ರೇಟ್ ದುಬಾರಿಯಾದರೂ ತಲೆಕೆಡಿಸಿಕೊಳ್ಳದ ಫ್ಯಾನ್ಸ್- ‘ಅವತಾರ್ ಟು’ ಚಿತ್ರದ ಟಿಕೆಟ್ಸ್ ಸೋಲ್ಡ್ ಔಟ್
ಡಿಸೆಂಬರ್ 16ಕ್ಕೆ ‘ಅವತಾರ್ ಟು’ ರಿಲೀಸ್

ರೇಟ್ ದುಬಾರಿಯಾದರೂ ತಲೆಕೆಡಿಸಿಕೊಳ್ಳದ ಫ್ಯಾನ್ಸ್- ‘ಅವತಾರ್ ಟು’ ಚಿತ್ರದ ಟಿಕೆಟ್ಸ್ ಸೋಲ್ಡ್ ಔಟ್ಡಿಸೆಂಬರ್ 16ಕ್ಕೆ ‘ಅವತಾರ್ ಟು’ ರಿಲೀಸ್

ಹಾಲಿವುಡ್ ಚಿತ್ರ ಅವತಾರ್ 2 ತೆರೆ ಮೇಲೆ ಸಜ್ಜಾಗಿದೆ. ಡಿಸೆಂಬರ್ 16ಕ್ಕೆ ವಿಶ್ವದಾದ್ಯಂತ ರಿಲೀಸ್ ಆಗಲಿದೆ. 2009ರಲ್ಲಿ ತೆರೆ ಕಂಡ ಅವತಾರ್ ಚಿತ್ರ ಜಗತ್ತಿನೆಲ್ಲೆಡೆ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಇದೀಗ ಅವತಾರ್ ಟು ಚಿತ್ರ ಕೂಡಾ ಇದೇ ಮಾದರಿಯಲ್ಲಿದ್ದು, ಈಗಾಗಲೇ ಚಿತ್ರದ ಟಿಕೆಟ್ಸ್ ಸೋಲ್ಡ್‌ ಔಟ್ ಆಗಿದೆ. ಬರೀ ಇಷ್ಟೇ ಅಲ್ಲ. ಚಿತ್ರದ ಟಿಕೆಟ್ ದರ ಕೂಡಾ ಬಲು ದುಬಾರಿಯಾಗಿದೆ.

ಇದನ್ನೂ ಓದಿ:  ರಶ್ಮಿಕಾ ಮಂದಣ್ಣ ‘ಕೈ’ ಸನ್ನೆಗೆ ರಿಷಬ್ ಶೆಟ್ಟಿ ‘ಕೈ’ ಸನ್ನೆಯಿಂದಲೇ ಟಾಂಗ್..!

ಹದಿಮೂರು ವರ್ಷಗಳ ಹಿಂದೆ ಕಮಾಲ್ ಮಾಡಿದ್ದ ಈ ಚಿತ್ರದ ಮುಂದಿನ ವರ್ಷನ್ ಅವತಾರ್ ಟು ಚಿತ್ರದ ಮೇಲೂ ನಿರ್ದೇಶಕ ಜೇಮ್ಸ್ ಕ್ಯಾಮರಾನ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರ ನೋಡಲು ಫ್ಯಾನ್ಸ್‌ ಕೂಡಾ ಕಾತರರಾಗಿದ್ದಾರೆ. ಅವತಾರ್ ಟು ಚಿತ್ರದ ಟ್ರೈಲರ್ ನೋಡಿಯೇ ಮೆಚ್ಚಿಕೊಂಡಿರುವ ಅಭಿಮಾನಿಗಳು ಚಿತ್ರ ಬಿಡುಗಡೆಗೂ ಮೊದಲೇ ಟಿಕೆಟ್ ಬುಕ್ ಮಾಡ್ತಿದ್ದಾರೆ.

ವಿಶ್ವದ ಹಲವು ದೇಶಗಳಲ್ಲಿ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು, ಭಾರತದಲ್ಲೂ ಟಿಕೆಟ್‌ಗೆ ಮುಂಗಡ ಬುಕ್ಕಿಂಗ್ ಪ್ರಾರಂಭವಾಗಿದೆ. ಬೆಂಗಳೂರು, ಚೆನ್ನೈ, ಇಂದೋರ್, ಮುಂಬೈ ಮುಂತಾದ ನಗರಗಳಲ್ಲಿ ಮುಂಗಡ ಬುಕ್ಕಿಂಗ್ ಓಪನ್ ಆಗಿದೆ. ಜೊತೆಗೆ ಸಿನಿಮಾ ಟಿಕೆಟ್ ದರ ಕೂಡಾ ದುಬಾರಿಯಾಗಿದೆ. ಇನ್ನು ಟಿಕೆಟ್ ದರ ಕೇಳಿ ತಲೆತಿರುಗುವಂತಾದರೂ ಕೂಡಾ ಫ್ಯಾನ್ಸ್ ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಈಗಾಗಲೇ ಎಲ್ಲಾ ಕಡೆ ಟಿಕೆಟ್ ಸೋಲ್ಡ್ ಔಟ್ ಆಗಿರೋದೇ ಸಾಕ್ಷಿ. ಇನ್ನು ಬೆಂಗಳೂರಲ್ಲಿ 1450 ರೂ.- ಐಮ್ಯಾಕ್ಸ್ 3ಡಿ, ದೆಹಲಿ 1000- ಐಮ್ಯಾಕ್ಸ್ 3ಡಿ, ಮುಂಬೈ 970- 4ಡಿಎಕ್ಸ್ 3ಡಿ, ಕೋಲ್ಕತ್ತಾ 770 -ಐಮ್ಯಾಕ್ಸ್ 3ಡಿ, ಅಹ್ಮದ್‌ಬಾದ್ 750- 4ಡಿಎಕ್ಸ್ 3ಡಿ, ಇಂದೋರ್ 700- 4ಡಿಎಕ್ಸ್ 3ಡಿ, ಹೈದರಾಬಾದ್ 350- 4ಡಿಎಕ್ಸ್ 3ಡಿ ಟಿಕೆಟ್ ದರ ನಿಗದಿಯಾಗಿದೆ.

suddiyaana