ಇಶಾನ್‌ ಕಿಶನ್‌  ಸ್ಪೋಟಕ ಶತಕ – ನ್ಯೂಜಿಲೆಂಡ್ ವಿರುದ್ಧ 5ನೇ T20I ಗೆದ್ದ ಟೀಂ IND

ಇಶಾನ್‌ ಕಿಶನ್‌  ಸ್ಪೋಟಕ ಶತಕ –  ನ್ಯೂಜಿಲೆಂಡ್ ವಿರುದ್ಧ 5ನೇ T20I ಗೆದ್ದ ಟೀಂ IND

ಇಶಾನ್‌ ಕಿಶನ್‌  ಸ್ಪೋಟಕ ಶತಕ ಹಾಗೂ ಅರ್ಷದೀಪ್‌ ಸಿಂಗ್‌   ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, ಐದನೇ ಹಾಗೂ ಟಿ20ಐ ಸರಣಿಯ   ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 46 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಐದು ಪಂದ್ಯಗಳ ಟಿ20ಐ ಸರಣಿಯನ್ನು ಟೀಮ್‌ ಇಂಡಿಯಾ 4-1 ಅಂತರದಲ್ಲಿ ಮುಡಿಗೇರಿಸಿಕೊಂಡಿತು. ಇದರೊಂದಿಗೆ ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ, 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

ಶನಿವಾರ ಇಲ್ಲಿನ ಗ್ರೀನ್‌ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಭಾರತ ತಂಡ ನೀಡಿದ್ದ 272 ರನ್‌ಗಳ ಬೃಹತ್‌ ಗುರಿಯನ್ನು ಹಿಂಬಾಲಿಸಿದ ನ್ಯೂಜಿಲೆಂಡ್‌ ತಂಡ, ಫಿನ್‌ ಆಲೆನ್‌ ಸ್ಪೋಟಕ ಅರ್ಧಶತಕದ ಹೊರತಾಗಿಯೂ ಇನ್ನುಳಿದ ಬ್ಯಾಟರ್‌ಗಳ ವೈಫಲ್ಯದಿಂದ ಸೋಲು ಅನುಭವಿಸಿತು. ಕಿವೀಸ್‌ 19.4 ಓವರ್‌ಗಳಿಗೆ 225 ರನ್‌ಗಳಿಗೆ ಆಲ್‌ಔಟ್‌ ಆಯಿತು. ಈ ಸೋಲಿನ ಮೂಲಕ ಭಾರತ ತಂಡದ ವೈಟ್‌ಬಾಲ್‌ ಸರಣಿಗಳನ್ನು ಮುಗಿಸಿತು.

ಇದನ್ನೂ ಓದಿ:  ಸಿಲಿಕಾನ್‌ ಸಿಟಿ ಮಂದಿಗೆ ಗುಡ್‌ನ್ಯೂಸ್!‌ – ಟ್ರಾಫಿಕ್‌ ಸಮಸ್ಯೆ ನಿವಾರಣೆಗೆ ಪೊಲೀಸರಿಂದ ಮಾಸ್ಟರ್‌ ಪ್ಲ್ಯಾನ್!

ನ್ಯೂಜಿಲೆಂಡ್‌ ಪರ ಇನಿಂಗ್ಸ್‌ ಆರಂಭಿಸಿದ ಫಿನ್‌ ಆಲೆನ್‌ ಹಾಗೂ ಟಿಮ್‌ ಸೀಫರ್ಟ್‌ ಜೋಡಿ ಹೆಚ್ಚುಹೊತ್ತು ಜೊತೆಯಾಗಿ ಆಡಲಿಲ್ಲ. ಕಳೆದ ಪಂದ್ಯದಲ್ಲಿ ಮಿಂಚಿದ್ದ ಸೀಫರ್ಟ್‌ ಈ ಪಂದ್ಯದಲ್ಲಿ ಕೇವಲ 5 ರನ್‌ ಗಳಿಸಿ ಅರ್ಷದೀಪ್‌ಗೆ ಔಟ್‌ ಆದರು. ನಂತರ ಎರಡನೇ ವಿಕೆಟ್‌ಗೆ ಜೊತೆಯಾದ ಆಲೆನ್‌ ಹಾಗೂ ರಚಿನ್‌ ರವೀಂದ್ರ ಕೆಲಕಾಲ ಕ್ರೀಸ್‌ನಲ್ಲಿ ಸಮಯ ಕಳೆದು 100 ರನ್‌ಗಳ ಜೊತೆಯಾಟವನ್ನು ಆಡಿದರು. 17 ಎಸೆತಗಳಲ್ಲಿ 30 ರನ್‌ ಗಳಿಸಿದ ಬಳಿಕ ರಚಿನ್‌ ಔಟ್‌ ಆದರು.

ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಭಾರತ ತಂಡ, ಸಂಜು ಸ್ಯಾಮ್ಸನ್‌ ಅವರನ್ನು ಬಹುಬೇಗ ಕಳೆದುಕೊಂಡಿತು. 30 ರನ್‌ ಗಳಿಸಿದ ಬಳಿಕ ಅಪಾಯಕಾರಿ ಅಭಿಷೇಕ್‌ ಶರ್ಮಾ ಕೂಡ ಔಟ್‌ ಆದರು. ಆದರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಇಶಾನ್‌ ಕಿಶನ್‌, ಸಂಪೂರ್ಣ ವಿಭಿನ್ನವಾಗಿ ಕಂಡರು. ಸ್ಪೋಟಕ ಬ್ಯಾಟ್‌ ಮಾಡಿದ ಇವರು. ಕೇವಲ 42 ಎಸೆತಗಳಲ್ಲಿ ಚೊಚ್ಚಲ ಶತಕವನ್ನು ಸಿಡಿಸಿದರು ಹಾಗೂ ಮೂರನೇ ವಿಕೆಟ್‌ಗೆ ಸೂರ್ಯಕುಮಾರ್‌ ಯಾದವ್‌ ಜೊತೆ 137 ರನ್‌ಗಳನ್ನು ಆಡಿದರು. ಅಂತಿಮವಾಗಿ ಇಶಾನ್‌, 43 ಎಸೆತಗಳಲ್ಲಿ 10 ಭರ್ಜರಿ ಸಿಕ್ಸರ್‌ ಹಾಗೂ 6 ಬೌಂಡರಿಗಳೊಂದಿಗೆ 103 ರನ್‌ ಗಳಿಸಿ ಔಟ್‌ ಆದರು.

Kishor KV