ಗುರುವಾರ ಪೂಜೆ, ವ್ರತ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಗುರುವಾರ  ಪೂಜೆ,  ವ್ರತ ಮಾಡುವುದರಿಂದ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಗುರುವಾರದ ದಿನದಂದು ನಾವು ಪೂಜೆಯನ್ನು ಮಾಡುವುದರ ಜೊತೆಗೆ ವ್ರತವನ್ನು ಮಾಡುವುದರಿಂದ ಅನೇಕ ಪ್ರಯೋಜನಗಳಿವೆ. ನಮ್ಮ ಜೀವನವೇ ಬದಲಾಗುತ್ತದೆ ಎಂದು ಅನೇಕರು ಇದನ್ನು ನಂಬಿದ್ದಾರೆ. ಗುರುವಾರದ ದಿನದಂದು ಪೂಜೆಯನ್ನು, ವ್ರತವನ್ನು ಮಾಡುವುದರಿಂದ ನಮಗೆ ಯಾವೆಲ್ಲಾ ಪ್ರಯೋಜನಗಳಿವೆ ಅನ್ನೋದ್ದನ್ನ ನೋಡೋಣ.

ರುವಾರದ ದಿನದಂದು ಶ್ರೀಹರಿಯನ್ನು, ಸಾಯಿಬಾಬಾರನ್ನು ಅಥವಾ ರಾಘವೇಂದ್ರ ಸ್ವಾಮಿಯನ್ನು ಪೂಜಿಸುವುದರಿಂದ ಅಥವಾ ಈ ದೇವರ ಹೆಸರಿನಲ್ಲಿ ಸಂಕಲ್ಪವನ್ನು ತೆಗೆದುಕೊಂಡು ಉಪವಾಸ ವ್ರತವನ್ನು ಮಾಡುವುದರಿಂದ ಈ ಮೂರು ದೇವರ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ. ಈ ದಿನ ನಾವು ಮಾಡುವ ಪೂಜೆ, ಉಪವಾಸ ವ್ರತವು ಈ ಮೂರು ದೇವರ ಅನುಗ್ರಹವು ನಮ್ಮ ಮೇಲೆ ಇರುವಂತೆ ಮಾಡುತ್ತದೆ. ಅಷ್ಟೇ ಅಲ್ಲದೆ, ಈ ದಿನದಂದು ವಿಷ್ಣುವಿನ, ರಾಯರ ಮತ್ತು ಸಾಯಿಬಾಬಾರ ಕಥೆಯನ್ನು ಕೂಡ ಓದಬಹುದಾಗಿದೆ.

ಇದನ್ನೂ ಓಧಿ: ನಿಮ್ಮ ಮೇಲೆ ಲಕ್ಷ್ಮೀ ಕೃಪೆ ಸದಾ ಇರಬೇಕಾ – ತುಳಸಿ ಗಿಡಕ್ಕೆ ದಿನ ಹೀಗೆ ಪೂಜೆ ಮಾಡಿ

ಗುರುವಾರದ ದಿನದಂದು ನಾವು ಉಪವಾಸ ವ್ರತವನ್ನು ಮಾಡುವುದರಿಂದ, ಪೂಜೆಯನ್ನು ಮಾಡುವುದರಿಂದ ಅಥವಾ ಮಂತ್ರಗಳನ್ನು ಪಠಿಸುವುದರಿಂದ ವ್ಯಕ್ತಿಯ ಪಿತೃದೋಷವು ದೂರಾಗುವುದು. ಯಾವ ವ್ಯಕ್ತಿ ಪಿತೃ ದೋಷಕ್ಕೆ ಒಳಗಾಗಿರುತ್ತಾನೋ ಅವನು ಹಣಕಾಸಿನ ಸಮಸ್ಯೆಯನ್ನು, ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು, ಉದ್ಯೋಗದಲ್ಲಿನ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾನೆ. ಇದರಿಂದ ಅವನ ಜೀವನ ಪ್ರಗತಿಯ ಮಾರ್ಗವನ್ನು ತಪ್ಪಿ ಸಾಗುತ್ತದೆ.

ಗುರುವಾರದ ದಿನದಂದು ನಾವು ಮಾಡುವ ಪೂಜೆ, ವ್ರತವು ನಮ್ಮ ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡುತ್ತದೆ. ಈ ದಿನದಂದು ಪೂಜೆಯ ನಂತರ ಉಪವಾಸವನ್ನು ಮಾಡುವುದು ಹೆಚ್ಚು ಹಣದ ಲಾಭವನ್ನು ತಂದುಕೊಡುತ್ತದೆ. ಒಬ್ಬ ವ್ಯಕ್ತಿ ಪದೇ ಪದೇ ಹಣಕಾಸಿನ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಎಷ್ಟೇ ಪ್ರಯತ್ನಿಸಿದರೂ ಸಾಲದ ಸುಳಿಯಿಂದ ಹೊರಬರಲು ಸಾಧ್ಯವಾಗದೇ ಇದ್ದರೆ ಅಂತಹ ಸಂದರ್ಭದಲ್ಲಿ ಅವನು ಗುರುವಾರದ ದಿನ ಪೂಜೆ, ಉಪವಾಸ ವ್ರತವನ್ನು ಮಾಡಬಹುದು.

Kishor KV

Leave a Reply

Your email address will not be published. Required fields are marked *