ಹೊಸ ವರ್ಷಕ್ಕೆ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಒಳ್ಳೇ ಕಲೆಕ್ಷನ್

ಹೊಸ ವರ್ಷಕ್ಕೆ ತಿರುಪತಿ ತಿಮ್ಮಪ್ಪನ ಹುಂಡಿಯಲ್ಲಿ ಒಳ್ಳೇ ಕಲೆಕ್ಷನ್

ನಾವು, ನೀವೆಲ್ಲಾ ಹೊಸ ವರ್ಷದಂದು ಪಾರ್ಟಿ ಮಾಡಿ ಹಣ ಕಳೆದುಕೊಂಡ್ರೆ, ಅತ್ತ ತಿರುಪತಿ ತಿಮ್ಮಪ್ಪನಿಗೆ ಒಳ್ಳೆಯ ಕಲೆಕ್ಷನ್​ಗೆ ಆಗಿದೆ. ಯಾಕಂದ್ರೆ ಮೊನ್ನೆ ಸೋಮವಾರದಂದು ತಿರುಪತಿಗೆ ಭಕ್ತಸಾಗರವೇ ಹರಿದು ಬಂದಿದ್ದು, ಹುಂಡಿಯಲ್ಲಿ ಒಂದೇ ದಿನ ಬರೋಬ್ಬರಿ 7.6 ಕೋಟಿ ರೂಪಾಯಿ ಸಂಗ್ರಹವಾಗಿದೆ.

ತಿರುಪತಿ ದೇಗುಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಇಷ್ಟೊಂದು ಹಣ ಸಂಗ್ರವಾಗಿದೆ. ಕಳೆದ ವರ್ಷ ಅಕ್ಟೋಬರ್ 23ರಂದು ತಿರುಪತಿಯ ಹುಂಡಿಯಲ್ಲಿ 6.3 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ನಿತ್ಯವೂ ಸರಾಸರಿ 6 ಕೋಟಿ ರೂಪಾಯಿ ಹುಂಡಿಯಲ್ಲಿ ಸಂಗ್ರಹವಾಗುತ್ತೆ. ದೇಶಕ್ಕೆ ಕೊರೊನಾ ಕಂಟಕಕ್ಕೂ ಮುನ್ನ ಪ್ರತಿ ತಿಂಗಳು ತಿರುಪತಿ ಹುಂಡಿಯಲ್ಲಿ 90 ರಿಂದ 115 ಕೋಟಿ ರೂಪಾಯಿ ಸಂಗ್ರಹವಾಗುತ್ತಿತ್ತು. 2022-2023ನೇ ಹಣಕಾಸು ವರ್ಷದಲ್ಲಿ ತಿಮ್ಮಪ್ಪನ ಹುಂಡಿಗೆ 1,500 ಕೋಟಿ ರೂಪಾಯಿ ಹರಿದು ಬಂದಿತ್ತು.

suddiyaana