ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಗೋಪುರ ಏರಿ ಕುಳಿತ ಕುಡುಕ! – 3 ಗಂಟೆ ಭಾರೀ ಹೈಡ್ರಾಮಾ!

ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಲಕ್ಚಾಂತರ ಮಂದಿ ಭಕ್ತರು ಆಗಮಿಸುತ್ತಾರೆ. ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆ ಹೆಚ್ಚು ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಹೀಗಿದ್ರೂ ಕೂಡ ತಿಮ್ಮಪ್ಪನ ದೇಗುಲದಲ್ಲಿ ಭಾರಿ ಭದ್ರತಾ ಲೋಪ ಉಂಟಾಗಿದೆ. ಕುಡುಕನೊಬ್ಬ ಕಂಪೌಂಡ್ ಹಾರಿ ದೇಗುಲದ ಆವರಣ ಪ್ರವೇಶಿಸಿದ್ದಲ್ಲದೆ ಗೋಪುರ ಏರಿ ಅವಾಂತರ ಸೃಷ್ಟಿಸಿದ್ದಾನೆ.
ಇದನ್ನೂ ಓದಿ: ರೂಲ್ಸ್ ಬ್ರೇಕ್ ಮಾಡಿದ್ರೂ ಮತ್ತೆ ಕ್ಯಾಪ್ಟನ್ ಆದ ಧನುಷ್! – ಅಶ್ವಿನಿ ಸೋತಿದ್ದು ಹೇಗೆ?
ಈ ಘಟನೆ ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ದೇಗುಲದಲ್ಲಿ ಏಕಾಂತ ಸೇವೆ ಮುಗಿದ ಸಂದರ್ಭದಲ್ಲಿ ಆಗಂತುಕ ಭದ್ರತಾ ಪಡೆಗಳ ಕಣ್ತಪ್ಪಿಸಿ ಕಂಪೌಂಡ್ ಹಾರಿ ಒಳಬಂದು ಏಕಾಏಕಿ ಗೀಪುರ ಏರಿದ್ದಾನೆ. ನಂತರ ಅಲ್ಲಿದ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ಇದು ದೇಗುಲದ ಸಿಬ್ಬಂದಿ ಮತ್ತು ಭಕ್ತರಲ್ಲಿ ಭಯ ಹುಟ್ಟಿಸಿದೆ. ಅಲ್ಲಿನ ಸಿಬ್ಬಂದಿಗಳು ಆತನನ್ನ ಕೆಳಗೆ ಇಳಿಸಲು ಎಷ್ಟು ಪ್ರಯತ್ನಿದ್ರೂ ಆತ ಕೆಳಗೆ ಇಳಿದಿಲ್ಲ. ಸುಮೂರು 3 ಗಂಟೆಗಳ ಕಾಲ ಗೋಪುರದ ಮೇಲೆ ಕುಳಿತು ಹೈಡ್ರಾಮಾ ಸೃಷ್ಟಿಸಿದ್ದಾ. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದ್ದಾರೆ.
ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದ ಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಶ್ರಮಿಸಿ ಆತನನ್ನು ಗೋಪುರದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ಇನ್ನು ಮದ್ಯದ ಅಮಲಿನಲ್ಲಿ ದೇಗುಲದ ಗೋಪುರವನ್ನು ಏರಿದ ವ್ಯಕ್ತಿ ಕೆಳಗಿಳಿಯಲು ನಿರಾಕರಿಸಿದ್ದಾನೆ. ಅಲ್ಲದೆ, ಪೊಲೀಸರು ತನಗೆ ಮದ್ಯದ ಬಾಟಲ್ ನೀಡಬೇಕೆಂದು ಒತ್ತಾಯಿಸಿದ್ದಾನೆ. ತಿರುಪತಿ ಪೂರ್ವ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಕೆಳಗೆ ಇಳಿಸಲು ಶ್ರಮಿಸಿದರು. ಅಪಾಯಕಾರಿ ಪರಿಸ್ಥಿತಿಯ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಏಣಿಗಳನ್ನು ಬಳಸಿ, ಹಗ್ಗಗಳ ಸಹಾಯದಿಂದ ಆತನನ್ನು ಗೋಪುರದ ಮೇಲಿನಿಂದ ಕೆಳಕ್ಕೆ ಕರೆತಂದರು. ನಂತರ ಆತನನ್ನು ವಶಕ್ಕೆ ಪಡೆಯಲಾಯಿತು. ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಪೂರ್ವ ಡಿಎಸ್ಪಿ ಭಕ್ತವತ್ಸಲಂ ತಿಳಿಸಿದ್ದಾರೆ.

ನೋಡಿರಿ

