ಊಟಕ್ಕಲ್ಲ ಈ‌ ಮೆನುವಿನ ಬೆಲೆ ಬರೋಬ್ಬರಿ 84.5 ಲಕ್ಷ ರೂಪಾಯಿ – ಟೈಟಾನಿಕ್ ಹಡಗಿನಲ್ಲಿ ಏನೆಲ್ಲಾ ತಿಂಡಿ‌ ತಿನಿಸಿನ ವಿವರವಿತ್ತು ಗೊತ್ತಾ?

ಊಟಕ್ಕಲ್ಲ ಈ‌ ಮೆನುವಿನ ಬೆಲೆ ಬರೋಬ್ಬರಿ 84.5 ಲಕ್ಷ ರೂಪಾಯಿ – ಟೈಟಾನಿಕ್ ಹಡಗಿನಲ್ಲಿ ಏನೆಲ್ಲಾ ತಿಂಡಿ‌ ತಿನಿಸಿನ ವಿವರವಿತ್ತು ಗೊತ್ತಾ?

ಟೈಟಾನಿಕ್ ಹಡಗಿನ ಬಗ್ಗೆ ಜನರಿಗಿರುವ ಆಸಕ್ತಿ ಅಷ್ಟಿಷ್ಟಲ್ಲ. ಸಿನಿಮಾದಿಂದ‌ ಹಿಡಿದು ಟೂರಿಸಂವರೆಗೆ ಟೈಟಾನಿಕ್ ಹಡಗು ‌ಜನರನ್ನು ಆಕರ್ಷಿಸುತ್ತಲೇ ಇದೆ. ಇದೀಗ ಇನ್ನೊಂದು ದಾಖಲೆಯನ್ನು ಟೈಟಾನಿಕ್ ಬರೆದಿದೆ.

ಐತಿಹಾಸಿಕ ಟೈಟಾನಿಕ್ ಹಡಗು ಮುಳುಗಡೆಯಾಗುವ ಮೊದಲು ತನ್ನ ಪ್ರಥಮ ದರ್ಜೆ ಪ್ರಯಾಣಿಕರಿಗೆ ವಿತರಿಸಿದ್ದ ರಾತ್ರಿ ಭೋಜನದ ಮೆನು ಕಾರ್ಡ್‌ ಹರಾಜಿನಲ್ಲಿ 84.5 ಲಕ್ಷ ರು.ಗೆ ಮಾರಾಟವಾಗಿದೆ. ಟೈಟಾನಿಕ್‌ ಹಡಗಿನ ಪಳೆಯುಳಿಕೆಗಳನ್ನು ಹೆನ್ರಿ ಆಲ್ಡ್ರಿಡ್ಜ್ ವಿಲ್ಟ್‌ಶೈರ್‌ ಎಂಬ ಸಂಸ್ಥೆಯ ಮೂಲಕ ಹರಾಜಿಗೆ ಹಾಕಿದ್ದು, ಮೆನು ಕಾರ್ಡ್‌ ಸೇರಿದಂತೆ ಅನೇಕ ವಸ್ತುಗಳು ಮಾರಾಟವಾಗಿವೆ. ಈ ಸಂಸ್ಥೆಗೆ ಸ್ಟೀಫೆನ್ಸನ್‌ ಡೋಮಿನಿಯನ್‌ ಎಂಬ ಇತಿಹಾಸತಜ್ಞನ ಬಳಿ 1960ರ ದಶಕದ ಚಿತ್ರಗಳ ಆಲ್ಬಂನಲ್ಲಿದ್ದ ಈ ಮೆನು ಕಾರ್ಡ್‌ ಸಿಕ್ಕಿತ್ತು. ಅದು ನೀರಿನಿಂದ ತೊಯ್ದ ಸ್ಥಿತಿಯಲ್ಲಿತ್ತು ಹಾಗೂ ಶ್ವೇತ ನಕ್ಷತ್ರದ ಚಿಹ್ನೆಯನ್ನು ಹೊಂದಿತ್ತು ಎಂದು ಗಾರ್ಡಿಯನ್‌ ಪತ್ರಿಕೆ ವರದಿ ಮಾಡಿದೆ.

ಇದನ್ನೂ ಓದಿ: ಒಂದೇ ಮಹಿಳೆಗೆ ಎರಡು‌ ಗರ್ಭಕೋಶ, ಎರಡು ಭ್ರೂಣ – ಗರ್ಭಿಣಿಯನ್ನು ಪರೀಕ್ಷಿಸಿದ ವೈದ್ಯರಿಗೆ ಅಚ್ಚರಿಯಾಗಿದ್ದೇಕೆ?

ಇದರಲ್ಲಿ ಏ.12 ರಂದು ಸರ್ವ್‌ ಮಾಡಲಾದ ಆಹಾರಗಳ ಪಟ್ಟಿಯಿದ್ದು, ಮೊಟ್ಟೆ, ಜಾಮ್‌, ಚಿಕನ್‌, ದನದ ಮಾಂಸ, ಅನ್ನ ಮುಂತಾದ ಆಹಾರಗಳ ಹೆಸರು ದಾಖಲಾಗಿದೆ. ಆರ್‌ಎಂಎಸ್‌ ಟೈಟಾನಿಕ್‌ ಹಡಗು ಏ.14, 1912ರಂದು ತನ್ನ ಮೊದಲ ಸಮುದ್ರಯಾನದಲ್ಲಿ ಅಟ್ಲಾಂಟಿಕ್‌ ಸಾಗರದಲ್ಲಿ ಮುಳುಗಡೆಯಾಗಿತ್ತು. ಆಗ ತೊಯ್ದ ಸ್ಥಿತಿಯಲ್ಲೇ ಈ ಮೆನು ಕಾರ್ಡ್‌ ಲಭಿಸಿತ್ತು.

ಊಟ ತಿಂಡಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡೋದೇನೋ‌ ನೋಡ್ತೀವಿ. ಆದರೆ ಇಲ್ಲಿ ಕೇವಲ ಟೈಟಾನಿಕ್ ಹಡಗಿನ ಮೆನು ಕಾರ್ಡ್ ಎನ್ನುವ ಕಾರಣಕ್ಕೆ ಅದಕ್ಕೆ ಲಕ್ಷಾಂತರ ರೂಪಾಯಿಗಳ‌ ಮೌಲ್ಯ ಬಂದಿತ್ತು. ಟೈಟಾನಿಕ್ ಹಡಗಿನ ಅವಶೇಷ ಎನ್ನುವ ಕಾರಣದಿಂದಲೇ 84.5 ಲಕ್ಷ ರೂಪಾಯಿಗಳಿಗೆ ಈ ಮೆನು ಹರಾಜಾಗಿರುವುದು ಅಚ್ಚರಿ‌ ಮೂಡಿಸಿದೆ.

Shwetha M