ಆಡದೇ ಕೆಟ್ಟ ಬುಮ್ರಾ ಭಾರತ U19 ತಂಡಕ್ಕೆ ಸೆಹ್ವಾಗ್-ದ್ರಾವಿಡ್‌ ಪುತ್ರರಿಗೆ ಚಾನ್ಸ್‌

ಆಡದೇ ಕೆಟ್ಟ ಬುಮ್ರಾ  ಭಾರತ U19 ತಂಡಕ್ಕೆ ಸೆಹ್ವಾಗ್-ದ್ರಾವಿಡ್‌ ಪುತ್ರರಿಗೆ ಚಾನ್ಸ್‌

 ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು

ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಭಾರತ U19 ತಂಡಗಳನ್ನು ಪ್ರಕಟಿಸಿದೆ. ಇದರಲ್ಲಿ 3 ಏಕದಿನ ಪಂದ್ಯಗಳು ಮತ್ತು 2 ಬಹು-ದಿನ ಪಂದ್ಯಗಳು ಸೇರಿವೆ. ಸೆಪ್ಟೆಂಬರ್18ರಿಂದ ಈ ಸರಣಿ ಆರಂಭವಾಗಲಿದೆ. ಈ ಯಂಗ್ ಟೀಮ್ ನಲ್ಲಿ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್ ಅವರ ಪುತ್ರ ಅನ್ವಯ್ ದ್ರಾವಿಡ್ ಮತ್ತು ವೀರೇಂದ್ರ ಸೆಹವಾಗ್ ಅವರ ಪುತ್ರ ಆರ್ಯವೀರ್ ಸೆಹವಾಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅನ್ವಯ್ ದ್ರಾವಿಡ್ ವಿಕೆಟ್ ಕೀಪರ್ ಆಗಿದ್ದಾರೆ. ಆರ್ಯವೀರ್ ಸೆಹವಾಗ್ ಸದ್ಯ ನಡೆಯುತ್ತಿರುವ ಡೆಲ್ಲಿ ಪ್ರೀಮಿಯರ್ ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಕನ್ನಡಿಗ ದೇವದತ್‌ ಪಡಿಕ್ಕಲ್‌ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಸಾಯಿ ಸುದರ್ಶನ್ ಬದಲು ಆಡಿದ್ದ ಪಡಿಕ್ಕಲ್‌ 2 ಶತಕ ಸಿಡಿಸಿ ಮಿಂಚಿದ್ದರು. ಈ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಇದೀಗ ಕನ್ನಡಿಗ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಟಾಪ್ 50ರೊಳಗೆ ಸ್ಥಾನ ಪಡೆದಿದ್ದಾರೆ. ಆದ್ರೆ ಲಂಕಾ ವಿರುದ್ದದ 2 ಶತಕಗಳು ಇನ್ನೂ ಪರಿಷ್ಕೃತ ಟೆಸ್ಟ್ ಶ್ರೇಯಾಂಕದಲ್ಲಿ ಸೇರ್ಪಡೆಯಾಗಿಲ್ಲ. ಹೀಗಾಗಿ 2ನೇ ಟೆಸ್ಟ್ ಮುಕ್ತಾಯದ ಬಳಿಕ ಪಡಿಕ್ಕಲ್ ಅಂಕಪಟ್ಟಿಯಲ್ಲಿ ಮತ್ತಷ್ಟು ಮೇಲಕ್ಕೆ ಏರುವ ನಿರೀಕ್ಷೆಯಿದೆ.

ಭಾರತದ ಯುವ ಬ್ಯಾಟರ್‌ ಧ್ರುವ್‌ ಜುರೆಲ್‌ ತಾಂತ್ರಿಕ ಸಾಮರ್ಥ್ಯವನ್ನು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿ ವಿಲಿಯರ್ಸ್‌ ಶ್ಲಾಘಿಸಿದ್ದಾರೆ. ಜುರೆಲ್‌ ದೀರ್ಘಕಾಲ ಭಾರತ ಪರ ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಅವರ ತಂತ್ರಗಾರಿಕೆ ತುಂಬಾ ಉತ್ತಮವಾಗಿದೆ. ಕೆಎಲ್‌ ರಾಹುಲ್‌ ನಂತರ ಅವರ ತಾಂತ್ರಿಕ ಸಾಮರ್ಥ್ಯ ಅತ್ಯುತ್ತಮವಾಗಿದೆ. ಜುರೆಲ್‌ ,ದೀರ್ಘಕಾಲ ಆಡಬಲ್ಲರು ಎಂದು ಎಬಿಡಿ ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: 1 ಪಂದ್ಯ.. 11 NO-BALL – ಲಂಕಾಗೆ ಲೈಫ್ ಕೊಟ್ಟ ಭಾರತ

ಭಾರತ-ಶ್ರೀಲಂಕಾ ನಡುವಿನ 2ನೇ ಟೆಸ್ಟ್‌ನ 4ನೇ ದಿನ ರಿಷಭ್ ಪಂತ್ ಮತ್ತೊಮ್ಮೆ ಅದ್ಭುತ ವಿಕೆಟ್‌ಕೀಪಿಂಗ್ ಮೂಲಕ ಗಮನ ಸೆಳೆದಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿಸೂರಿಯಬಂಡಾರ ಚೊಚ್ಚಲ ಟೆಸ್ಟ್ ಶತಕದ ಸನಿಹದಲ್ಲಿದ್ರು. ಈ ವೇಳೆ ಮಾನವ್ ಸುತಾರ್ ಎಸೆದ ಬಾಲ್‌ಗೆ ಸೂರಿಯಬಂಡಾರ ಕ್ರೀಸ್ ಬಿಟ್ಟು ಮುಂದೆ ಬಂದು ಹೊಡೆಯಲು ಯತ್ನಿಸಿದ್ರು. ಬಾಲ್‌ನ್ನ ಕ್ಷಣಾರ್ಧದಲ್ಲಿ ಕೈಯಲ್ಲಿ ಹಿಡಿದ ಪಂತ್ ಬೇಲ್ಸ್‌ಗಳನ್ನು ಕೆಡವಿ ಸೂರಿಯ ಬಂಡಾರರನ್ನು ಪೆವಿಲಿಯನ್‌ಗೆ ಕಳುಹಿಸಿದ್ರು. ಈ ಸ್ಟಂಪಿಂಗ್‌ ಕೇವಲ 0.3 ಸೆಕೆಂಡ್‌ನಲ್ಲಿ ಪೂರ್ಣಗೊಂಡಿದೆ.

2026ರ ಏಷ್ಯನ್ ಗೇಮ್ಸ್‌ನ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆಯಾಗಿದೆ. ಜಪಾನ್‌ನ ಕೊರೋಗಿ ಅಥ್ಲೆಟಿಕ್ ಪಾರ್ಕ್‌ನಲ್ಲಿ ಪಂದ್ಯಗಳು ನಡೆಯಲಿವೆ. ಭಾರತ ಪುರುಷರ ಮತ್ತು ಮಹಿಳಾ ತಂಡಗಳನ್ನು ಶ್ರೇಯಸ್ ಅಯ್ಯರ್ ಮತ್ತು ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಈ ಬಾರಿ ಫೈನಲ್ ಅಥವಾ 3ನೇ ಸ್ಥಾನದ ಪಂದ್ಯದವರೆಗೂ ಭಾರತ-ಪಾಕಿಸ್ತಾನ ಮುಖಾಮುಖಿಯಾಗುವುದಿಲ್ಲ. ಸೆಪ್ಟೆಂಬರ್ 18ಕ್ಕೆ ಮಹಿಳೆಯರು ಮತ್ತು ಸೆಪ್ಟೆಂಬರ್ 28ಕ್ಕೆ ಪುರುಷರ ತಂಡ ತಮ್ಮ ಅಭಿಯಾನ ಆರಂಭಿಸಲಿವೆ.

ಟೀಂ ಇಂಡಿಯಾದ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಸದ್ಯ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ. ಇದೀಗ ಹಿಟ್‌ಮ್ಯಾನ್‌ ತವರೂರಿಗೆ ಆಗಮಿಸಿದ್ದಾರೆ. ರೋಹಿತ್‌ ಮುಂಬೈನಲ್ಲಿ ಸಖತ್‌ ಸ್ಟೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ. ತಲೆಗೆ ಕ್ಯಾಪ್‌ ಧರಿಸಿ, ಮುಂಬೈನ ರಸ್ತೆಯಲ್ಲಿ ಸುತ್ತಾಡಿದ್ದಾರೆ. ಈ ಫೋಟೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ರಿಷಭ್ ಪಂತ್ ಭಾರಿ ಮುನ್ನಡೆ ಸಾಧಿಸಿದ್ದಾರೆ. ಲಂಕಾ ವಿರುದ್ಧದ ಪ್ರದರ್ಶನದಿಂದ 711 ರೇಟಿಂಗ್‌ ಪಾಯಿಂಟ್‌ನೊಂದಿಗೆ 7ನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಪಂತ್ ನಾಯಕ ಶುಭ್​ಮನ್ ಗಿಲ್ ಅವರನ್ನು ಸರಿಗಟ್ಟಿದ್ದಾರೆ. ಯಶಸ್ವಿ ಜೈಸ್ವಾಲ್ ಟಾಪ್ 10 ರಿಂದ ಹೊರಬೀಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಐಸಿಸಿ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ಬಹುಕಾಲ ನಂಬರ್ ಒನ್ ಆಗಿ ಮೆರೆದಿದ್ದ ಬುಮ್ರಾ ಅಧಿಪತ್ಯ ಅಂತ್ಯವಾಗಿದೆ. 600 ದಿನಗಳ ಕಾಲ ಟೆಸ್ಟ್ ಸ್ವರೂಪದಲ್ಲಿ ನಂಬರ್ 1 ಬೌಲರ್ ಆಗಿ ಉಳಿದ ಬುಮ್ರಾ ಈಗ ತನ್ನ ನಂಬರ್ ಒನ್ ಪಟ್ಟ ಕಳೆದುಕೊಂಡಿದ್ದಾರೆ. ಜಸ್ಪ್ರೀತ್ ಬುಮ್ರಾ ಅವರನ್ನು ಆಸ್ಟ್ರೇಲಿಯಾದ ಸ್ಟಾರ್ ವೇಗಿ ಮಿಚೆಲ್ ಸ್ಟಾರ್ಕ್‌ ಹಿಂದಿಕ್ಕಿದ್ದು, ಇದೇ ಮೊದಲ ಬಾರಿ ನಂಬರ್ ಒನ್ ಪಟ್ಟಕ್ಕೇರಿದ್ದಾರೆ.

ದುಲೀಪ್ ಟ್ರೋಫಿಯಲ್ಲಿ ಬೇಬಿ ಬಾಸ್ ವೈಭವ್ ಸೂರ್ಯವಂಶಿ ಬ್ಯಾಟಿಂಗ್​ನಲ್ಲಿ ಫ್ಲಾಪ್​ ಆದರೂ ಬೌಲಿಂಗ್​ನಲ್ಲಿ ಮಿಂಚಿದ್ದಾರೆ. ಪೂರ್ವ ವಲಯದ ಪರ ಆಡುತ್ತಿರುವ ವೈಭವ್, ಈಶಾನ್ಯ ವಲಯದ ಎರಡನೇ ಇನ್ನಿಂಗ್ಸ್‌ನಲ್ಲಿ ಒಂದೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದರು. ವೈಭವ್ ಒಟ್ಟು 3 ಓವರ್ ಬೌಲಿಂಗ್ ಮಾಡಿ 11 ರನ್‌ಗಳಿಗೆ 2 ವಿಕೆಟ್ ಪಡೆದರು.

CSK ತಂಡದ ಐಕಾನ್ ಎಂಎಸ್ ಧೋನಿ ಮತ್ತು ಫ್ರಾಂಚೈಸಿ ಮ್ಯಾನೇಜ್‌ಮೆಂಟ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿಯೊಂದು ಭಾರಿ ಸಂಚಲನ ಮೂಡಿಸಿದೆ. ಧೋನಿ ಅವರು ಸಿಎಸ್‌ಕೆ ತಂಡದಲ್ಲಿ ಶೇಕಡಾ 25 ರಷ್ಟು ಪಾಲು ಕೇಳಿದ್ದಾರೆ ಮತ್ತು ಈ ಮಾತುಕತೆ ವಿಫಲವಾಗಿದೆ ಎಂಬ ವರದಿಗಳು ಹರಿದಾಡುತ್ತಿವೆ. ಆದರೆ, ಈ ವರದಿಗಳನ್ನು ಮಾಜಿ ಕ್ರಿಕೆಟಿಗ ಹಾಗೂ ಪ್ರಸಿದ್ಧ ಕಾಮೆಂಟೇಟರ್ ಆಕಾಶ್ ಚೋಪ್ರಾ ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡ ಅಭಿಮಾನಿಗಳನ್ನು ಕಳೆದುಕೊಳ್ಳಲು ಆಟವಾಡುತ್ತಿದೆ ಎಂದು ಪಾಕ್ ಮಾಜಿ ಕ್ರಿಕೆಟಲ್ ರಮೀಜ್ ರಾಜಾ ಕಿಡಿಕಾರಿದ್ದಾರೆ. ಪಾಕಿಸ್ತಾನದ ಅಭಿಮಾನಿಗಳು ತಂಡ ಪ್ರತಿ ಪಂದ್ಯದಲ್ಲೂ ಗೆಲ್ಲಬೇಕೆಂದು ಬಯಸುವುದಿಲ್ಲ. ಆದರೆ, ಮೈದಾನದಲ್ಲಿ ಆಟಗಾರರು ಕನಿಷ್ಠ ಹೋರಾಟದ ಮನೋಭಾವ  ಮತ್ತು ಗೆಲ್ಲಬೇಕೆಂಬ ಹಠವನ್ನು ಪ್ರದರ್ಶಿಸಬೇಕು ಎಂದು ಬಯಸುತ್ತಾರೆ. ಪ್ರಸ್ತುತ ತಂಡದಲ್ಲಿ ಅದು ಸಂಪೂರ್ಣವಾಗಿ ಕಾಣೆಯಾಗಿದೆ. ಪಾಕ್ ತಂಡ ಆಡುತ್ತಿರುವುದು ಗೆಲ್ಲುವುದಕ್ಕಲ್ಲ, ಅಭಿಮಾನಿಗಳನ್ನು ಕಳೆದುಕೊಳ್ಳುವುದಕ್ಕೆ ಎಂದು ರಮೀಝ್ ರಾಜಾ ಕಿಡಿಕಾರಿದ್ದಾರೆ.)

Sulekha

Leave a Reply

Your email address will not be published. Required fields are marked *