‘ಆದಿಪುರುಷ್’ ಚಿತ್ರದಲ್ಲಿ ರಾವಣನ ಗಡ್ಡಕ್ಕೆ ಗ್ರಾಫಿಕ್ಸ್ ಮೂಲಕ ಶೇವಿಂಗ್..!
ಟೀಕೆಗೆ ಬೇಸತ್ತು ರಾವಣನ ಗಡ್ಡ ಕಟ್

‘ಆದಿಪುರುಷ್’ ಚಿತ್ರದಲ್ಲಿ ರಾವಣನ ಗಡ್ಡಕ್ಕೆ ಗ್ರಾಫಿಕ್ಸ್ ಮೂಲಕ ಶೇವಿಂಗ್..!ಟೀಕೆಗೆ ಬೇಸತ್ತು ರಾವಣನ ಗಡ್ಡ ಕಟ್

ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರ ರಿಲೀಸ್ ಗೂ ಮೊದಲೇ ಸಾಕಷ್ಟು ಟೀಕೆಗಳನ್ನ ಎದುರಿಸುತ್ತಿದೆ. 2023ರ ಜನವರಿಯಲ್ಲಿ ಈ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಕೂಡಾ ಶ್ರಮಿಸುತ್ತಿದೆ. ಇದರ ಮಧ್ಯೆ ಯಾವಾಗ ಆದಿಪುರುಷ್ ಚಿತ್ರದ ಟೀಸರ್ ಬಿಡುಗಡೆಯಾಯ್ತೋ ಅಲ್ಲಿಂದಲೇ ಚಿತ್ರತಂಡಕ್ಕೆ ಹೊಸ ತಲೆನೋವು ಶುರುವಾಗಿತ್ತು. ಈ ಚಿತ್ರದ ಗ್ರಾಫಿಕ್ಸ್ ಬಗ್ಗೆ ಎದ್ದಿರೋ ಟೀಕೆಗೆ ಚಿತ್ರತಂಡ ಕಂಗಾಲಾಗಿ ಹೋಗಿತ್ತು. ಅದಕ್ಕಾಗಿ ಚಿತ್ರದಲ್ಲಿ ಈಗ ದೊಡ್ಡ ಬದಲಾವಣೆ ಮಾಡಿದೆ.

ಇದನ್ನೂ ಓದಿ:  ಸಿನಿಮಾ ಕ್ಷೇತ್ರದಿಂದ ದೂರ ಉಳಿಯಲಿದ್ದಾರಾ ಅಮೀರ್ ಖಾನ್- ಫ್ಯಾನ್ಸ್ ಗೆ ಹೇಳಿದ್ದೇನು?

ಆದಿಪುರುಷ್ ಚಿತ್ರ ಟೀಸರ್​ ಬಿಡುಗಡೆ ಆದ ನಂತರ ಈ ಚಿತ್ರ ಸಿಕ್ಕಾಪಟ್ಟೆ ಟ್ರೋಲ್​ ಆಗಿದೆ. ಅದರಲ್ಲೂ ರಾವಣನ ಪಾತ್ರ ನೋಡಿದ ಬಹುತೇಕರು ಅಸಮಾಧಾನ ಹೊರಹಾಕಿದ್ದಾರೆ. ಸೈಫ್​ ಅಲಿ ಖಾನ್​ ನಟಿಸಿರುವ ರಾವಣನ ಪಾತ್ರದ ಗೆಟಪ್​ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟೀಕೆಗಳು ಸಿಕ್ಕಾಪಟ್ಟೆ ಕೇಳಿಬಂದಿತ್ತು. ಇದನ್ನೆಲ್ಲಾ ನೋಡಿ ಬೇಸತ್ತ ಚಿತ್ರತಂಡ ಸಿನಿಮಾದಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದೆ. ಪ್ರಮುಖವಾಗಿ ರಾವಣನ ಗೆಟಪ್​ ಚೇಂಜ್ ಮಾಡಲು ಮುಂದಾಗಿದೆ. ಟೀಸರ್​ನಲ್ಲಿ ರಾವಣನ ಪಾತ್ರಕ್ಕೆ ಉದ್ದ ಗಡ್ಡ ಇತ್ತು. ಅದು ಅಲ್ಲಾವುದ್ದೀನ್​ ಖಿಲ್ಜಿಯ ಗಡ್ಡದ ರೀತಿ ಕಾಣುತ್ತಿದೆ ಎಂದು ಟ್ರೋಲ್​ ಮಾಡಲಾಗಿತ್ತು. ಆ ಗಡ್ಡಕ್ಕೆ ಸ್ವಲ್ಪ ಮಟ್ಟಿಗೆ ಕತ್ತರಿ ಹಾಕಲು ನಿರ್ಧರಿಸಿದೆ ಎನ್ನಲಾಗ್ತಿದೆ.

ಇಷ್ಟೇ ಅಲ್ಲದೇ ಚಿತ್ರದಲ್ಲಿ ಇನ್ನೂ ಕೆಲ ಬದಲಾವಣೆಗಳನ್ನ ತರಲಾಗುತ್ತಿದೆ. ಆಂಜನೇಯ ಮತ್ತು ವಾನರ ಸೇನೆಯ ಗೆಟಪ್ ಕೂಡಾ ಬದಲಾಗುವ ಸಂಭವ ಇದೆ. ಇದಕ್ಕೆಲ್ಲಾ ಗ್ರಾಫಿಕ್ಸ್​ ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದೆ. ಪ್ರೇಕ್ಷಕರಿಗೆ ಈ ಚಿತ್ರವನ್ನು ಉತ್ತಮವಾಗಿ ಕಟ್ಟಿಕೊಡಬೇಕು ಎಂಬ ಕಾರಣಕ್ಕಾಗಿ ನಿರ್ದೇಶಕ ಓಂ ರಾವತ್​ ಅವರು ಎಲ್ಲಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ‘ಆದಿಪುರುಷ್​’ ಚಿತ್ರ ಜೂನ್​ 16ರಂದು ರಿಲೀಸ್​ ಆಗಲಿದೆ.

suddiyaana