ಮಂಡ್ಯದಲ್ಲಿ ಸ್ಟಾರ್ ಚಂದ್ರುಗೆ ಟಿಕೆಟ್ – ಶಿವಮೊಗ್ಗದಲ್ಲಿ ಗೆದ್ದು ಬೀಗುತ್ತಾರಾ ಗೀತಕ್ಕ?

ಮಂಡ್ಯದಲ್ಲಿ ಸ್ಟಾರ್ ಚಂದ್ರುಗೆ ಟಿಕೆಟ್ –  ಶಿವಮೊಗ್ಗದಲ್ಲಿ ಗೆದ್ದು ಬೀಗುತ್ತಾರಾ ಗೀತಕ್ಕ?

ಸ್ಟಾರ್ ಚಂದ್ರು ಎಂದು ಗುರುತಿಸಲ್ಪಡುವ ಉದ್ಯಮಿ ವೆಂಕಟರಮಣೇಗೌಡ ಅವರಿಗೆ ಕಾಂಗ್ರೆಸ್ ಪಕ್ಷವು ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ನೀಡಿದೆ. ಎಐಸಿಸಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಮಂಡ್ಯ ಸೇರಿದಂತೆ ರಾಜ್ಯ 7 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇದರಲ್ಲಿ ಶಿವಮೊಗ್ಗ ಟಿಕೆಟ್ ಪಡೆದ ಗೀತಾ ಶಿವರಾಜ್ ಕುಮಾರ್ ಕೂಡಾ ಪ್ರಮುಖರು.

ಇದನ್ನೂ ಓದಿ:ಮಂಡ್ಯದಲ್ಲಿ ಪಾರುಪತ್ಯ ಸಾಧಿಸಲು ಕಾಂಗ್ರೆಸ್ ರಣತಂತ್ರ – ಸುಮಲತಾ, ಹೆಚ್‌ಡಿಕೆಗೆ ಕಾದಿದ್ಯಾ ಶಾಕ್?

ಮಂಡ್ಯದಲ್ಲಿ ಈ ಬಾರಿ ಹೊಸ ಮುಖ ಸ್ಟಾರ್‌ ಚಂದ್ರುಗೆ ಕಾಂಗ್ರೆಸ್‌ ಮಣೆ ಹಾಕಿದೆ.. ಮೇಲ್ನೋಟಕ್ಕೆ 8 ವಿಧಾನಸಭಾ ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಮತ್ತು ಒಂದರಲ್ಲಿ ಕಾಂಗ್ರೆಸ್‌ ಬೆಂಬಲಿತ ದರ್ಶನ್‌ ಪುಟ್ಟಣ್ಣಯ್ಯ ಶಾಸಕರಾಗಿದ್ದಾರೆ.. ಜೆಡಿಎಸ್‌ ಕೇವಲ ಒಂದು ಸೀಟು ಗೆದ್ದಿದೆ. ಆದ್ರೆ ಲೆಕ್ಕ ಇಲ್ಲಿಗೇ ಮುಗಿಯಲ್ಲ.. ಯಾಕಂದ್ರೆ 2019ರಲ್ಲಿ ಎಂಟಕ್ಕೆ ಎಂಟೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಶಾಸಕರಿದ್ದಾರೆ ಎಂಬ ವಿಶ್ವಾಸದಲ್ಲಿಯೇ ತಮ್ಮ ಪುತ್ರನ ರಾಜಕೀಯ ಭವಿಷ್ಯ ಕಟ್ಟಲು ನಿಖಿಲ್‌ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಿದ್ದರು ಹೆಚ್‌.ಡಿ.ಕುಮಾರಸ್ವಾಮಿ.. ನಂತರದ ರಿಸಲ್ಟ್‌ ಏನಾಯ್ತು ಎನ್ನುವುದು ಇಡೀ ದೇಶಕ್ಕೇ ಗೊತ್ತಿದೆ.. ಆದರೆ ತೀರಾ ನಿಖಿಲ್‌ ರೀತಿಯಲ್ಲಿ ಸ್ಟಾರ್‌ ಚಂದ್ರ ಸಪ್ಪೆ ಆಗಲಾರರು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರ.. ಹಾಗಿದ್ದರೂ ಗೆದ್ದೇ ಗೆಲ್ಲುವ ಪೂರ್ಣ ವಿಶ್ವಾಸ ಕೈ ನಾಯಕರಿಗೆ ಇದ್ದಂತೆ ಇಲ್ಲ.. ಇನ್ನು ಶಿವಮೊಗ್ಗದಲ್ಲಿ ಗೀತಾ ಶಿವರಾಜ್‌ ಕುಮಾರ್‌ ಎರಡನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.. 2014ರಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೀತಕ್ಕ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ.. ಆದರೆ ಯಡಿಯೂರಪ್ಪ ಪುತ್ರನ ವಿರುದ್ಧ ಗೆಲ್ಲಬೇಕು ಅಂದ್ರೆ ಕೇವಲ ಸ್ಟಾರ್‌ ವರ್ಚಸ್ಸು ಸಾಕಾಗಲ್ಲ. ಗೀತಕ್ಕನಿಗಿಂತ ಕುಮಾರ್‌ ಬಂಗಾರಪ್ಪ ಅವರೇನಾದ್ರೂ ಕಾಂಗ್ರೆಸ್‌ ಅಭ್ಯರ್ಥಿ ಆಗಿರುತ್ತಿದ್ದರೆ ಪರಿಸ್ಥಿತಿ ಭಿನ್ನವಾಗುತ್ತಿತ್ತೋ ಏನೋ.. ಆದ್ರೆ ಮಧು ಬಂಗಾರಪ್ಪ ಅವರ ವೈಯಕ್ತಿಕ ನಿರ್ಧಾರದಿಂದ ಅಂತಹ ರಾಜಕೀಯ ಸನ್ನಿವೇಶ ಸೃಷ್ಟಿಯಾಗಿಲ್ಲ.. ಈಗ ಗೀತಾ ಶಿವರಾಜ್‌ಕುಮಾರ್‌ ಏನಾಗುತ್ತದೆ ಅಂತ ಹೇಳೋದು ಸ್ವಲ್ಪ ಕಷ್ಟವಿದೆ..

ಉಳಿದಂತೆ ಹಾವೇರಿ ಮತ್ತು ವಿಜಯಪುರದಲ್ಲೂ ಅಂಕಿ ಅಂಶದ ಪ್ರಕಾರ ಕಾಂಗ್ರೆಸ್‌ ಹೆಚ್ಚು ಶಾಸಕರನ್ನು ಹೊಂದಿರುವ ಮತ ಕ್ಷೇತ್ರಗಳು.. ಆದ್ರೆ ಈ ಭಾಗದಲ್ಲಿ ಮೋದಿ ಪ್ರಭಾವ ಕೂಡ ಹೆಚ್ಚು ಕೆಲಸ ಮಾಡುತ್ತದೆ.. ಜೊತೆಗೆ ಯಡಿಯೂರಪ್ಪ ಪ್ರಭಾವ ಕೂಡ ವರ್ಕೌಟ್‌ ಆಗಬಹುದು.. ಕಾಂಗ್ರೆಸ್‌ ನಾಯಕರು ಪೂರ್ಣ ಮನಸ್ಸಿನಿಂದ ಕೆಲಸ ಮಾಡಿದರೆ ಮಾತ್ರ ಗೆಲುವಿನ ಕನಸು ಕಾಣಲು ಅವಕಾಶವಿದೆ.. ಇಲ್ಲದೇ ಹೋದ್ರೆ ಆರಂಭದಲ್ಲಿ ಗೆಲವನ್ನು ಮರೆತುಬಿಡುವುದು ಒಳಿತು.. ಯಾಕಂದ್ರೆ ಕಾಂಗ್ರೆಸ್‌ಅನ್ನು ಸೋಲಿಸಲು ಬಿಜೆಪಿ ಮಾತ್ರವೇ ಬೇಕಿಲ್ಲ.. ಕಾಂಗ್ರೆಸ್ ಕೂಡ ಎಷ್ಟೋ ಬಾರಿ ಸಾಕಾಗುತ್ತದೆ ಎನ್ನುವುದು ರಾಜಕೀಯದ ಇತಿಹಾಸದಲ್ಲಿರುವ ವಾಸ್ತವ.. ಹೀಗಾಗಿ ಕಾಂಗ್ರೆಸ್ ಬಿಡುಗಡೆ ಮಾಡಿರುವ ಮೊದಲ ಏಳು ಅಭ್ಯರ್ಥಿಗಳಲ್ಲಿ ಯಾರು ಗೆಲುವಿನ ಮೂಲಕ ಎದ್ದು ನಿಲ್ತಾರೆ.. ಯಾರು ಮಕಾಡೆ ಮಲಗ್ತಾರೆ ಎಂದು ನೋಡಬೇಕಿದೆ..

Sulekha