ಟಿ20 ವಿಶ್ವಕಪ್ಗೆ ತಿಲಕ್ ವರ್ಮಾ ಗ್ಯಾರಂಟಿ – ರಾಜಧಾನಿ ಎಕ್ಸ್‌ಪ್ರೆಸ್ ಮಯಾಂಕ್ ಯಾದವ್ ಗೂ ಸಿಕ್ತು ಚಾನ್ಸ್

ಟಿ20 ವಿಶ್ವಕಪ್ಗೆ ತಿಲಕ್ ವರ್ಮಾ ಫಿಟ್ ಆಗಿ ಬರ್ತಾರಾ ಇಲ್ವಾ ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಭಾರತದ ಎ ತಂಡದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ತಿಲಕ್ ವರ್ಮಾ ಫಿಟ್ ಆಗಿರುವುದಾಗಿ ತೋರಿಸಿಕೊಟ್ಟಿದ್ದಾರೆ.
ಇದನ್ನೂ ಓದಿ:ಕಿಶನ್ ರನ್.. ಕೀಪಿಂಗ್ ಟೆನ್ಷನ್ – ಸಂಜು ಆಡ್ಸಿದ್ರೂ ಕಷ್ಟ.. ಬಿಟ್ರೂ ಕಷ್ಟ
ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯಗಳಿಗಾಗಿ ಭಾರತ ಎ ತಂಡದಲ್ಲಿ ತಿಲಕ್ ವರ್ಮಾ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ತಿಲಕ್ ವರ್ಮಾ ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಹಾಗೆಯೇ ಕಳೆದ ಕೆಲ ತಿಂಗಳುಗಳಿಂದ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿದ್ದ ರಾಜಧಾನಿ ಎಕ್ಸ್‌ಪ್ರೆಸ್ ಖ್ಯಾತಿಯ ಮಯಾಂಕ್ ಯಾದವ್ ಕೂಡ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ಭಾರತ ಎ ತಂಡ ಮೊದಲ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಯುಎಸ್ಎ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್ಎ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡದ ಪರ ನಾರಾಯಣ್ ಜಗದೀಸನ್ ಕೇವಲ 49 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ರು. ಜೊತೆಗೆ ತಿಲಕ್ ವರ್ಮಾ ಕೂಡಾ 2 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 38 ರನ್ ಬಾರಿಸುವ ಮೂಲಕ ಫಿಟ್ನೆಸ್ ಸಾಬೀತುಪಡಿಸಿದ್ದಾರೆ. ಟೀಮ್ ಇಂಡಿಯಾ ಕೊಟ್ಟ 239 ರನ್ಗಳ ಕಠಿಣ ಗುರಿ ಬೆನ್ನತ್ತಿದ ಯುಎಸ್ಎ ತಂಡ 200 ರನ್ ಕಲೆಹಾಕಿ ಆಲೌಟ್ ಆಯಿತು.

ನೋಡಿರಿ

