ಟೈಟಾನಿಕ್‌ ನೋಡಲು ಹೋದ ಜಲಾಂತರ್ಗಾಮಿ ಸ್ಪೋಟ – ಬಿಲಿಯನೇರ್‌ಗಳ ದುರಂತ ಅಂತ್ಯ

ಟೈಟಾನಿಕ್‌ ನೋಡಲು ಹೋದ ಜಲಾಂತರ್ಗಾಮಿ ಸ್ಪೋಟ – ಬಿಲಿಯನೇರ್‌ಗಳ ದುರಂತ ಅಂತ್ಯ

ಕಳೆದ ಐದು ದಿನಗಳ ಹಿಂದೆ ನಾಪತ್ತೆಯಾಗಿದ್ದ ಟೈಟಾನಿಕ್‌ ಹಡಗನ್ನು ನೋಡಲು ಹೋದ ಜಲಾಂತರ್ಗಾಮಿ ನೌಕೆಯ ಅವಶೇಷಗಳು ಪತ್ತೆಯಾಗಿವೆ. ಜಲಾಂತರ್ಗಾಮಿ ಅಪಘಾತಕ್ಕೀಡಾಗಿ ಸ್ಪೋಟಗೊಂಡಿರುವ ಸಾಧ್ಯತೆ ಇದೆ ಎಂದು ಅಮೆರಿಕ ರೀರ್​ ಅಡ್ಮಿರಲ್​ ಜಾನ್​ ಮೌಗರ್ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಖುಷಿ ಸುದ್ದಿ! – ಸಿಲಿಕಾನ್‌ ಸಿಟಿಯಲ್ಲಿ ಮತ್ತೆ 3 ಕಡೆಗಳಲ್ಲಿ ‘ನಮ್ಮ ಮೆಟ್ರೋ’ ಮಾರ್ಗ?

ಒಂದು ಶತಮಾನಕ್ಕೂ ಹಿಂದೆ ದುರಂತಕ್ಕೀಡಾದ ಟೈಟಾನಿಕ್​ ಹಡಗಿನ ಅವಶೇಷ ವೀಕ್ಷಣೆಗೆಂದು ಐವರು ಬಿಲಿಯನೇರ್‌ಗಳು ತೆರಳಿದ್ದರು. ಜೂನ್‌ 18 ರಂದು ಟೈಟಾನಿಕ್ ಹಡಗು ಇರುವ ಕಡೆಗೆ ಧುಮುಕಲು ಪ್ರಾರಂಭಿಸಿದ ಸುಮಾರು 1 ಗಂಟೆ 45 ನಿಮಿಷಗಳ ನಂತರ ಟೈಟಾನ್​ ನೌಕೆ ತನ್ನ ಎಲ್ಲ ಸಂಪರ್ಕವನ್ನು ಕಡಿದುಕೊಂಡಿತ್ತು. ಇದೀಗ ಜಲಾಂತರ್ಗಾಮಿ ಅಪಘಾತಕ್ಕೀಡಾಗಿ ಸ್ಪೋಟಗೊಂಡಿದ್ದು, ಇದೀಗ ಐವರು ದುರಂತ ಅಂತ್ಯ ಕಂಡಿದ್ದಾರೆ. ಈ ಜಲಾಂತರ್ಗಾಮಿ ನೌಕೆಯಲ್ಲಿ  ಓರ್ವ ಪೈಲಟ್, ನಾಲ್ವರು ಮಹಾಸಾಗರದಲ್ಲಿ ಜಲ ಸಮಾಧಿಯಾಗಿದ್ದಾರೆ. ಬ್ರಿಟನ್​ನ ಹಮೀಶ್ ಹಾರ್ಡಿಂಗ್, ಸ್ಟೋಕ್ಟನ್ ರಶ್, ಪಾಲ್ ಹೆನ್ರಿ, ಪಾಕಿಸ್ತಾನದ ಉದ್ಯಮಿ ಶಹಜಾದ್ ದಾವೂದ್ ಹಾಗೂ ಪುತ್ರ ಸುಲೇಮಾನ್ ಮೃತಪಟ್ಟಿದ್ದಾರೆ.

ಈ ಬಗ್ಗೆ ಅಮೆರಿಕ ರೀರ್​ ಅಡ್ಮಿರಲ್​ ಜಾನ್​ ಮೌಗರ್​ ಅವರು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಯುಎಸ್​ ಕರಾವಳಿ ಪಡೆ ಮತ್ತು ಇಡೀ ಕಾರ್ಯಾಚರಣೆಯ ತಂಡದ ಪರವಾಗಿ ಮೃತರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಮೃತಪಟ್ಟಿರುವ ಸುದ್ದಿಯನ್ನು ಈಗಾಗಲೇ ಅವರ ಕುಟುಂಬಗಳಿಗೆ ತಿಳಿಸಿರುವುದಾಗಿ ಹೇಳಿದ್ದಾರೆ.

suddiyaana