ಟೀ ಎಸ್ಟೇಟ್​ ನಲ್ಲಿ ಹುಲಿರಾಯನ ರೌಂಡ್ಸ್ – ಜೀಪ್​ ನಲ್ಲಿ ಹೋದವರಿಗೆ ಆಗಿದ್ದೇನು..?

ಟೀ ಎಸ್ಟೇಟ್​ ನಲ್ಲಿ ಹುಲಿರಾಯನ ರೌಂಡ್ಸ್ – ಜೀಪ್​ ನಲ್ಲಿ ಹೋದವರಿಗೆ ಆಗಿದ್ದೇನು..?

tiger-walking-in-tea-garden ಟೀ ಎಸ್ಟೇಟ್ ಅಂದ್ರೆ ನಿಮಗೆಲ್ಲಾ ಗೊತ್ತೇ ಇರುತ್ತೆ. ಇಲ್ಲ ಟಿವಿಯಲ್ಲಾದ್ರೂ ನೋಡಿರುತ್ತೀರಾ. ನಿತ್ಯ ಹತ್ತಾರು ಕಾರ್ಮಿಕರು ಕೆಲಸ ಮಾಡ್ತಿರುತ್ತಾರೆ. ಆದ್ರೆ ಈ ಎಸ್ಟೇಟ್​ನಲ್ಲಿ ಮಾತ್ರ ಹುಲಿರಾಯನೇ ಓಡಾಡ್ತಿದ್ದಾನೆ.

ಇದನ್ನೂ ಓದಿ : ಗೂಗಲ್ ‘ವಜಾ’ಸ್ತ್ರದ ವಿರುದ್ಧ ರೊಚ್ಚಿಗೆದ್ದ ಸಿಬ್ಬಂದಿ – ಸಾವಿರಾರು ಜನ ಬೀದಿಗಿಳಿದು ಹೋರಾಟ!

ಟೀ ಎಸ್ಟೇಟ್​ನಲ್ಲಿ ಬೃಹತ್ ಗಾತ್ರದ ಹುಲಿ ಪ್ರತ್ಯಕ್ಷವಾಗಿದೆ. ಟೀ ಎಸ್ಟೇಟ್​ ನಡುವಿನ ಕಿರಿದಾದ ದಾರಿಯಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿತ್ತು. ಭಾರತೀಯ ಅರಣ್ಯಾಧಿಕಾರಿ ಸುಸಂತಾ ನಂದಾ ತಮ್ಮ ಟ್ವಿಟ್ಟರ್ ಅಕೌಂಟ್​ನಲ್ಲಿ ಮತ್ತೊಂದು ಕುತೂಹಲಕಾರಿ ವಿಡಿಯೋವನ್ನ ಶೇರ್ ಮಾಡಿದ್ದಾರೆ. ಕಾಡಂಚಿನ ಪಕ್ಕದ ಟೀ ಎಸ್ಟೇಟ್​ನಲ್ಲಿ ಜೀಪ್​ನಲ್ಲಿ ಸಾಗುವಾಗ ಹುಲಿ ಕಂಡಿದೆ. ಇದನ್ನ ವನ್ಯಜೀವಿ ಛಾಯಾಗ್ರಾಹಕ ವಿಡಿಯೋ ಮಾಡಿದ್ದಾರೆ.

‘ಇಲ್ಲೊಂದು ಟೀ ಎಸ್ಟೇಟ್​ನಲ್ಲಿ ಬೃಹತ್ ಹುಲಿ ಇದೆ(tiger-walking-in-tea-garden). ಕೆಲವರು ಹುಲಿ ನೋಡಲು ಟೈಗರ್ ರಿವರ್ಸ್ ಸಫಾರಿಗೆ ಹೋಗುತ್ತಾರೆ. ಆದ್ರೆ ಕೆಲವೊಮ್ಮೆ ಅಲ್ಲಿ ಹುಲಿಯೇ ಕಾಣಲ್ಲ. ಆದ್ರೆ ಕೆಲವರು ಮಾತ್ರ ಇಂಥ ಕ್ಷಣವನ್ನ ಕಣ್ತುಂಬಿಕೊಳ್ಳಲು ಅದೃಷ್ಟವಂತರು’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ವಿಡಿಯೋ ಪೋಸ್ಟ್ ಮಾಡಿ ಕೆಲವೇ ಕ್ಷಣಗಳಲ್ಲಿ ಪ್ರಾಣಿಪ್ರಿಯರು ಶೇರ್ ಮಾಡಿದ್ದಾರೆ. ಇನ್ನೂ ಕೆಲವರು ನೀವೇ ಅದೃಷ್ಟವಂತರು ಎಂದು ಕಮೆಂಟ್ ಮಾಡಿದ್ದಾರೆ.

suddiyaana