ಜೂನ್‌ ತಿಂಗಳಲ್ಲೂತಿಮ್ಮಪ್ಪನ ಹುಂಡಿಯಲ್ಲಿ ಬಂಪರ್ ಕಲೆಕ್ಷನ್‌! – ಲಕ್ಷ, ಕೋಟಿ, ಸಾವಿರ ಕೋಟಿ ಗಡಿ​ ದಾಟಿದ್ದು ಯಾವಾಗ?

ಜೂನ್‌ ತಿಂಗಳಲ್ಲೂತಿಮ್ಮಪ್ಪನ ಹುಂಡಿಯಲ್ಲಿ ಬಂಪರ್ ಕಲೆಕ್ಷನ್‌! – ಲಕ್ಷ, ಕೋಟಿ, ಸಾವಿರ ಕೋಟಿ ಗಡಿ​ ದಾಟಿದ್ದು ಯಾವಾಗ?

ತಿರುಮಲ ಬೆಟ್ಟದಲ್ಲಿನ ವೆಂಕಟೇಶ್ವರ ಸ್ವಾಮಿ ದೇವಾಲಯವು ವಿಶ್ವದ ಶ್ರೀಮಂತ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ. ಶ್ರೀಮಂತಿಕೆಗೆ ಹಾಗೂ ಭಾರೀ ಹುಂಡಿ ಹಣ ಸಂಗ್ರಹದ ಮೂಲಕವೇ ಹೆಸರುವಾಸಿಯಾದ ಈ ದೇವಾಲಯದಲ್ಲಿ ಜೂನ್‌ ತಿಂಗಳಿನಲ್ಲಿ ಹುಂಡಿ ಸಂಗ್ರಹವು ಭಾರೀ ಪ್ರಮಾಣದಲ್ಲಿ ಆಗಿದೆ.

ಪ್ರಸಕ್ತ ವರ್ಷದಲ್ಲಿ ತಿಮ್ಮಪ್ಪನ ಹುಂಡಿ ಆದಾಯ ಪ್ರತಿ ತಿಂಗಳು 100 ಕೋಟಿ ದಾಟುತ್ತಿದೆ. ಜೂನ್ ತಿಂಗಳಿನಲ್ಲಿಯೂ ತಿಮ್ಮಪ್ಪನ ಹುಂಡಿಯಲ್ಲಿ ಬರೋಬ್ಬರಿ 116 ಕೋಟಿ ಆದಾಯ ಬಂದಿದೆ. ಇದರಿಂದಾಗಿ ಈ ವರ್ಷ ಹುಂಡಿ ಮೂಲಕ ಬಾಲಾಜಿ ಈಗಾಗಲೇ 700 ಕೋಟಿ ಆದಾಯ ಬಂದಿದೆ. ಕಳೆದ ಕೆಲವು ತಿಂಗಳಿಂದ ತಿಮ್ಮಪ್ಪನ ಭಕ್ತರು ಸಲ್ಲಿಸುತ್ತಿರುವ ಕಾಣಿಕೆಯನ್ನು ನೋಡಿದರೆ ಈ ವರ್ಷ ಸ್ವಾಮಿಯ ಹುಂಡಿಯ ಆದಾಯ 1500 ಕೋಟಿಗೂ ಹೆಚ್ಚು ಬರುವ ಸಾಧ್ಯತೆ ಇದೆ. ಭಕ್ತರು ತಮ್ಮ ಇಚ್ಛೆಗೆ ತಕ್ಕಂತೆ ಶ್ರೀವಾರಿಗೆ ಕಾಣಿಕೆಗಳನ್ನು ಅರ್ಪಿಸುತ್ತಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ 4,411 ಕೋಟಿ ರೂಪಾಯಿ ಬಜೆಟ್! –  ಆದಾಯ ಮೂಲ ಯಾವುದು ಗೊತ್ತಾ?  

ಈ ಹಿಂದೆ ಶ್ರೀವಾರಿ ದರ್ಶನಾರ್ಥವಾಗಿ ತಿರುಮಲಕ್ಕೆ ಆಗಮಿಸುವ ಭಕ್ತರ ಸಂಖ್ಯೆ ನೂರಾರು ಸಂಖ್ಯೆಯಲ್ಲಿತ್ತು. ಕಾಲಕ್ರಮೇಣ ಭಕ್ತರ ಸಂಖ್ಯೆ ಲಕ್ಷಕ್ಕೆ ಏರಿದೆ. ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾದಂತೆ ಸ್ವಾಮಿಯ ಹುಂಡಿಯ ಆದಾಯವೂ ಹೆಚ್ಚುತ್ತಿದೆ. ಆರಂಭದಲ್ಲಿ ತಿಮ್ಮಪ್ಪನ ವಾರ್ಷಿಕ ಆದಾಯ ವರ್ಷಕ್ಕೆ ಒಂದು ಲಕ್ಷದಷ್ಟಿತ್ತು. ದಿನೇ ದಿನೇ ಹೆಚ್ಚುತ್ತಿದ್ದ ಶ್ರೀವಾರಿ ಹುಂಡಿಯ ಆದಾಯ 1958ರ ನವೆಂಬರ್ 28ರಂದು ಪ್ರಥಮ ಬಾರಿಗೆ ಒಂದು ಲಕ್ಷ ರೂಪಾಯಿ ದಾಟಿತು. ಇದೀಗ ತಿಮ್ಮಪ್ಪನ ಆದಾಯ ನೂರು ಕೋಟಿಗೂ ಹೆಚ್ಚಾಗಿದೆ.

ಈ ವರ್ಷದ ಜನವರಿ ತಿಂಗಳಲ್ಲಿ 123 ಕೋಟಿ 4 ಲಕ್ಷ ರೂಪಾಯಿ ಬಂದಿದ್ದರೆ, ಫೆಬ್ರವರಿಯಲ್ಲಿ 114 ಕೋಟಿ 29 ಲಕ್ಷ ರೂಪಾಯಿ ಬಂದಿದೆ. ಅದೇ ರೀತಿ ಮಾರ್ಚ್ ತಿಂಗಳಲ್ಲಿ 120 ಕೋಟಿ 29 ಲಕ್ಷ ಆದಾಯ ಬಂದಿದ್ದು, ಏಪ್ರಿಲ್ ತಿಂಗಳಲ್ಲಿ 114 ಕೋಟಿ 18 ಲಕ್ಷ ಆದಾಯ ಬಂದಿದೆ. ಮೇ ತಿಂಗಳಲ್ಲಿ 110 ಕೋಟಿ 2 ಲಕ್ಷ ರೂಪಾಯಿ ಆದಾಯ ಬಂದಿದ್ದರೆ, ಜೂನ್ ತಿಂಗಳಲ್ಲಿ 116 ಕೋಟಿ 14 ಲಕ್ಷ ರೂಪಾಯಿ ಆದಾಯ ಬಂದಿದೆ. ತಿಮ್ಮಪ್ಪ ಈಗಾಗಲೇ ಆರು ತಿಂಗಳಿಗೆ 697 ಕೋಟಿ 96 ಲಕ್ಷ ರೂಪಾಯಿ ಆದಾಯ ಪಡೆದಿರುವುದರಿಂದ ಸತತ ಎರಡನೇ ವರ್ಷವೂ ಶ್ರೀವೀರರ ಹುಂಡಿ ಆದಾಯ 1500 ಕೋಟಿ ಗಡಿ ದಾಟುವ ಸಾಧ್ಯತೆ ಇದೆ.

1985ರವರೆಗೆ ಹುಂಡಿ ಮೂಲಕ ತಿರುಮಲದ ಆದಾಯ ಒಂದು ಲಕ್ಷ ರೂಪಾಯಿಗಳಾಗಿದ್ದರೆ, 1990ರಲ್ಲಿ ಒಂದು ಮೊದಲ ಬಾರಿಗೆ ಕೋಟಿ ರೂಪಾಯಿಗೆ ತಲುಪಿತ್ತು. 2000ನೇ ಇಸವಿಯಲ್ಲಿ ಹುಂಡಿ ಮೂಲಕ 137 ಕೋಟಿ ರೂಪಾಯಿಗಳ ಆದಾಯ ಪಡೆದ ತಿಮ್ಮಪ್ಪ 2010ರಲ್ಲಿ 521 ಕೋಟಿ ರೂ., 2022ರಲ್ಲಿ 1500 ಕೋಟಿ ರೂ. ಹಾಗೂ ಈ ವರ್ಷ ಹುಂಡಿ ಮೂಲಕ ಬಾಲಾಜಿಗೆ ಪ್ರತಿ ತಿಂಗಳು 100 ಕೋಟಿಗೂ ಅಧಿಕ ಆದಾಯ ಬರುತ್ತಿದೆ.

suddiyaana