ಮುಗಿಯುತ್ತಾ ಬಂದಿದೆ ಆಕ್ಸಿಜನ್, ಪತ್ತೆಯಾಗಲಿಲ್ಲ ಟೈಟಾನಿಕ್ ಸಬ್‌ಮರೀನ್ – ಅಟ್ಲಾಂಟಿಕ್ ಮಹಾಸಾಗರದಲ್ಲಿ ತೀವ್ರಗೊಂಡ ಕಾರ್ಯಾಚರಣೆ

ಮುಗಿಯುತ್ತಾ ಬಂದಿದೆ ಆಕ್ಸಿಜನ್, ಪತ್ತೆಯಾಗಲಿಲ್ಲ ಟೈಟಾನಿಕ್ ಸಬ್‌ಮರೀನ್ – ಅಟ್ಲಾಂಟಿಕ್ ಮಹಾಸಾಗರದಲ್ಲಿ ತೀವ್ರಗೊಂಡ ಕಾರ್ಯಾಚರಣೆ

121 ವರ್ಷಗಳ ಹಿಂದೆ ಉತ್ತರ ಅಟ್ಲಾಂಟಿಕ್​​ ಸಮುದ್ರದಲ್ಲಿ ಮುಳುಗಿರುವ ಟೈಟಾನಿಕ್ ಹಡಗಿನ ಅವಶೇಷದ ಸಂಶೋಧನೆಗೆ ಹೊರಟಿದ್ದ ಐದು ಮಂದಿಯನ್ನ ಹೊತ್ತ ಸಬ್​ಮರೀನ್​ ನಾಪತ್ತೆಯಾಗಿತ್ತು. ಇದರ ಹುಡುಕಾಟ ತೀವ್ರಗೊಂಡಿದೆ. ಡೈವರ್​​ಗಳ ತಂಡ ಸಬ್​ಮರೀನ್​ಗಾಗಿ ಸಮುದ್ರದ ತಳಭಾಗದಲ್ಲಿ ಹುಡುಕಾಟ ನಡೆಸುತ್ತಿದೆ. ಈ ನಡುವೆ, ನಾಪತ್ತೆಯಾದವರು ಸದ್ದು ಮಾಡುತ್ತಿರುವ ಶಬ್ಧ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವವರಿಗೆ ಕೇಳಿಸಿದೆ. ಸಬ್​​ಮರೀನ್​ನ ಒಳಗಿರುವ ವ್ಯಕ್ತಿಗಳೇ ಸಬ್​ಮರೀನ್​ಗೆ ಬಡಿಯುತ್ತಿರಬಹುದು ಅಂತಾ ಹೇಳಲಾಗಿದ್ದು, ಶಬ್ದ ಕೇಳಿಸುತ್ತಿರುವ ಕಡೆಗೆ ಡೈವರ್​​ ಮುನ್ನುಗ್ಗುತ್ತಿದ್ದಾರೆ. ಇನ್ನೊಂದು ಆತಂಕಕಾರಿ ವಿಚಾರ ಏನೆಂದರೆ, ನಾಪತ್ತೆಯಾಗಿರುವ ಟೈಟಾನಿಕ್ ಸಬ್​ಮರೀನ್ ನಲ್ಲಿ ಈಗ ಕೇವಲ ನಾಲ್ಕು ಗಂಟೆಗಳಿಗಿಂತಲೂ ಕಡಿಮೆ ಹೊತ್ತು ಬಳಸಲು ಸಾಕಾಗುವಷ್ಟು ಮಾತ್ರ ಆಮ್ಲಜನಕ ಬಾಕಿ ಉಳಿದಿದೆ. ಇತ್ತೀಚಿನ ಮಾಹಿತಿ ಪ್ರಕಾರ ಮುಳುಗಡೆಯಾಗಿರುವ ಜಲಾಂತರ್ಗಾಮಿ ಟೈಟಾನಿಕ್‌ನಲ್ಲಿ  ಸಂಜೆ 7:15 ವರೆಗೆ ಸಾಕಾಗುವಷ್ಟು ಆಮ್ಲಜನಕ ಉಳಿದಿದೆ.

ಇದನ್ನೂ ಓದಿ:  ಟೈಟಾನಿಕ್ ಅವಶೇಷ ನೋಡಲು ತೆರಳಿದ್ದ ಜಲಾಂತರ್ಗಾಮಿ ನೌಕೆ ನಾಪತ್ತೆ – ರಕ್ಷಣಾ ತಂಡಗಳಿಗೆ ಸಿಕ್ಕಿತು ಮಹತ್ವದ ಸುಳಿವು!

ಜಲಾಂತರ್ಗಾಮಿ ಟೈಟಾನಿಕ್‌ ಭಾನುವಾರ ಮಧ್ಯಾಹ್ನ ಕಾಣೆಯಾಗಿದ್ದು, ಗರಿಷ್ಠ 96 ಗಂಟೆಗಳ ಕಾಲ ತುರ್ತು ಆಮ್ಲಜನಕವನ್ನು ಹೊಂದಿದೆ. ಅಟ್ಲಾಂಟಿಕ್ ಮಹಾಸಾಗರದಲ್ಲಿ ಜಲಾಂತರ್ಗಾಮಿಗಾಗಿ ಹುಡುಕುತ್ತಿರುವ ಕೆನಡಾದ ವಿಮಾನವು ಬಡಿಯುತ್ತಿರುವಂಥಾ ಸದ್ದು ಪತ್ತೆ ಹಚ್ಚಿದೆ. ಆದರೆ, ಅಮೆರಿಕ ಕರಾವಳಿ ರಕ್ಷಣಾ ಪಡೆ ಶಬ್ದದ ಮೂಲ ತಿಳಿದಿಲ್ಲ ಎಂದಿದ್ದಾರೆ. ಜಲಾಂತರ್ಗಾಮಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ಮಂಗಳವಾರ ಪ್ರತಿ 30 ನಿಮಿಷಗಳಿಗೊಮ್ಮೆ ಮತ್ತು ಬುಧವಾರ ನಾಲ್ಕು ಗಂಟೆಗಳ ನಂತರ ಬಡಿಯುವ ಶಬ್ದಗಳನ್ನು ಪತ್ತೆಹಚ್ಚಿದರು. ಗುರುವಾರ ಯುಕೆ ಸಮಯ ಮಧ್ಯಾಹ್ನ 1 ಗಂಟೆಗೆ ಆಮ್ಲಜನಕದ ಪೂರೈಕೆ ಮುಗಿದಿದೆ. ಹುಡುಕಾಟಕ್ಕೆ ಸಹಾಯ ಮಾಡಲು ಇಂದು ಬೆಳಿಗ್ಗೆ ಹೆಚ್ಚುವರಿ ಬೆಂಬಲ ನೀಡಲಾಗಿದೆ ಎಂದು ಅಮೆರಿಕ ಕೋಸ್ಟ್ ಗಾರ್ಡ್ ಹೇಳಿದೆ.

ನಾಪತ್ತೆಯಾಗಿರುವ ಸಬ್ ಮೆರಿನ್‌ನಲ್ಲಿ ಸಿಇಒ ಮತ್ತು ಓಷನ್‌ಗೇಟ್ ಎಕ್ಸ್ಪೆಡಿಶನ್ಸ್ ಸ್ಟಾಕ್ಟನ್ ರಶ್ ಸಂಸ್ಥಾಪಕ, ಬ್ರಿಟಿಷ್ ಬಿಲಿಯನೇರ್ ಪರಿಶೋಧಕ ಹಮೀಶ್ ಹಾರ್ಡಿಂಗ್, ಹೆಸರಾಂತ ಫ್ರೆಂಚ್ ಡೈವರ್ ಪಾಲ್-ಹೆನ್ರಿ ನಾರ್ಜಿಯೊಲೆಟ್ ಮತ್ತು ಪಾಕಿಸ್ತಾನಿ ಉದ್ಯಮಿ ಶಹಜಾದಾ ದಾವೂದ್ ಮತ್ತು ಅವರ 19 ವರ್ಷದ ಮಗ ಸುಲೇಮಾನ್ ದಾವೂದ್ ಇದ್ದಾರೆ. 12,500 ಅಡಿ ಆಳದಲ್ಲಿರುವ ಟೈಟಾನಿಕ್ ಅವಶೇಷಗಳನ್ನು ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಪ್ರವಾಸಿ ಜಲಾಂತರ್ಗಾಮಿ ಭಾನುವಾರ ಬೆಳಿಗ್ಗೆ ಮುಳುಗಡೆಯಾಗಿತ್ತು.

suddiyaana