ಒಂದೇ ದಿನದಲ್ಲಿ ಕೋಟಿ ಒಡೆಯನಾದ ತಿರುಪತಿ ತಿಮ್ಮಪ್ಪ.. ದಾಖಲೆಯ ಕಾಣಿಕೆ ಸಂಗ್ರಹ!

ಆಂಧ್ರ ಪ್ರದೇಶದ ತಿರುಪತಿ ಪಟ್ಟಣದ ಬಳಿಯಿರುವ ತಿರುಮಲ ಬೆಟ್ಟದಲ್ಲಿ ತಿಮ್ಮಪ್ಪ ನೆಲೆಸಿದ್ದಾನೆ. ಈ ತಿಮ್ಮಪ್ಪನ ದೇಗುಲ ಜಗತ್ತಿನಲ್ಲಿಯೇ ಅತ್ಯಂತ ಅದ್ಭುತ, ಶ್ರೀಮಂತ ಮತ್ತು ನಿಗೂಢ ದೇವಾಲಯಗಳಲ್ಲಿ ಒಂದಾಗಿದೆ. ನಿತ್ಯ ಸಾವಿರಾರು ಮಂದಿ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಇದೀಗ ತಿಮ್ಮಪ್ಪನ ದೇವಸ್ಥಾನದ ಹುಂಡಿಯಲ್ಲಿ ಒಂದೇ ದಿನ ಕೋಟ್ಯಾಂತರ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ಇದನ್ನೂ ಓದಿ: ಭಾರತೀಯ ರೈಲ್ವೆಯಿಂದ ಹೊಸ App ರಿಲೀಸ್- ರೈಲ್ಒನ್ ನಿಂದ ಪ್ರಯಾಣಿಕರಿಗೆ ಏನೆಲ್ಲಾ ಲಾಭ?
ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಭಕ್ತರ ಸಂಖ್ಯೆ ಸಾಧಾರಣವಾಗಿದ್ದರೂ ಸಹ ಇದು ಕಳೆದ ಒಂದು ವರ್ಷದಲ್ಲಿ ದೇವಸ್ಥಾನಕ್ಕೆ ಬಂದ ಅತಿ ಹೆಚ್ಚು ಕಾಣಿಕೆಯಾಗಿದೆ. ಸೋಮವಾರ ತಿರುಮಲ ದೇವಸ್ಥಾನದಲ್ಲಿ 78,730 ಭಕ್ತರು ದೇವರ ದರ್ಶನ ಪಡೆದಿದ್ರು. ಸಾಮಾನ್ಯ ಜನದಟ್ಟಣೆಯ ಹೊರತಾಗಿಯೂ, ವಿಶ್ವದ ಅತ್ಯಂತ ಶ್ರೀಮಂತ ಹಿಂದೂ ದೇವಾಲಯದ ಹುಂಡಿಗೆ ಒಂದೇ ದಿನ 5.3 ಕೋಟಿ ರೂ. ಕಾಣಿಕೆ ಹರಿದುಬಂದಿದೆ. ಇದು ಇದುವರೆಗಿನ ವರ್ಷದ ಅತ್ಯಧಿಕ ಕಾಣಿಕೆಯಾಗಿದೆ.
2023ರ ಜನವರಿ 2 ರಂದು ಒಂದೇ ದಿನದಲ್ಲಿ ಅತಿ ಹೆಚ್ಚು ಹುಂಡಿ ಕಾಣಿಕೆ ಸಂಗ್ರಹವಾಗಿತ್ತು. ಆ ದಿನ ದೇವಾಲಯಕ್ಕೆ 7.68 ಕೋಟಿ ರೂ. ಒಂದೇ ದಿನದಲ್ಲಿ ಹರಿದುಬಂದಿತ್ತು. ಹಿಂದೆಯೂ 6 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿರುವ ನಿದರ್ಶನ ಇದೆ.
ಸಂಪತ್ತಿಗೆ ಹೆಸರುವಾಸಿಯಾದ ತಿರುಪತಿಗೆ ಪ್ರತಿ ತಿಂಗಳು 100 ಕೋಟಿಯಿಂದ 140 ಕೋಟಿ ರೂ. ಹುಂಡಿ ಹಣ ಸಂಗ್ರಹವಾಗುತ್ತಿದೆ. ಸುಮಾರು 100 ಕೆಜಿಯಿಂದ 140 ಕೆಜಿ ಚಿನ್ನವನ್ನು ಭಕ್ತರಿಂದ ದೇಣಿಗೆಯಾಗಿ ಪಡೆಯಲಾಗುತ್ತದೆ. ಬ್ಯಾಂಕುಗಳಲ್ಲಿ ಟಿಟಿಡಿಯ ಸ್ಥಿರ ಠೇವಣಿಗಳ ಮೊತ್ತ 20,000 ಕೋಟಿ ರೂ.ಗಿಂತ ಸ್ವಲ್ಪ ಹೆಚ್ಚು.

ನೋಡಿರಿ

