ಕೊಹ್ಲಿ ನಿವೃತ್ತಿ ಆದ್ರೆ… ತಿಲಕ್‌ಗೆ 3ನೇ ಕ್ರಮಾಂಕ! – ವಾಸಿಂ ಜಾಫರ್ ಕೊಟ್ರಾ ಬಿಗ್ ಹಿಂಟ್‌?

ಕೊಹ್ಲಿ ನಿವೃತ್ತಿ ಆದ್ರೆ… ತಿಲಕ್‌ಗೆ 3ನೇ ಕ್ರಮಾಂಕ! – ವಾಸಿಂ ಜಾಫರ್  ಕೊಟ್ರಾ ಬಿಗ್ ಹಿಂಟ್‌?

ವಿರಾಟ್ ಕೊಹ್ಲಿ ಅವರ ಕ್ರಿಕೆಟ್ ಭವಿಷ್ಯದ ಬಗ್ಗೆ ಚರ್ಚೆ ಮತ್ತೆ ಜೋರಾಗಿದೆ. 2027ರ ಏಕದಿನ ವಿಶ್ವಕಪ್ ಬಳಿಕ ಕೊಹ್ಲಿ ನಿವೃತ್ತಿ ಘೋಷಿಸಿದರೆ, ಟೀಂ ಇಂಡಿಯಾದ ಮೂರನೇ ಕ್ರಮಾಂಕವನ್ನು ಯಾರು ತುಂಬಲಿದ್ದಾರೆ ಎಂಬ ಪ್ರಶ್ನೆ ಈಗಲೇ ಎದ್ದಿದೆ. ಈ ಪ್ರಶ್ನೆಗೆ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಮಹತ್ವದ ಉತ್ತರ ನೀಡಿದ್ದಾರೆ.

ಜಾಫರ್ ಅವರ ಪ್ರಕಾರ, ಕೊಹ್ಲಿ ನಿವೃತ್ತಿಯಾದರೆ ಮೂರನೇ ಕ್ರಮಾಂಕಕ್ಕೆ ತಿಲಕ್ ವರ್ಮಾ ಸೂಕ್ತ ಆಯ್ಕೆಯಾಗಬಹುದು. ತಿಲಕ್ ಅವರ ಬ್ಯಾಟಿಂಗ್ ಸಾಮರ್ಥ್ಯವನ್ನು ಮೆಚ್ಚಿರುವ ಜಾಫರ್, ವಿಭಿನ್ನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಅವರಲ್ಲಿದೆ ಎಂದು ಹೇಳಿದ್ದಾರೆ. ಒತ್ತಡದ ಸಂದರ್ಭಗಳಲ್ಲಿ ಇನ್ನಿಂಗ್ಸ್ ಕಟ್ಟುವುದರಿಂದ ಹಿಡಿದು ವೇಗವಾಗಿ ರನ್ ಗಳಿಸುವವರೆಗೆ ತಿಲಕ್ ಹಲವು ರೀತಿಯಲ್ಲಿ ಬ್ಯಾಟಿಂಗ್ ಮಾಡಬಲ್ಲರು.

ಇದನ್ನೂ ಓದಿ: IND Vs WI ಹೊಡಿಬಡಿ ಧಮಾಕ – X -Factor ಪ್ಲೇಯರ್ಸ್ ಯಾರೆಲ್ಲಾ?

ಕೊಹ್ಲಿ ಅವರ ಸ್ಥಾನ ತುಂಬುವುದು ಯಾವುದೇ ಆಟಗಾರನಿಗೂ ಸುಲಭದ ಕೆಲಸವಲ್ಲ. ಆದರೆ ತಿಲಕ್ ವರ್ಮಾ ಅವರ ವಯಸ್ಸು, ಪ್ರತಿಭೆ ಮತ್ತು ಆಟದ ಪ್ರಬುದ್ಧತೆಯನ್ನು ಗಮನಿಸಿದರೆ, ಭವಿಷ್ಯದಲ್ಲಿ ಅವರು ದೊಡ್ಡ ಜವಾಬ್ದಾರಿ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಇದೇ ವೇಳೆ ಯುವ ಆಟಗಾರ ಅಭಿಷೇಕ್ ಶರ್ಮಾ ಅವರ ಆಟವನ್ನೂ ವಾಸಿಂ ಜಾಫರ್ ಶ್ಲಾಘಿಸಿದ್ದಾರೆ. ಅಭಿಷೇಕ್ ಅವರ ಆಕ್ರಮಣಕಾರಿ ಬ್ಯಾಟಿಂಗ್ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ಪ್ರಬುದ್ಧತೆಯೂ ಗಮನ ಸೆಳೆಯುತ್ತಿದೆ ಎಂದು ಹೇಳಿದ್ದಾರೆ. ಹೀಗಾಗಿ 2027ರ ವಿಶ್ವಕಪ್ ಬಳಿಕ ಕೊಹ್ಲಿ ವಿದಾಯ ಹೇಳಿದರೆ, ಅವರ ಮೂರನೇ ಕ್ರಮಾಂಕದ ಸ್ಥಾನಕ್ಕೆ ತಿಲಕ್ ವರ್ಮಾ ಪ್ರಮುಖ ಸ್ಪರ್ಧಿಯಾಗುವ ಸಾಧ್ಯತೆ ಇದೆ. ಆದರೆ ಕೊಹ್ಲಿಯ ಉತ್ತರಾಧಿಕಾರಿ ಯಾರು ಎಂಬುದನ್ನು ಕಾಲವೇ ನಿರ್ಧರಿಸಲಿದೆ.

Kishor KV

Leave a Reply

Your email address will not be published. Required fields are marked *