ಯುಗಾದಿ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಟಿಕೆಟ್ ಶಾಕ್ – ಟಿಕೆಟ್ ದರ 3 ಪಟ್ಟು ಹೆಚ್ಚಳ..!

ಒಂದೆಡೆ ಯುಗಾದಿ ಹಬ್ಬ. ಮತ್ತೊಂದೆಡೆ ರಂಜಾನ್ ಹಬ್ಬ. ಲಾಂಗ್ ವೀಕೆಂಡ್. ಹೀಗಾಗಿ ಬಸ್ ಟಿಕೆಟ್ ಮಾಡಿ ಊರಿಗೆ ಹೋಗೋಣ ಅಂದರೆ ಬಿಗ್ ಶಾಕ್ ಕಾದಿದೆ. ಸಾಲು ಸಾಲು ರಜೆಯಿಂದಾಗಿ ಊರಿಗೆ ಹೋಗುವವರು ಬಸ್ನಲ್ಲಿ ಪ್ರಯಾಣ ಮಾಡಬೇಕೆಂದರೆ ಮೂರು ಪಟ್ಟು ಹೆಚ್ಚು ದರ ನೀಡಿ ಟಿಕೆಟ್ ಪಡೆಬೇಕಿದೆ.
ಇದನ್ನೂ ಓದಿ:ಹಬ್ಬಕ್ಕೆ ಊರಿಗೆ ಹೊರಟವರಿಗೆ ಗುಡ್ನ್ಯೂಸ್! – KSRTCಯಿಂದ ಹೆಚ್ಚುವರಿ ಬಸ್ ಸೇವೆ, ವಿಶೇಷ ರಿಯಾಯಿತಿ ಘೋಷಣೆ!
ಗುರುವಾರ ಯುಗಾದಿ. ಶನಿವಾರ ರಂಜಾನ್ ಹಬ್ಬ. ಶುಕ್ರವಾರ ಒಂದು ರಜೆ ಮಾಡಿದರೆ ಭಾನುವಾರ ಹೇಗೂ ರಜಾ. ಹೀಗಾಗಿ ಬೆಂಗಳೂರಿಂದ ಅನೇಕರು ತಮ್ಮ ತಮ್ಮ ಊರುಗಳತ್ತ ಪ್ರಯಾಣ ಬೆಳೆಸಲು ರೆಡಿಯಾಗಿದ್ದಾರೆ. ಹೀಗೆ ಊರಿಗೆ ಹೋಗಲು ಬಸ್ ಏರುವವರಿಗೆ ದರ ಏರಿಕೆಯ ಶಾಕ್ ಎದುರಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಖಾಸಗಿ ಬಸ್ಗಳ ಟಿಕೆಟ್ ದರ 2-3 ಪಟ್ಟು ಹೆಚ್ಚಳ ಮಾಡಲಾಗಿದ್ದು, ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳ್ತಿದೆ. ಬಸ್ ಟಿಕೆಟ್ ದರ ಏರಿಕೆ ಜೇಬು ಸುಡ್ತಿದೆ. ಖಾಸಗಿ ಬಸ್ಗಳ ಮಾಲೀಕರು ಮನಸ್ಸಿಗೆ ಬಂದಂತೆ ಟಿಕೆಟ್ ದರ ಏರಿಕೆ ಮಾಡಿದ್ದಾರೆ. ಅದರಲ್ಲೂ ಬೆಂಗಳೂರು-ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ಖಾಸಗಿ ಬಸ್ಗಳ ಟಿಕೆಟ್ ದರ ದುಪ್ಪಟ್ಟಾಗಿದೆ. ಖಾಸಗಿ ಬಸ್ಗಳ ಟಿಕೆಟ್ ದರ 2-3 ಪಟ್ಟು ಹೆಚ್ಚಳ ಮಾಡಲಾಗಿದ್ದು, ಯುಗಾದಿ ಹಾಗೂ ರಂಜಾನ್ ಹಬ್ಬವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಸಾರಿಗೆ ಸಂಸ್ಥೆ ಭಾರೀ ವಸೂಲಿಗೆ ಇಳಿದಿವೆ.
ಇನ್ನು ಖಾಸಗಿ ಬಸ್ಗಳ ಟಿಕೆಟ್ ಲಾಬಿ ಶುರುವಾಗುತ್ತಿದ್ದಂತೆ KSRTC ವತಿಯಿಂದ 2000 ವಿಶೇಷ ಬಸ್ ಗಳನ್ನು ರಸ್ತೆಗಿಳಿಸಲಾಗಿದೆ. ಹಬ್ಬ ಅಂದ್ರೆ ಬೆಂಗಳೂರೇ ಖಾಲಿಯಾಗುತ್ತೆ. ಬೆಂಗಳೂರಿಂದ ಮಾರ್ಚ್ 18 ರಿಂದ 20 ರ ವರೆಗೆ ವಿವಿಧ ಪ್ರದೇಶಗಳಿಗೆ ಹಾಗೂ ಮಾರ್ಚ್ 22 ರಂದು ಹಲವು ಊರುಗಳಿಂದ ಬೆಂಗಳೂರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಮೂಲಗಳು ತಿಳಿಸಿವೆ. ಎಲ್ಲಾ ತಾಲೂಕು, ಜಿಲ್ಲಾ ಬಸ್ ನಿಲ್ದಾಣಗಳಿಂದ ಜನರ ಓಡಾಟ ನೋಡಿಕೊಂಡು ಸಂಚಾರಕ್ಕೆ ಬಸ್ ಬಿಡಲಾಗುವುದು. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್ ಕಾಯ್ದಿರಿಸಿದಲ್ಲಿ ಶೇಕಡಾ 5 ರಷ್ಟು ರಿಯಾಯಿತಿ ನೀಡಲಾಗುವುದು. ಅಷ್ಟೇ ಅಲ್ಲದೇ ಹೋಗುವ ಹಾಗೂ ವಾಪಸ್ ಬರುವ ಪ್ರಯಾಣದ ಟಿಕೆಟ್ ಅನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10 ರಷ್ಟು ರಿಯಾಯಿತಿ ನೀಡಲಾಗುವುದು ಎಂದು KSRTC ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ನೋಡಿರಿ

