‘ಟೈಗರ್ 3’ ಭರ್ಜರಿ ಕಲೆಕ್ಷನ್ – ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್

‘ಟೈಗರ್ 3’ ಭರ್ಜರಿ ಕಲೆಕ್ಷನ್ – ಬಾಕ್ಸ್ಆಫೀಸ್‌ನಲ್ಲಿ ಧೂಳೆಬ್ಬಿಸಿದ ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಈ ಬಾರಿ ದೀಪಾವಳಿ ಹಬ್ಬದ ಗಿಫ್ಟ್ ಭರ್ಜರಿಯಾಗಿಯೇ ಸಿಕ್ಕಿದೆ. ದೀಪಾವಳಿ ದಿನವೇ ಭರ್ಜರಿಯಾಗಿ ರಿಲೀಸ್ ಆಗಿರುವ ‘ಟೈಗರ್ 3’ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತು. ಎರಡನೇ ದಿನ ಚಿತ್ರದ ಕಲೆಕ್ಷನ್ ಇನ್ನಷ್ಟು ಹೆಚ್ಚಾಯಿತು. ಗಲ್ಲಾ ಪೆಟ್ಟಿಗೆಯಲ್ಲಿ ಮೂರನೇ ದಿನವೂ ಕೂಡಾ ಸಲ್ಲುಭಾಯ್ ಚಿತ್ರ ಧೂಳೆಬ್ಬಿಸಿದೆ.

ಇದನ್ನೂ ಓದಿ: ಸಂಗೀತಾ ಮತ್ತು ಸ್ನೇಹಿತ್ ಮದುವೆ ಫಿಕ್ಸ್ ?- ಕಣ್ಣೀರಲ್ಲಿ ಕಾರ್ತಿಕ್, ವಿನಯ್ ಗೌಡ ಮನಸಾರೆ ನಕ್ಕಿದ್ದೇಕೆ?

ಬಾಲಿವುಡ್ ನಟ ಸಲ್ಮಾನ್ ಖಾನ್ ಸಿನಿಮಾ ‘ಟೈಗರ್ 3’ ರಿಲೀಸ್ ಆದ ಎರಡೇ ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದೆ. ಇದೀಗ ಮೂರನೇ ದಿನವೂ ಭರ್ಜರಿ ಕಲೆಕ್ಷನ್ ಕಾಣುತ್ತಿದೆ. ಹೀಗಾಗಿ ಸಲ್ಮಾನ್ ಖಾನ್ ಖುಷಿಯ ಅಲೆಯಲ್ಲಿ ತೇಲುತ್ತಿದ್ದಾರೆ. ‘ಟೈಗರ್ 3’ ಸಿನಿಮಾದ ಸಕ್ಸಸ್ ಬಾಲಿವುಡ್ ಬ್ಯಾಡ್‌ಬಾಯ್ ಮುಖದಲ್ಲಿ ಸಂತಸ ತಂದಿದೆ. ನವೆಂಬರ್ 12ರಂದು ಬಿಡುಗಡೆ ಆದ ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಮೊದಲ ಮೂರು ದಿನಗಳ ಕಾಲ ಭರ್ಜರಿ ಪ್ರದರ್ಶನ ಕಂಡ ‘ಟೈಗರ್ 3’ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್  150 ಕೋಟಿ ರೂಪಾಯಿ. ಮೊದಲ ದಿನ ‘ಟೈಗರ್ 3’ ಚಿತ್ರಕ್ಕೆ ದೊಡ್ಡ ಓಪನಿಂಗ್ ಸಿಕ್ಕಿತು. ನ.12ರಂದು ಈ ಸಿನಿಮಾ ಮಾಡಿದ್ದು ಬರೋಬ್ಬರಿ 44.50 ಕೋಟಿ ರೂಪಾಯಿ. ನಂತರ ಎರಡನೇ ದಿನ 59 ಕೋಟಿ ರೂಪಾಯಿ ಆದಾಯ ಹರಿದುಬಂತು. ಮೂರನೇ ದಿನ 42.50 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ಈ ಸಿನಿಮಾದ ಒಟ್ಟು ಕಲೆಕ್ಷನ್ ಮೂರೇ ದಿನದಲ್ಲಿ 145 ಕೋಟಿ ರೂಪಾಯಿ ಮೀರಿದೆ. 150 ಕೋಟಿ ರೂಪಾಯಿ ಗಡಿಮುಟ್ಟಲು ‘ಟೈಗರ್ 3’ ಚಿತ್ರ ಸಜ್ಜಾಗಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್, ಶಾರುಖ್ ಖಾನ್, ಇಮ್ರಾನ್ ಹಷ್ಮಿ, ಹೃತಿಕ್ ರೋಷನ್ ಮುಂತಾದವರು ‘ಟೈಗರ್ 3’ ಸಿನಿಮಾದಲ್ಲಿ ನಟಿಸಿದ್ದಾರೆ. ಮನೀಶ್ ಶರ್ಮಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಮೂಲಕ ಅದ್ದೂರಿಯಾಗಿ ಈ ಸಿನಿಮಾ ಮೂಡಿಬಂದಿದೆ. ಬೇರೆ ಬೇರೆ ದೇಶಗಳ ಹಲವು ಲೊಕೇಷನ್ಗಳಲ್ಲಿ ಆ್ಯಕ್ಷನ್ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ರಿಚ್ ಆಗಿರುವ ಮೇಕಿಂಗ್ ಕಂಡು ಫ್ಯಾನ್ಸ್ ವಾವ್ ಎನ್ನುತ್ತಿದ್ದಾರೆ. ಈ ಸಿನಿಮಾದಿಂದ ಸಲ್ಮಾನ್ ಖಾನ್ ಅವರ ಜನಪ್ರಿಯತೆ ಹೆಚ್ಚಾಗಿದೆ.

Sulekha