ಕುಟುಂಬದ ಯೋಗಕ್ಷೇಮ ಮತ್ತು ಆರ್ಥಿಕ ಪ್ರಗತಿಗೆ ಗುರುವಾರ ಈ ನಿಯಮ ಪಾಲಿಸಿ

ಕುಟುಂಬದ ಯೋಗಕ್ಷೇಮ ಮತ್ತು ಆರ್ಥಿಕ ಪ್ರಗತಿಗೆ ಗುರುವಾರ ಈ ನಿಯಮ ಪಾಲಿಸಿ

ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಆರ್ಥಿಕ ಸಮಸ್ಯೆಗಳು, ಕುಟುಂಬದ ಕಲಹ, ವಿವಾಹ ವಿಳಂಬ, ಆರೋಗ್ಯ ಸಮಸ್ಯೆಗಳು ಸೇರಿದಂತೆ ಹಲವು ಸವಾಲುಗಳು ಎದುರಾಗುತ್ತವೆ.  ವಿಶೇಷವಾಗಿ ಗುರುವಾರ ಕೆಲವು ಸರಳ ಧಾರ್ಮಿಕ ಆಚರಣೆಗಳನ್ನು ಪಾಲಿಸುವುದರಿಂದ ಶ್ರೀಮಹಾವಿಷ್ಣು ಮತ್ತು ಮಹಾಲಕ್ಷ್ಮಿಯ ಕೃಪೆ ಲಭಿಸಿ, ಕುಟುಂಬದ ಯೋಗಕ್ಷೇಮ, ಆರ್ಥಿಕ ಪ್ರಗತಿ, ದಾಂಪತ್ಯ ಸುಖ ಹಾಗೂ ಮನೆಯಲ್ಲಿ ನೆಮ್ಮದಿ ಹೆಚ್ಚುತ್ತದೆ ಎಂದು ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಹಾಗಾದರೆ ಗುರುವಾರ ಯಾವೆಲ್ಲಾ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ಶುಭ ಫಲಗಳನ್ನು ಪಡೆಯಬಹುದು ಎಂಬುದನ್ನು ತಿಳಿಯೋಣ.

ಹಳದಿ ಬಣ್ಣ ಧರಿಸುವುದರ ಮಹತ್ವ

  • ಹಣಕಾಸಿನ ಸಮಸ್ಯೆಗಳು ಪದೇ ಪದೇ ಎದುರಾಗುತ್ತಿದ್ದರೆ ಗುರುವಾರ ಶ್ರೀಮಹಾವಿಷ್ಣು ಮತ್ತು ಮಹಾಲಕ್ಷ್ಮಿಯನ್ನು ಪೂಜಿಸುವುದು ಶುಭಕರವೆಂದು ನಂಬಲಾಗಿದೆ. ಸಾಧ್ಯವಾದರೆ ಆಲದ ಮರಕ್ಕೆ ನೀರು ಅರ್ಪಿಸಿ, ದೀಪ ಬೆಳಗಿಸಿ ಪ್ರಾರ್ಥನೆ ಮಾಡಬೇಕು. ಇದು ಮನೆಯಲ್ಲಿ ಧನಲಕ್ಷ್ಮಿಯ ಅನುಗ್ರಹ ಹಾಗೂ ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ.
  • ವಿವಾಹ ವಿಳಂಬವಾಗುತ್ತಿರುವವರು ಗುರುವಾರ ಬೆಲ್ಲ, ಕಡಲೆಬೇಳೆ, ಅರಿಶಿನ ಹಾಗೂ ಹಳದಿ ಬಟ್ಟೆ ದಾನ ಮಾಡುವುದು ಉತ್ತಮ ಎನ್ನಲಾಗುತ್ತದೆ. ಜೊತೆಗೆ ಗುರುವಾರ ಉಪವಾಸ ಆಚರಿಸಿ, ಪೂಜೆಯ ನಂತರ ಅಗತ್ಯವಿರುವವರಿಗೆ ಅನ್ನದಾನ ಅಥವಾ ದಾನ-ದಕ್ಷಿಣೆ ನೀಡುವುದು ಮಂಗಳಕರವೆಂದು ಧಾರ್ಮಿಕ ಗ್ರಂಥಗಳು ತಿಳಿಸುತ್ತವೆ.
  • ಹಳದಿ ಬಣ್ಣವು ಶ್ರೀಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದ ಬಣ್ಣವಾಗಿದೆ. ಆದ್ದರಿಂದ ಗುರುವಾರ ಹಳದಿ ಬಣ್ಣದ ಉಡುಪು ಧರಿಸುವುದು, ಹಣೆಗೆ ಅರಿಶಿನ ಅಥವಾ ಹಳದಿ ತಿಲಕ ಹಚ್ಚುವುದು ಶುಭವೆಂದು ಪರಿಗಣಿಸಲಾಗುತ್ತದೆ. ಇದು ಆತ್ಮವಿಶ್ವಾಸ, ಸಕಾರಾತ್ಮಕ ಚಿಂತನೆ ಮತ್ತು ಶುಭಫಲವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ.

  • ಪತಿ-ಪತ್ನಿಯ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಿದ್ದರೆ ಅಥವಾ ಕುಟುಂಬದಲ್ಲಿ ನೆಮ್ಮದಿ ಇಲ್ಲದಿದ್ದರೆ ಗುರುವಾರ ಉಪವಾಸ ಆಚರಿಸಿ ಶ್ರೀಮಹಾವಿಷ್ಣು ಮತ್ತು ಮಹಾಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸುವುದು ಒಳಿತು ಎಂಬ ನಂಬಿಕೆ ಇದೆ. ಇದರಿಂದ ದಾಂಪತ್ಯ ಜೀವನದಲ್ಲಿ ಪ್ರೀತಿ, ಹೊಂದಾಣಿಕೆ ಹಾಗೂ ಸಂತೋಷ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

Kishor KV

Leave a Reply

Your email address will not be published. Required fields are marked *