ಸಂಗೀತಾ ಮತ್ತು ಕಾರ್ತಿಕ್ ಜೋಡಿಯಾಗುವ ಸಮಯ – ನೈಸ್ ಆಗಿ ಮಸಾಜ್ ಮಾಡ್ತಾ ಮತ್ತಷ್ಟು ಹತ್ತಿರವಾದ ಸ್ನೇಹಿತರು..!

ಸಂಗೀತಾ ಮತ್ತು ಕಾರ್ತಿಕ್ ಜೋಡಿಯಾಗುವ ಸಮಯ – ನೈಸ್ ಆಗಿ ಮಸಾಜ್ ಮಾಡ್ತಾ ಮತ್ತಷ್ಟು ಹತ್ತಿರವಾದ ಸ್ನೇಹಿತರು..!

ಬಿಗ್‌ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳಿಗೆ ಬದುಕಿನ ಪಾಠ ಹೇಳಿಕೊಡೋದು ಸರಿ. ಜೀವನದ ಪಾಠದ ಜೊತೆಗೆ ಪ್ರೀತಿಯ ಸವಿಯನ್ನು ಕೊಡುತ್ತಿದೆ ಎಂಬುದು ನಿಜವಾಗುತ್ತಿದೆ. ಈಗಾಗಲೇ ಬಿಗ್‌ಬಾಸ್ ರಿಯಾಲಿಟಿ ಶೋಗೆ ಬಂದವರು ಜೋಡಿಯಾಗಿರುವುದು ಎಲ್ಲರಿಗೂ ಗೊತ್ತಿದೆ. ಚಂದನ್ –ನಿವೇದಿತಾ, ಅರವಿಂದ್ – ದಿವ್ಯಾ ಉರುಡುಗಾ ಈಗಿರುವ ಜೋಡಿ ಹಕ್ಕಿಗಳು. ಇವರಲ್ಲಿ ಚಂದನ್ ನಿವೇದಿತಾ ಮದುವೆಯಾಗಿದ್ದಾರೆ. ಇನ್ನೊಂದು ಜೋಡಿ ಕೂಡಾ ಹಸೆಮಣೆಯೇರುವುದು ಪಕ್ಕಾ ಅಂತಿದ್ದಾರೆ. ಇದರ ನಡುವೆ ಈ ಬಾರಿಯ ಬಿಗ್‌ಬಾಸ್ ಶೋನಲ್ಲಿ ಇನ್ನೆರೆಡು ಜೋಡಿಗಳು ಜೊತೆಯಾಗುವ ಲಕ್ಷಣ ಕಾಣುತ್ತಿದೆ.

ಇದನ್ನೂ ಓದಿ: ಹಾಟ್ ಹಾಟ್ ಫೋಟೋ ಶೇರ್ ಮಾಡಿದ ಸೋನು ಗೌಡ – ಮೈಮಾಟ ಪ್ರದರ್ಶನ ಇಷ್ಟೇ ಸಾಕಾ ಅಂತಿದ್ದಾರೆ ಕೆಲವರು

ನಟಿ ಸಂಗೀತಾ ಮತ್ತು ನಟ ಕಾರ್ತಿಕ್ ಬಿಗ್ ಬಾಸ್‌ನಲ್ಲಿ ಜೋಡಿ ನಂಬರ್ 1 ಆಗಿ ಹೊರಹೊಮ್ಮುತ್ತಿದ್ದಾರೆ. ಸಂಗೀತಾ ಶೃಂಗೇರಿಯನ್ನು ಕಂಡರೆ ಕಾರ್ತಿಕ್‌ಗೆ ಏನೋ ಖುಷಿ. ಸಂಗೀತಾ ಕೂಡಾ ಕಾರ್ತಿಕ್ ಜೊತೆಯಲ್ಲೇ ಇರುತ್ತಾರೆ. ಇವರಿಬ್ಬರ ನಡುವೆ ಏನೋ ಇದೆ ಎಂಬ ಗುಸುಗುಸು ಮೊದಲ ವಾರದಲ್ಲೇ ಶುರುವಾಗಿತ್ತು. ದಿನ ಕಳೆದಂತೆ ಇಬ್ಬರ ಮಧ್ಯೆ ಆಪ್ತತೆ ಹೆಚ್ಚುತ್ತಿದೆ. ಇದನ್ನು ನೋಡಿ ಉಳಿದವರು ಮಾತಾಡಿಕೊಳ್ಳೋದು ಕೂಡಾ ಇವರ ಗಮನಕ್ಕೆ ಬಂದಿದೆ. ಹೀಗಾಗಿ ತಮ್ಮ ಮಧ್ಯೆ ಇರೋದು ಕೇವಲ ಫ್ರೆಂಡ್ ಶಿಪ್ ಅಷ್ಟೇ ಅನ್ನೋದನ್ನೂ ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಜೋಡಿ ಪ್ರೇಕ್ಷಕರಿಗೂ ಇಷ್ಟವಾಗುತ್ತಿದೆ. ಅದರಲ್ಲೂ ಸೋಮವಾರ ರಾತ್ರಿ ಬಿಗ್‌ಬಾಸ್ ನೋಡಿದ ವೀಕ್ಷಕರು ಇವರಿಬ್ಬರನ್ನು ನೋಡಿ ಸಿಕ್ಕಾಪಟ್ಟೆಸ ಇಷ್ಟಪಟ್ಟಿದ್ದಾರೆ.

ಸಂಗೀತಾ ಪರವಾಗಿ ಕಾರ್ತಿಕ್ ಟಾಸ್ಕ್‌ನಲ್ಲಿ ಪಾಲ್ಗೊಂಡಿದ್ದರು. ಟಾಸ್ಕ್‌ನಲ್ಲಿ ಕಾರ್ತಿಕ್ ಬೆನ್ನಿಗೆ ಗಾಯವಾಗಿದೆ. ಈ ಗಾಯಕ್ಕೆ ಪ್ರೀತಿಯಿಂದ ಕಾಳಜಿಯಿಂದ ಎಣ್ಣೆ ಹಚ್ಚಿದ್ದಾರೆ ಸಂಗೀತಾ. ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರ ಜೋಡಿ ಚೆನ್ನಾಗಿದೆ ಎನ್ನುವ ಕಮೆಂಟ್‌ಗಳು ಅಭಿಮಾನಿಗಳಿಂದ ಬರುತ್ತಿದೆ. ಸಂಗೀತಾ ಶೃಂಗೇರಿ ಅವರು ನಾಯಕಿ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘777 ಚಾರ್ಲಿ’ ಸಿನಿಮಾ ಮೂಲಕ ಅವರು ಫೇಮಸ್ ಆಗಿದ್ದಾರೆ. ಅವರು ಈಗ ಬಿಗ್ ಬಾಸ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ ‘ಡೊಳ್ಳು’ದಲ್ಲಿ ಕಾರ್ತಿಕ್ ಅವರು ನಟಿಸಿದ್ದಾರೆ.

Sulekha