‘ನರಭಕ್ಷಕ’ನ ಅಟ್ಟಹಾಸಕ್ಕೆ ಇಬ್ಬರು ಬಲಿ – ‘ಹುಲಿ ಮದುವೆ ಮಾಡಿಕೊಳ್ತೀವಿ’ ಎಂದಿದ್ದೇಕೆ ಮಾಜಿ ಬಿಜೆಪಿ ಶಾಸಕ..!?

‘ನರಭಕ್ಷಕ’ನ ಅಟ್ಟಹಾಸಕ್ಕೆ ಇಬ್ಬರು ಬಲಿ – ‘ಹುಲಿ ಮದುವೆ ಮಾಡಿಕೊಳ್ತೀವಿ’ ಎಂದಿದ್ದೇಕೆ ಮಾಜಿ ಬಿಜೆಪಿ ಶಾಸಕ..!?

ಕರುನಾಡ ಕಾಶ್ಮೀರ ಅಂತಾನೇ ಕರೆಯುವ ಮಡಿಕೇರಿಯಲ್ಲಿ ನರಹಂತಕ ಹುಲಿಗಳ ಅಟ್ಟಹಾಸ ಮಿತಿಮೀರಿದೆ. 12 ಗಂಟೆಗಳ ಅವಧಿಯಲ್ಲೇ ಇಬ್ಬರು ಬಲಿಯಾಗಿದ್ದಾರೆ. ನಿನ್ನೆ ಸಂಜೆ 18 ವರ್ಷದ ಯುವಕನನ್ನ ಕೊಂದು ಹಾಕಿದ್ದ ಕ್ರೂರ ಮೃಗ ಇಂದು 75 ವರ್ಷದ ವೃದ್ಧನ ರಕ್ತ ಹೀರಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಇಬ್ಬರ ಸಾವಿನ ನ್ಯಾಯಕ್ಕೆ ಆಗ್ರಹಿಸಿ ಪ್ರತಿಭಟನೆ ಕೂಡ ನಡೆದಿದೆ.

ಇದನ್ನೂ ಓದಿ : ಹುಲಿ ದಾಳಿಗೆ ಇಬ್ಬರು ಬಲಿ – ಸಂಜೆ ಮೊಮ್ಮಗ, ಬೆಳಗ್ಗೆ ಅಜ್ಜನ ಕೊಂದ ಕ್ರೂರ ವ್ಯಾಘ್ರ!

ಮತ್ತೊಂದೆಡೆ ವಿಧಾನಸಭೆ ಅಧಿವೇಶನದಲ್ಲೂ ಇವತ್ತು ಹುಲಿ ದಾಳಿಯ ಬಗ್ಗೆ ಪ್ರಸ್ತಾಪ ಮಾಡಲಾಗಿದೆ. ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಮಾತನಾಡಿ ಪದೇಪದೆ ಹುಲಿದಾಳಿಯಾಗ್ತಿದೆ. ಒಂದು ಸಲ ಹುಲಿ ಮನುಷ್ಯರ ರಕ್ತ ನೋಡಿತ್ತು. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ನಿರ್ಲಕ್ಷ್ಯ ಮಾಡಿದ್ರು. ಇವತ್ತು ಮತ್ತೆ 75  ವರ್ಷದ ವೃದ್ಧನನ್ನ ಕೊಂದಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹುಲಿ ದಾಳಿ ಕಂಟ್ರೋಲ್ ಮಾಡಲು ಆಗದಿದ್ರೆ ನಮಗೆ ಬಿಡಿ. ನಾವು ಹುಲಿ ಕಂಟ್ರೋಲ್ ಮಾಡ್ತೀವಿ. ನಮ್ಮಲ್ಲಿ ಒಂದು ಪದ್ದತಿ ಇದೆ. ಅದ್ರಂತೆ  ಹುಲಿ ಮದುವೆ ಮಾಡಿಕೊಳ್ತೀವಿ ಅಂದ್ರು. ಕೊಡಗಿನಲ್ಲಿ ಹುಲಿ ಮದುವೆ ಅಂದರೆ ಹುಲಿಯನ್ನ ಕೊಲ್ಲೋದು ಎಂದರ್ಥ.

ಇದೇ ವೇಳೆ ಮಾತನಾಡಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ನಿನ್ನೆ ಬಂದು ಒಬ್ಬನನ್ನ ತಿಂದು ಇವತ್ತು ಮತ್ತೆ ಬಂದು ಮತ್ತೊಬ್ಬರನ್ನ ಕೊಲ್ಲುತ್ತೆ ಅಂದ್ರೆ ಏನರ್ಥ. ಡಿಎಫ್ ಒ ಮೇಲೆ ಕ್ರಮ ಕೈಗೊಳ್ಳೋಕೆ ಹೇಳಿ ಅಂದ್ರು. ಹಾಗೇ ಹುಣಸೂರು ಶಾಸಕ ಹೆಚ್.ಪಿ ಮಂಜುನಾಥ್ ಮಾತನಾಡಿ ಹುಲಿ ದಾಳಿಯಾದಾಗ ಶಾಸಕರನ್ನೇ ಅಪರಾಧಿ ಮಾಡ್ತಾರೆ. ಎಷ್ಟೋ ಸಲ ನಾವು ಫೋನ್ ಕೂಡ ರಿಸೀವ್ ಮಾಡಲ್ಲ ಎಂದಿದ್ದಾರೆ.

suddiyaana