ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಇಂದಿನಿಂದ ಟಿಕೆಟ್‌ ಮಾರಾಟ – ಟಿಕೆಟ್ ದರ ಭಾರಿ ಏರಿಕೆ

ವಿಶ್ವವಿಖ್ಯಾತ ಮೈಸೂರು ದಸರಾ ವೀಕ್ಷಣೆಗೆ ಇಂದಿನಿಂದ ಟಿಕೆಟ್‌ ಮಾರಾಟ – ಟಿಕೆಟ್ ದರ ಭಾರಿ ಏರಿಕೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಈಗಾಗಲೇ ಆರಂಭವಾಗಿದೆ. ನಾಡಹಬ್ಬವನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುತ್ತಾರೆ. ಮೈಸೂರು ದಸರಾ ಪ್ರಮುಖ ಆಕರ್ಷಣೆಗಳಲ್ಲಿ ಜಂಬೂಸವಾರಿ ಹಾಗೂ ಪಂಜಿನ ಕವಾಯತು. ಹೀಗಾಗಿ ಜಂಬೂಸವಾರಿಯನ್ನು ವೀಕ್ಷಿಸಲೆಂದೇ ಸಹಸ್ತ್ರಾರು ಮಂದಿ ಬರುತ್ತಾರೆ. ಇಂದಿನಿಂದ ( ಬುಧವಾರ) ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ.

ಇದನ್ನೂ ಓದಿ: ನವರಾತ್ರಿಯ ನಾಲ್ಕನೇ ದಿನ ಕೂಷ್ಮಾಂಡಾ ದೇವಿ ಆರಾಧನೆ – ಬ್ರಹ್ಮಾಂಡವನ್ನು ರಚಿಸಿದ ಆದಿಶಕ್ತಿಯ ವಿಶೇಷತೆಯೇನು?

ಈ ಬಾರಿಯ ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಯ ಟಿಕೆಟ್‌ ಮಾರಾಟ ಬುಧವಾರ ಟಿಕೆಟ್ ಹಾಗೂ ಗೋಲ್ಡ್ ಕಾರ್ಡ್ ಮಾರಾಟವಾಗಲಿದೆ. www.mysoredasara.gov.in ಮೂಲಕ ಟಿಕೆಟ್ ಖರೀದಿ ಮಾಡಬಹುದು. ಆನ್‌ಲೈನ್ ಹೊರತುಪಡಿಸಿ ಬೇರೆ ಕಡೆ ಟಿಕೆಟ್ ಮಾರಾಟ ಇಲ್ಲ. ಒಬ್ಬರಿಗೆ 2 ಗೋಲ್ಡ್ ಕಾರ್ಡ್ ಹಾಗೂ ಒಬ್ಬರಿಗೆ 2 ಪಾಸ್ ಖರೀದಿಗೆ ಅವಕಾಶವಿದೆ.

ಈ ಬಾರಿ ಅರಮನೆ ಒಳಗೆ ದಸರಾ ಜಂಬೂ ಸವಾರಿ ವೀಕ್ಷಣೆ ದುಬಾರಿ ಎನಿಸಿಕೊಂಡಿದೆ. ಈ ಹಿಂದೆ 1,000 ರೂ. ಇದ್ದ ಟಿಕೆಟ್ ಬೆಲೆ ಇದೀಗ ಏಕಾಏಕಿ 2-3 ಸಾವಿರ ರೂ.ಗೆ ಏರಿಕೆಯಾಗಿದೆ. ಗೋಲ್ಡ್ ಕಾರ್ಡ್‌ಗೆ 6,000 ರೂ. ದರ ನಿಗದಿಯಾಗಿದ್ದು, ಪಂಜಿನ ಕವಾಯತು ವೀಕ್ಷಣೆಗೆ 500 ರೂ. ದರ ನಿಗದಿಪಡಿಸಲಾಗಿದೆ. ಹೀಗಾಗಿ ಜಂಬೂಸವಾರಿಯನ್ನು ಹತ್ತಿರದಿಂದ ವೀಕ್ಷಿಸುವವರಿಗೆ ನಿಸಾಶೆ ಉಂಟಾಗಿದೆ.

ಯಾವ ಟಿಕೆಟ್ಗೆ ಎಷ್ಟು ಬೆಲೆ?

  • ಗೋಲ್ಡ್ ಕಾರ್ಡ್ – 6,000 ರೂ.
  • ಅರಮನೆ ಎ – 3,000 ರೂ.
  • ಅರಮನೆ ಬಿ – 2,000 ರೂ.
  • ಪಂಜಿನ ಕವಾಯತು – 500 ರೂ.

Shwetha M