ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್ – ಆಗಸ್ಟ್ ತಿಂಗಳ ವಿಶೇಷ ದರ್ಶನದ ಟಿಕೆಟ್ ಬಿಡುಗಡೆ..!
ಹೆಚ್ಚು ಭಕ್ತ ಸಮೂಹವನ್ನು ಹೊಂದಿರುವ, ಆರ್ಥಿಕವಾಗಿ ಸದೃಢವಾಗಿರುವ, ಪ್ರಭಾವಶಾಲಿ ದೇವಾಲಯಗಳಲ್ಲಿ ತಿರುಮಲ ಬೆಟ್ಟದ ಮೇಲೆ ನೆಲೆಗೊಂಡ ತಿರುಪತಿ ತಿಮ್ಮಪ್ಪನ ದೇವಸ್ಥಾನವೂ ಒಂದು. ತಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳುವುದಕ್ಕಾಗಿ ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಬರುತ್ತಾರೆ. ತಿಮ್ಮಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಇದೀಗ ಅಗಸ್ಟ್ ತಿಂಗಳಲ್ಲಿ ತಿಮ್ಮಪ್ಪನ ದರ್ಶನ ಪಡೆಯುವವರಿಗೆ ಟಿಟಿಡಿ ಗುಡ್‌ನ್ಯೂಸ್ ಕೊಟ್ಟಿದೆ.
ಇದನ್ನೂ ಓದಿ: ಸಂಸಾರ ದೂರ ಆಗುವಂತೆ ಮಾಡು.. ನನಗೆ ಐಎಎಸ್ ಅಧಿಕಾರಿ ಜೊತೆಗೆ ಮದ್ವೆ ಮಾಡ್ಸು! – ಬನಶಂಕರಿ ದೇವಿಗೆ ಚಿತ್ರವಿಚಿತ್ರ ಕೋರಿಕೆ!
ಹೌದು, ಅಗಸ್ಟ್‌ನಲ್ಲಿ ಶ್ರಾವಣ ಮಾಸವಾಗಿರುವುದರಿಂದ ಹೆಚ್ಚು ವಿಶೇಷವಾಗಿದೆ. ಆ ತಿಂಗಳಿನಲ್ಲಿ ಕ್ರಮವಾಗಿ 15ನೇ ಏಕಾದಶಿ ಗುರುವಾರ ಮತ್ತು 16ನೇ ಶುಕ್ರವಾರದಂದು ವರಲಕ್ಷ್ಮೀ ವ್ರತವಿದೆ. ಇದಾದ ಬಳಿಕ ಶನಿವಾರ, ಭಾನುವಾರ ಬರುವುದರಿಂದ ಪದ್ಮಾವತಿ ಅಮ್ಮನವರ ದರ್ಶನಕ್ಕಾಗಿ ಭಕ್ತರು ಹೆಚ್ಚಾಗಿ ತಿರುಪತಿಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಟಿಟಿಡಿ ವಿಶೇಷ ದರ್ಶನ ಟಿಕೆಟ್‌ಗಳನ್ನು ಬಿಡುಗಡೆ ಮಾಡಿದೆ.
ಈ ತಿಂಗಳ 27 ರಂದು ಪರಕಾಮಣಿ ಸೇವೆ ಮತ್ತು ನವನೀತ ಸೇವೆಯನ್ನು ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿಯೂ ಲಭ್ಯಗೊಳಿಸಲಾಗುವುದು. ಇವುಗಳಲ್ಲದೆ ನೇರವಾಗಿ ಹೋಗಬಯಸುವ ಭಕ್ತರಿಗೂ ಸರ್ವ ದರ್ಶನ ಟಿಕೆಟ್ ನೀಡಲಾಗುತ್ತದೆ. ಇದಕ್ಕಾಗಿ ಆಧಾರ್ ಕಾರ್ಡ್ ಕೊಂಡೊಯ್ಯಬೇಕು. 12 ವರ್ಷದೊಳಗಿನ ಮಕ್ಕಳು ಯಾವುದೇ ಟಿಕೆಟ್ ಅಗತ್ಯವಿಲ್ಲದೇ ನೇರವಾಗಿ ಸ್ವಾಮಿಯ ದರ್ಶನ ಮಾಡಬಹುದು.
ಆಗಸ್ಟ್ ಮಾಸವು ಶ್ರಾವಣದ ಅತ್ಯಂತ ಮಂಗಳಕರವಾದ ಮಾಸವಾಗಿರುವುದರಿಂದ, ಭಕ್ತರು ತಿರುಮಲ ತಿಮ್ಮಪ್ಪನ ದರ್ಶನ ಪಡೆಯಲು ಹೆಚ್ಚು ಉತ್ಸುಕರಾಗಿರುತ್ತಾರೆ. ಭಕ್ತರಿಗೆ ದರ್ಶನ ಸುಲಭಗೊಳಿಸುವ ಉದ್ದೇಶದಿಂದ ಪ್ರತಿ ತಿಂಗಳು ಟಿಟಿಡಿ ಮೂರು ತಿಂಗಳ ಮುಂಚಿತವಾಗಿ ಶ್ರೀವಾರಿ ದರ್ಶನಕ್ಕಾಗಿ ವಿಶೇಷ ದರ್ಶನ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ.