ನೀಡಬೇಕು ಎಂದು ಬರೆದುಕೊಂಡಿದ್ದಾರೆ.

v

ಈ ಪೋಸ್ಟ್ ಹಾಕಿದ ಬೆನ್ನಲ್ಲೇ ಹಲವು ಬೆಂಗಳೂರಿಗರು ಪ್ರತಿಕ್ರಿಯೆ ನೀಡಿದ್ದಾರೆ. 25 ಲಕ್ಷ ರೂಪಾಯಿ ಡೆಪಾಸಿಟ್ ಹಾಗೂ ಪ್ರತಿ ತಿಂಗಳು 2.5 ಲಕ್ಷ ರೂಪಾಯಿ ಬಾಡಿಗೆ ನೀಡುವ ಬದಲು, ಇದೇ ಮೊತ್ತಕ್ಕೆ ಬೆಂಗಳೂರಲ್ಲಿ ಮನೆ ಖರೀದಿಸಲು ಸಾಧ್ಯವಿದೆ. 25 ಲಕ್ಷ ರೂಪಾಯಿ ಅಡ್ವಾನ್ಸ್ ಹಣ ನೀಡಿ, ಉಳಿದ ಹಣ ಸಾಲ ಮಾಡಿದರೂ ತಿಂಗಳ ಕಂತು 1 ಲಕ್ಷ ರೂಪಾಯಿ ದಾಟುವುದಿಲ್ಲ ಎಂದು ಸೂಚಿಸಿದ್ದಾರೆ. ಮತ್ತೊಬ್ಬ ಪ್ರತಿಕ್ರಿಯೆ ನೀಡಿದ್ದು, 25 ಲಕ್ಷರೂಪಾಯಿಗೆ ದಂಗಾಗಬೇಡಿ, 30 ಲಕ್ಷ ರೂಪಾಯಿ ಡೆಪಾಸಿಟ್ ಹಣ ಕೇಳುತ್ತಿರುವ ಹಲವು ಮನೆಗಳಿವೆ. ಇನ್ನು ಇದರ ಬಾಡಿಗೆ 3 ಲಕ್ಷ ರೂಪಾಯಿ ಮೇಲಿದೆ. ಹೀಗಾಗಿ ಬೆಂಗಳೂರಲ್ಲಿ ಮನೆ ಬಾಡಿಗೆ ಸುಲಭದ ಮಾತಲ್ಲ. ಮನೆ ಮಾಲೀಕರ ನೋಟದಲ್ಲಿ ಬೆಂಗಳೂರಿನಲ್ಲಿರುವ ಎಲ್ಲರೂ ಕೋಟಿ ಕೋಟಿ ಆದಾಯ ಹೊಂದಿದವರಾಗೆ ಕಾಣುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.

suddiyaana