ತಿರುಪತಿ ಗಿರಿವಾಸ ಮತ್ತಷ್ಟು ಶ್ರೀಮಂತ! – ಸತತ 24ನೇ ತಿಂಗಳು ತಿರುಪತಿ ಹುಂಡಿಯಲ್ಲಿ ಶತಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

ತಿರುಪತಿ ಗಿರಿವಾಸ ಮತ್ತಷ್ಟು ಶ್ರೀಮಂತ! – ಸತತ 24ನೇ ತಿಂಗಳು ತಿರುಪತಿ ಹುಂಡಿಯಲ್ಲಿ ಶತಕೋಟಿಗೂ ಅಧಿಕ ಕಾಣಿಕೆ ಸಂಗ್ರಹ

ಭಾರತದ ಅತ್ಯಂತ ಶ್ರೀಮಂತ ದೇಗುಲ ತಿರುಪತಿ ತಿಮ್ಮಪ್ಪನ ಖಜಾನೆ ಮತ್ತಷ್ಟು ತುಂಬುತ್ತಾ ಇದೆ. ಇಲ್ಲಿ ಭಕ್ತರು ಮಳೆ, ಚಳಿ, ಬಿಸಿಲು ಎನ್ನದೇ ಭೇಟಿ ನೀಡುತ್ತಲೇ ಇರುತ್ತಾರೆ. ಹರಕೆ ರೂಪದಲ್ಲಿ ಕಾಣಿಕೆ ಅರ್ಪಿಸುತ್ತಲೇ ಇದ್ದಾರೆ. ಇದೀಗ ಫೆಬ್ರವರಿ ತಿಂಗಳಲ್ಲಿ ತಿರುಪತಿ ತಿರುಮಲ ದೇಗುಲದ ಹುಂಡಿಯಲ್ಲಿ 111.71 ಕೋಟಿ ರೂ ಹಣ ಸಂಗ್ರಹವಾಗಿದೆ. ಇದರೊಂದಿಗೆ ಸತತ 24ನೇ ತಿಂಗಳು ಹುಂಡಿಯಲ್ಲಿ 110 ಕೋಟಿ ರೂ.ಗಿಂತ ಹೆಚ್ಚು ಹಣ ಸಂಗ್ರಹವಾದಂತೆ ಆಗಿದೆ ರಂದು ವರದಿಯಾಗಿದೆ.

ಇದನ್ನೂ ಓದಿ: ಮತ್ತೆ ಕೇಂದ್ರದ ವಿರುದ್ಧ ಅನ್ನದಾತರ ಕಹಳೆ – ಮಾರ್ಚ್ 6 ರಂದು ದೆಹಲಿ ಚಲೋ ಪುನರಾರಂಭ, ಮಾರ್ಚ್ 10 ಕ್ಕೆ ‘ರೈಲ್ ರೋಕೋ’ಗೆ ಕರೆ,

ಈ ಬಗ್ಗೆ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾರೆಡ್ಡಿ ಮಾಹಿತಿ ನೀಡಿದ್ದಾರೆ. ‘ಫೆಬ್ರವರಿಯಲ್ಲಿ 19.06 ಲಕ್ಷ ಭಕ್ತರ ದೇವರ ದರ್ಶನ ಪಡೆದಿದ್ದಾರೆ. ಹುಂಡಿಯಿಂದ 111.71 ಕೋಟಿ ರು. ಆದಾಯ ಸಂಗ್ರಹವಾಗಿದೆ. 2022ರ ಫೆಬ್ರವರಿಯಿಂದಲೂ ದೇವಾಲಯದ ಹುಂಡಿ ಆದಾಯದಲ್ಲಿ ಸ್ಥಿರ ಏರಿಕೆ ಕಂಡುಬಂದಿದೆ. ಇನ್ನು ಫೆಬ್ರವರಿ ತಿಂಗಳಿನಲ್ಲಿ 95 ಲಕ್ಷಕ್ಕೂ ಹೆಚ್ಚು ಲಡ್ಡು ಮಾರಾಟವಾಗಿದೆ ಎಂದು ತಿಳಿಸಿದ್ದಾರೆ.

ಬೇಸಿಗೆ ತಿಂಗಳಾದ ಏಪ್ರಿಲ್‌ನಿಂದ ಜೂನ್‌ವರೆಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ವಿಶೇಷ ದರ್ಶನ, ವಿಐಪಿ ದರ್ಶನ, ಪ್ರವಾಸ್ಯೋದ್ಯಮ ಕೋಟಾ ಟಿಕೆಟ್‌ಗಳನ್ನುಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಲು ಸೂಚಿಸಲಾಗಿದೆ.

Shwetha M