T20Iನಲ್ಲೇ ಆಡ್ತಿಲ್ಲ.. ODIಗೂ ಬೇಕಾ? – ಶ್ರೇಯಸ್ ಗೆ ತಿಲಕ್ ಬ್ಯಾಕಪ್!
ವಿಶ್ವಕಪ್ ಗೆ ಪಾಟಿದಾರ್ ಕಾಣಲ್ವಾ?

T20Iನಲ್ಲೇ ಆಡ್ತಿಲ್ಲ.. ODIಗೂ ಬೇಕಾ? – ಶ್ರೇಯಸ್ ಗೆ ತಿಲಕ್ ಬ್ಯಾಕಪ್!ವಿಶ್ವಕಪ್ ಗೆ ಪಾಟಿದಾರ್ ಕಾಣಲ್ವಾ?

2027ರ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಈಗಿನಿಂದಲೇ ಬಲಿಷ್ಠ ತಂಡವನ್ನ ರೆಡಿ ಮಾಡ್ತಿದೆ. ಌಂಡ್ ಬ್ಯಾಕಪ್ ಪ್ಲೇಯರ್ಸ್ ವಿಚಾರದಲ್ಲೂ ಚರ್ಚೆಗಳು ಶುರುವಾಗಿದೆ. ಇದೀಗ ಶ್ರೇಯಸ್ ಅಯ್ಯರ್‌ಗೆ ಬ್ಯಾಕಪ್ ಆಗಿ ತಿಲಕ್ ವರ್ಮಾ ಅವರನ್ನು ರೆಡಿ ಮಾಡ್ಬೇಕು ಅನ್ನೋದು ಆಯ್ಕೆ ಸಮಿತಿಯ ಪ್ಲ್ಯಾನ್. ಟಾಪ್-6ನಲ್ಲಿ ಶ್ರೇಯಸ್ ಅವರ ಸ್ಥಾನಕ್ಕೆ like-for-like replacement ಬೇಕು ಅನ್ನೋದು ಅವ್ರ ಇಂಟೆನ್ಷನ್.

ಇದನ್ನೂ ಓದಿ : 2023ರಲ್ಲಿ ಮಿಸ್.. 2027ಕ್ಕೆ ಸಕ್ಸಸ್ – ODI ವಿಶ್ವಕಪ್ ಬೇಟೆ ಭಾರತಕ್ಕೇನಾ?

ಭಾರತ ಏಕದಿನ ತಂಡಕ್ಕೆ ಪ್ರಸ್ತುತ ಶುಭ್​ಮನ್ ಗಿಲ್ ಕ್ಯಾಪ್ಟನ್ ಆಗಿದ್ರೆ ಶ್ರೇಯಸ್ ಅಯ್ಯರ್ ವೈಸ್ ಕ್ಯಾಪ್ಟನ್ ಆಗಿದ್ದಾರೆ. ನಂಬರ್ 4, 5, 6 ಹೀಗೆ ಈ ಮೂರೂ ಸ್ಲಾಟ್​ಗಳಲ್ಲೂ ಬ್ಯಾಟಿಂಗ್ ಆರ್ಡರ್ ಚೇಂಜಸ್ ಆಗ್ತಿರುತ್ತೆ.  ಬಟ್ ಈಗ ಟೀಂ ಮ್ಯಾನೇಜ್​ಮೆಂಟ್ ಶ್ರೇಯಸ್ ಅಯ್ಯರ್​ಗೆ ಬ್ಯಾಕಪ್ ಆಗಿ ಒಬ್ಬ ಆಟಗಾರರನ್ನ ರೆಡಿ ಮಾಡೋಕೆ ಮುಂದಾಗಿದೆ. ಸೋ ಯಾರನ್ನ ಚೂಸ್ ಮಾಡ್ಬೋದು ಅನ್ನೋ ಪ್ರಶ್ನೆಗೆ  ಮ್ಯಾನೇಜ್‌ಮೆಂಟ್ ಕಣ್ಣಿಗೆ ಬಿದ್ದಿರುವ ಹೆಸರು ತಿಲಕ್ ವರ್ಮಾ. ಶ್ರೇಯಸ್ ಅಯ್ಯರ್ ಫಿಟ್ ಆಗಿ ಫಾರ್ಮ್‌ನಲ್ಲಿದ್ದರೆ, ಮೊದಲ ಆಯ್ಕೆ ಅವರೇ ಆಗಿರ್ತಾರೆ. ಅಕಸ್ಮಾತ್  ಗಾಯ ಅಥವಾ ಫಾರ್ಮ್ ಸಮಸ್ಯೆ ಎದುರಾದರೆ, ತಿಲಕ್ ವರ್ಮಾ ಬ್ಯಾಕಪ್ ಪ್ಲಾನ್-B ಆಗಿ ಸಿದ್ಧವಾಗಿರಬೇಕು ಎಂಬುದು ಆಯ್ಕೆ ಸಮಿತಿಯ ಚಿಂತನೆ. ಎಡಗೈ ಬ್ಯಾಟರ್ ತಿಲಕ್ ವರ್ಮಾ ಮಿಡಲ್ ಆರ್ಡರ್​ನಲ್ಲಿ ಭಾರತದ ಪರ ಆಡ್ತಾರೆ ಅನ್ನೋದು ಅವ್ರ ಉದ್ದೇಶ. ಆದ್ರೆ ತಿಲಕ್​ಗೆ ಚಾನ್ಸ್ ಕೊಟ್ರೂ ಬಿಸಿಸಿಐನ ಉದ್ದೇಶವನ್ನ ಫುಲ್​ಫಿಲ್ ಮಾಡ್ತಾರಾ ಅನ್ನೋದೇ ಇಲ್ಲಿರೋ ಪ್ರಶ್ನೆ.

ಟಿ-20ಐನಲ್ಲೇ ಫಾರ್ಮ್ ಕಳ್ಕೊಂಡಿರೋ ತಿಲಕ್ ಏಕದಿನಕ್ಕೂ ಬೇಕಾ?

ಬ್ಯಾಕಪ್ ಪ್ಲೇಯರ್ ಆಗಿ ತಿಲಕ್ ಹೆಸರನ್ನ ತೆಗೆದುಕೊಂಡಿರೋ ಬಿಸಿಸಿಐ ಮುಂದಿರೋ ಅತಿದೊಡ್ಡ ಪ್ರಶ್ನೆಯೇ ತಿಲಕ್ ಫಾರ್ಮ್ ಮತ್ತು ಪರ್ಫಾಮೆನ್ಸ್. ಅಟ್ ಪ್ರಸೆಂಟ್ ಟಿ-20ಐ ತಂಡದಲ್ಲೇ ಸಾಕಷ್ಟು ಸ್ಟ್ರಗಲ್ ಪಡ್ತಿದ್ದಾರೆ. ಮಿಡಲ್ ಆರ್ಡರ್​ನಲ್ಲಿ ಅವ್ರ ಸ್ಟ್ರೈಕ್​ರೇಟ್ ಬಗ್ಗೆ ಪ್ರಶ್ನೆಯಾಗ್ತಿದೆ. ಐಪಿಎಲ್​ ಬಳಿಕ ನಡೆದಿರೋ 10 ಟಿ-20ಐ ಪಂದ್ಯಗಳಲ್ಲಿ 255 ರನ್ಸ್ ಗಳಿಸಿದ್ದಾರೆ. ಌಂಡ್ ಓವರ್​ ಆಲ್ 143 ಸ್ಟ್ರೈಕ್​ರೇಟ್ ಇದೆ. ಌಕ್ಚುಲಿ ತಿಲಕ್ ಫಿನಿಶಿಂಗ್ ರೋಲ್ ಪ್ಲೇ ಮಾಡೋದ್ರಿಂದ 143 ಸ್ಟ್ರೈಕ್​ರೇಟ್ ಸಾಕಾಗಲ್ಲ. ಇನ್ನು 2026ರಲ್ಲಿ ಟೋಟಲ್ 18 ಟಿ-20ಐ ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರೋ 34ರ ಆವರೇಜ್​ನಲ್ಲಿ 451 ರನ್ಸ್ ಕಲೆ ಹಾಕಿದ್ದಾರೆ. ಅಷ್ಟಕ್ಕೂ ಇಲ್ಲಿ ತಿಲಕ್ ಒಳ್ಳೆ ಬ್ಯಾಟರ್ ಅದ್ರಲ್ಲಿ ಡೌಟೇ ಇಲ್ಲ. ಬಟ್ ಮಿಡಲ್ ಆರ್ಡರ್ ಅಂತಾ ಬಂದಾಗ ಅವ್ರನ್ನ ಚೂಸ್ ಮಾಡ್ಬೇಕಾ ಅನ್ನೋದ್ರ ಬಗ್ಗೆ ಸ್ವಲ್ಪ ಯೋಚ್ನೆ ಮಾಡ್ಬೇಕಾಗುತ್ತೆ. ಯಾಕಂದ್ರೆ ಸ್ಪಿನ್ ವಿರುದ್ಧ ಅವ್ರ ರೆಕಾರ್ಡ್ಸ್ ಅಷ್ಟ್ರಲ್ಲೇ ಇದೆ. ಹಂಗ್ ನೋಡಿದ್ರೆ ಶ್ರೇಯಸ್ ಅಯ್ಯರ್​ಗೆ ಆರ್​ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್ ಬೆಸ್ಟ್ ಬ್ಯಾಕಪ್ ಆಗ್ತಾರೆ.

ತಿಲಕ್ ಸ್ವಲ್ಪ ರಿಸ್ಕ್!

ತಿಲಕ್ ವರ್ಮಾ ನಂಬರ್ 3ನಲ್ಲಿ ಬೆಸ್ಟ್.. ಮಿಡಲ್ ಆರ್ಡರ್ ನಲ್ಲಿ ಡಲ್

2026ರಲ್ಲಿ ಭಾರತದ ಪರ & ಐಪಿಎಲ್ ನಲ್ಲೂ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ಇಲ್ಲ

ಮಿಡಲ್ ಆರ್ಡರ್ ನಲ್ಲಿ ಸ್ಪಿನ್ ವಿರುದ್ಧ ತಿಲಕ್ ಪ್ರದರ್ಶನ ಅಷ್ಟಕ್ಕಷ್ಟೇ

2026ರ T20ಯಲ್ಲಿ ಸ್ಪಿನ್ ವಿರುದ್ಧ ಶೇ.19.3 ರಷ್ಟು, ಪೇಸ್ ವಿರುದ್ಧ 40.5ರಷ್ಟು

 

ಪಾಟಿದಾರ್ ಬೆಟರ್ ಚಾಯ್ಸ್!

ಶ್ರೇಯಸ್ ಗೆ ಪಾಟಿದಾರ್ ಬೆಸ್ಟ್ ಬ್ಯಾಕಪ್.. ಇಬ್ಬರೂ ರೈಟ್ ಹ್ಯಾಂಡ್ ಬ್ಯಾಟರ್ಸ್

ಮಿಡಲ್ ಓವರ್‌ ಗಳಲ್ಲಿ ಸ್ಪಿನ್ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನ

2026 ಐಪಿಎಲ್ ನಲ್ಲಿ 192.69ರ ಸ್ಟ್ರೈಕ್ ರೇಟ್ ನಲ್ಲಿ 501 ರನ್ಸ್ ದಾಖಲು

ಇದೇ ಐಪಿಎಲ್ ನಲ್ಲಿ ತಿಲಕ್ ವರ್ಮಾ 145.94 ಸ್ಟ್ರೈಕ್ ರೇಟ್ ನಲ್ಲಿ 359 ರನ್ಸ್

ಸ್ಪಿನ್ ಬೌಲರ್ಸ್ ಎದುರಲ್ಲಿ 200+ ಸ್ಟ್ರೈಕ್ ರೇಟ್, ಪೇಸ್ ವಿರುದ್ಧ 192+ ಸ್ಟ್ರೈಕ್

ರಜತ್ ಕೇವಲ cameo batter ಅಲ್ಲ.. ಸೆಟ್ ಆದ ಮೇಲೆ ದೊಡ್ಡ ಇನ್ನಿಂಗ್ಸ್

ನಂಬರ್ಸ್, ಪರ್ಫಾಮೆನ್ಸ್ ನೋಡಿದಾಗ ಮಿಡಲ್ ಆರ್ಡರ್​ಗೆ ತಿಲಕ್​ಗಿಂತ ರಜತ್ ಬೆಟರ್ ಆಪ್ಶನ್ ಅನ್ಸುತ್ತೆ. ಆದ್ರೆ ತಿಲಕ್ ವರ್ಮಾರನ್ನ ಟೀಂ ಇಂಡಿಯಾ ಮ್ಯಾನೇಜ್​ಮೆಂಟ್ ಫ್ಯೂಚರ್ ಸ್ಟಾರ್ ಆಗಿ ರೆಡಿ ಮಾಡೋಕೆ ನೋಡ್ತಾ ಇರೋದ್ರಿಂದ ಅವ್ರ ಮೇಲೇ ಫೋಕಸ್ ಮಾಡ್ತಿದೆ. ಆದ್ರೆ ಡೊಮೆಸ್ಟಿಕ್​ನಲ್ಲಿ ಎಷ್ಟೇ ಅಬ್ಬರದ ಪ್ರದರ್ಶನ ನೀಡಿದ್ರೂ ಮಾಜಿ ಕ್ರಿಕೆಟರ್​ಗಳೂ ಸಜೆಸ್ಟ್ ಮಾಡಿದ್ರೂ ರಜತ್ ಪಾಟಿದಾರ್ ಮಾತ್ರ ಅವ್ರ ಕಣ್ಣಿಗೆ ಕಾಣಲ್ಲ. ಯಾಕಂದ್ರೆ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್​ ಕೆಲ ಆಟಗಾರರ ಮಾತ್ರ ಅವ್ರ ಟಾರ್ಗೆಟ್ ಇರೋದು. ಹೀಗಾಗಿ ಪಾಟಿದಾರ್ ವಿಚಾರದಲ್ಲಿ ಪಾಲಿಟಿಕ್ಸ್, ಫೇವರಿಸಂ ಯಾವ್ದು ವರ್ಕ್ ಆಗಲ್ಲ.

Shantha Kumari

Leave a Reply

Your email address will not be published. Required fields are marked *