ತಿರುಪತಿ ತಿಮ್ಮಪ್ಪನಿಗೆ 4,411 ಕೋಟಿ ರೂಪಾಯಿ ಬಜೆಟ್! – ಆದಾಯ ಮೂಲ ಯಾವುದು ಗೊತ್ತಾ?
ವಿಶ್ವದ ಅತಿ ಸಿರಿವಂತ ಹಿಂದೂ ದೇವಾಲಯ ಎಂಬ ಖ್ಯಾತಿಯ ತಿರುಪತಿ ತಿಮ್ಮಪ್ಪನ ಖಜಾನೆ ಈ ವರ್ಷ ಭರ್ಜರಿಯಾಗಿ ತುಂಬಿದೆ. ಇದೀಗ ದೇಗುಲದ 2023 – 24 ನೇ ಸಾಲಿನ ಬಜೆಟ್ ಮಂಡನೆಯಾಗಿದ್ದು, ಬರೋಬ್ಬರಿ 4,411 ಕೋಟಿ ರೂಪಾಯಿ ಬಜೆಟ್ ಮಂಡಿಸಿದೆ. 1933ರಲ್ಲಿ ಟಿಟಿಡಿ ರಚನೆಯಾದ ಬಳಿಕ ಇದು ಅತಿ ದೊಡ್ಡ ಮೊತ್ತದ ಬಜೆಟ್ ಆಗಿದೆ.
ಕೊರೊನಾ ಸಾಂಕ್ರಾಮಿಕದ ಬಳಿಕ ದೇಗುಲದ ಹುಂಡಿ ಸಂಗ್ರಹಣೆ ಭಾರಿ ಏರಿಕೆ ಕಂಡಿದೆ. 2022-23ರಲ್ಲಿ ಒಟ್ಟು 1,613 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಕೋವಿಡ್‌ಗೂ ಪೂರ್ವದಲ್ಲಿ ಸುಮಾರು 1,200 ಕೋಟಿ ರೂಪಾಯಿ. ಸಂಗ್ರಹವಾಗುತ್ತಿತ್ತು.
ಇದನ್ನೂ ಓದಿ:ಮದುವೆ ಖರ್ಚು ಹೆಚ್ಚಾಗಿದ್ದಕ್ಕೆ ಅತಿಥಿಗಳಿಗೆ ನೀರು ಮಾತ್ರ ಕೊಡಲು ನಿರ್ಧರಿಸಿದ ವಧು!
ತಿರುಮಲ ದೇವಸ್ಥಾನದ ಶ್ರೀವಾರಿ ಹುಂಡಿಯಿಂದ 1,591 ಕೋಟಿ ರೂಪಾಯಿ ಗಳಿಸುವ ಗುರಿಯನ್ನು ಟಿಟಿಡಿ ಹಾಕಿಕೊಂಡಿದೆ. ದೇವಸ್ಥಾನದ ಸಿಬ್ಬಂದಿ, ಮಾನವ ಸಂಪನ್ಮೂಲದ ವೇತನ ಪಾವತಿಗೆ 1532.20 ಕೋಟಿ ರೂಪಾಯಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ವಿವಿಧ ಹೂಡಿಕೆಗಳ ಮೇಲೆ ಬಡ್ಡಿಯಿಂದ 990 ಕೋಟಿ ರೂಪಾಯಿ ಆದಾಯವನ್ನು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಹೂಡಿಕೆಗಳ ಮೇಲಿನ ಬಡ್ಡಿಯಿಂದ 813 ಕೋಟಿ ರೂಪಾಯಿಗಳನ್ನು ಗಳಿಸಿತ್ತು.
ಇತರ ಆದಾಯದ ಮೂಲಗಳನ್ನು ಕೂಡ ಟಿಟಿಡಿ ಅಂದಾಜಿಸಿದ್ದು, ಪ್ರಸಾದ ಟಿಕೆಟ್‌ಗಳಿಂದ 500 ಕೋಟಿ ರೂಪಾಯಿ, ದರ್ಶನಂ ಟಿಕೆಟ್‌ಗಳಿಂದ 330 ಕೋಟಿ ರೂಪಾಯಿ, ಅರ್ಜಿತ ಸೇವಾ ಟಿಕೆಟ್‌ಗಳಿಂದ 140 ಕೋಟಿ ರೂಪಾಯಿ, ಕಲ್ಯಾಣ ಕಟ್ಟಾದಿಂದ 126.5 ಕೋಟಿ ರೂಪಾಯಿ, ವಸತಿ ಹಾಗೂ ಕಲ್ಯಾಣ ಮಂಟಪಗಳಿಂದ 129 ಕೋಟಿ ರೂಪಾಯಿ ಸೇರಿ ವಿವಿಧ ಮೂಲಗಳಿಂದ ಆದಾಯ ಗಳಿಸುವ ಗುರಿಯನ್ನು ಹೊಂದಿದೆ.