ತಾಯಿಯೊಂದಿಗೆ ಮುದ್ದು ಮರಿಗಳ ತುಂಟಾಟ – ಹುಲಿಗಳ ಮನಮೋಹಕ ದೃಶ್ಯಕ್ಕೆ ಪ್ರವಾಸಿಗರು ಫಿದಾ!

ತಾಯಿಯೊಂದಿಗೆ ಮುದ್ದು ಮರಿಗಳ ತುಂಟಾಟ – ಹುಲಿಗಳ ಮನಮೋಹಕ ದೃಶ್ಯಕ್ಕೆ ಪ್ರವಾಸಿಗರು ಫಿದಾ!

ಸಾಮಾನ್ಯವಾಗಿ ಮನುಷ್ಯರ ಮತ್ತು ಪ್ರಾಣಿಗಳ ಬಹುತೇಕ ವರ್ತನೆಗಳು ಒಂದೇ ರೀತಿಯದ್ದಾಗಿರುತ್ತವೆ. ಮನುಷ್ಯ ಹೇಗೆ ತನ್ನ ಮಕ್ಕಳ ಜೊತೆ ಭಾವನಾತ್ಮಕವಾದ ಸಂಬಂಧವನ್ನು ಹೊಂದಿರುತ್ತಾನೆಯೊ, ಹಾಗೆಯೇ ಪ್ರಾಣಿಗಳು ಸಹ ತಮ್ಮ ಮಕ್ಕಳ ಬಗ್ಗೆ ಇಂತಹದೇ ಸಂಬಂಧವನ್ನು ಹೊಂದಿರುತ್ತವೆ. ಎಂದರೆ ತಮ್ಮ ಮರಿಗಳನ್ನು ಜೋಪಾನ ಮಾಡುವುದು, ಅವುಗಳನ್ನು ಯಾರಿಂದಲೂ ತೊಂದರೆಯಾಗದಂತೆ ಜೋಪಾನವಾಗಿ ನೋಡಿಕೊಳ್ಳುವುದು, ಮರಿಗಳನ್ನು ಮುದ್ದಾಡುವುದು ಹೀಗೆ ಒಂದೇ ಎರಡೇ, ಮನುಷ್ಯ ತೋರುವ ಬಹುತೇಕ ವರ್ತನೆಗಳನ್ನು ಪ್ರಾಣಿಗಳು ತೋರುತ್ತವೆ ಅಂತ ಹೇಳಿದರೆ ಸುಳ್ಳಾಗುವುದಿಲ್ಲ. ಇದೀಗ ಇಲ್ಲೊಂದು ಹುಲಿ ತನ್ನ ಮರಿಗಳನ್ನು ಮುದ್ದಾಡುತ್ತಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಕೈ ನಾಯಕನ ಕಾರಿನಲ್ಲಿ ಕೋಟಿ ಕೋಟಿ ಹಣ– ಕಾರು ಸಮೇತ ಹಣ ಸೀಜ್

ಪ್ರಾಣಿಗಳು ಕೂಡ ಮನುಷ್ಯರಂತೆ ತಮ್ಮ ಮರಿಗಳೊಂದಿಗೆ ಆಟ ಆಡುತ್ತಾ ಕಾಲ ಕಳೆಯುತ್ತವೆ. ಅವುಗಳ ಮುದ್ದಾದ ಆಟವನ್ನು  ನೋಡುವುದೇ ಚೆಂದ. ಮೂಕ ಪ್ರಾಣಿಗಳ ಆಟ ತುಂಟಾಟ ನಮ್ಮ ಮನಸ್ಸಿಗೆ ಒಂದು ರೀತಿಯ ಮುದವನ್ನು ನೀಡುತ್ತದೆ. ಪ್ರಾಣಿಗಳಿಗೆ ಸಂಬಂಧಿಸಿದ ಇಂತಹ ಮುದ್ದಾದ ದೃಶ್ಯಾವಳಿಗಳು  ಸೋಷಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ಹರಿದಾಡುತ್ತಿದ್ದು, ತಾಯಿ ಹುಲಿಯೊಂದು ತನ್ನ ಮುದ್ದು ಮರಿಗಳ ಜೊತೆಗೂಡಿ ಆಟವಾಡಿದೆ. ಈ ಕ್ಯೂಟ್ ವಿಡಿಯೋ ಇದೀಗ ನೆಟ್ಟಿಗರ ಮನ ಸೆಳೆಯುತ್ತಿದೆ.

ತಾಯಿ ಹುಲಿ ತನ್ನ ಮರಿಗಳೊಂದಿಗೆ ಆಟವಾಡುತ್ತಿರುವಂತಹ ಈ ಮುದ್ದಾದ ದೃಶ್ಯವನ್ನು ರಾಜಸ್ಥಾನದಲ್ಲಿನ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿಯಲಾಗಿದೆ. ಇಲ್ಲಿನ ರಿದ್ದಿ ಹೆಸರಿನ ಹೆಣ್ಣು ಹುಲಿ ಪ್ರಶಾಂತವಾದ ವಾತಾವರಣದಲ್ಲಿ ತನ್ನ ಎರಡು ಮರಿಗಳೊಂದಿಗೆ ಆಟವಾಡುತ್ತಾ ಸಮಯವನ್ನು ಕಳೆದಿದೆ. ತಾಯಿ ಮಕ್ಕಳ ನಡುವಿನ ಸುಂದರ ಬಾಂಧವ್ಯದ ಈ ಹೃದಯಸ್ಪರ್ಶಿ ದೃಶ್ಯವನ್ನು ವಿಷ್ಣು ಸಿಂಗ್ ರಾಥೋಡ್ ಎಂಬವರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.  ಈ ವೈರಲ್ ವಿಡಿಯೋವನ್ನು ರಣಥಂಬೋರ್ ರಾಷ್ಟ್ರೀಯ ಉದ್ಯಾನವನದ (@ranthamborepark) ಅಧೀಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋ ರಿದ್ದಿ ಹೆಸರಿನ ಹೆಣ್ಣು ಹುಲಿಯು ಉದ್ಯಾನವನದಲ್ಲಿ ತನ್ನೆರಡು ಮರಿಗಳೊಂದಿಗೆ ಆಟವಾಡುತ್ತಾ, ಮೋಜು ಮಸ್ತಿ ಮಾಡುತ್ತಿರುವಂತಹ ಸುಂದರ ದೃಶ್ಯಾವಳಿಯನ್ನು ಕಾಣಬಹುದು.

Shwetha M

Leave a Reply

Your email address will not be published. Required fields are marked *