ಮಿಡಲ್ ಫಿಂಗರ್ ತೋರಿಸಿ ಕೆಟ್ರಾ ಟಿಮ್ ಡೇವಿಡ್ ?– ಅಶ್ಲೀಲ ಸನ್ನೆಗೆ ಬ್ಯಾನ್ ಭೀತಿ

ಆರ್ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಪಂದ್ಯದಲ್ಲಿ ಟಿಮ್ ಡೇವಿಡ್ ಅವರ ಅಶ್ಲೀಲ ಸನ್ನೆಯಿಂದಾಗಿ ಬ್ಯಾನ್ ಭೀತಿಗೆ ಒಳಗಾಗಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ಆಟಗಾರ ಟಿಮ್ ಡೇವಿಡ್ ಮಧ್ಯದ ಬೆರಳು ಸನ್ನೆ ಮಾಡಿ ಅನಗತ್ಯ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇದನ್ನೂ ಓದಿ:ಪಂಜಾಬ್ ವಿರುದ್ದ ಗೆದ್ದ ಅಕ್ಷರ್ ಪಡೆ – ಸತತ ನಾಲ್ಕು ಪಂದ್ಯಗಳಲ್ಲಿ ಸೋತ ಪಂಜಾಬ್ ಕಿಂಗ್ಸ್
ಮೇ 10ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಆರ್ಸಿಬಿ ಲಾಸ್ಟ್ ಓವರ್ನಲ್ಲಿ ರೋಚಕ ಗೆಲುವು ಕಂಡಿತ್ತು. ಇದೇ ಖುಷಿಯಲ್ಲಿದ್ದ ಟಿಮ್ ಡೇವಿಡ್ ಅಶ್ಲೀಲ ಸನ್ನೆ ಮಾಡುವ ಮೂಲಕ ಸಂಭ್ರಮಿಸಿದರು. ಈ ಪಂದ್ಯದಲ್ಲಿ ಆರ್ಸಿಬಿ ಆಟಗಾರ ಟಿಮ್ ಡೇವಿಡ್ ನಡೆದುಕೊಂಡ ರೀತಿ ವಿವಾದಕ್ಕೆ ಕಾರಣವಾಗಿದೆ. ಟಿಮ್ ಡೇವಿಡ್ ಎಲ್ಲರೆದುರೇ ಮುಂಬೈ ಆಟಗಾರರಿಗೆ ಮಧ್ಯದ ಬೆರಳು ತೋರಿಸಿದ್ದರು. ಐಪಿಎಲ್ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿದೆ.
ಮಧ್ಯದ ಬೆರಳು ತೋರಿಸುವ ಸನ್ನೆ ಮಾಡಿರುವ ಟಿಮ್ ಡೇವಿಡ್ಅವರಿಗೆ ಶಿಕ್ಷೆಯಾಗಿದೆ. ಐಪಿಎಲ್ ನಿಯಮ 2.6 ರ ಅಡಿಯಲ್ಲಿ ‘ಅಸಭ್ಯ, ಆಕ್ಷೇಪಾರ್ಹ ಅಥವಾ ಅವಮಾನಕರ’ ವರ್ತನೆ ಎಂದು ಪರಿಗಣಿಸಲಾಗಿದೆ. ಈ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫರಿ ಅಮಿತ್ ಶರ್ಮಾ, ಟಿಮ್ ಡೇವಿಡ್ ಅವರಿಗೆ ದಂಡ ವಿಧಿಸಿದ್ದಾರೆ. ಪಂದ್ಯದ ಸಂಭಾವನೆಯಲ್ಲಿ ಶೇ. 30ರಷ್ಟು ದಂಡ ವಿಧಿಸಿದ್ದು ಅಲ್ಲದೆ, ಎರಡು ಡಿಮೆರಿಟ್ ಪಾಯಿಂಟ್ಗಳನ್ನು ನೀಡಲಾಗಿದೆ. ಟಿಮ್ ಡೇವಿಡ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ವಿಧಿಸಲಾದ ದಂಡಕ್ಕೆ ಸಮ್ಮತಿಸಿದ್ದಾರೆ. ಟಿಮ್ ಡೇವಿಡ್ ಅವರಿಗೆ ಈಗ 2 ಡಿಮೆರಿಟ್ ಪಾಯಿಂಟ್ಸ್ ನೀಡಲಾಗಿದೆ. ಅಂದರೆ, ಅವರು ಮುಂದಿನ ಪಂದ್ಯಗಳಲ್ಲಿ ಇನ್ನು ಕೇವಲ 2 ಪಾಯಿಂಟ್ಸ್ ಪಡೆದರೂ ಒಂದು ಪಂದ್ಯದ ನಿಷೇಧ ಎದುರಿಸಬೇಕಾಗುತ್ತದೆ.

ನೋಡಿರಿ

