ಗುರುವಾರ ಈ 5 ಮಂತ್ರಗಳನ್ನು ಪಠಿಸಿ – ಬದಲಾಗುತ್ತೆ ನಿಮ್ಮ ಭವಿಷ್ಯ

ಗುರುವಾರ ಬಂತೆಂದರೆ ಅದು ವಿಶೇಷವಾದ ದಿನ. ಯಾಕೆಂದರೆ, ಈ ಒಂದೇ ದಿನ ನಾವು ಸಾಯಿಬಾಬಾರನ್ನು, ರಾಯರನ್ನು ಮತ್ತು ವಿಷ್ಣುವನ್ನು ಪೂಜಿಸಬಹುದು. ಗುರುವಾರದ ದಿನದಂದು ನಾವು ವಿಷ್ಣು ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಕಾರಾತ್ಮಕತೆಯನ್ನು ಪಡೆದುಕೊಳ್ಳಬಹುದಾಗಿದೆ. ಈ ಮಂತ್ರಗಳ ಪಠಣವು ನಮ್ಮ ಜೀವನಕ್ಕೆ ಆರ್ಥಿಕ ಸಮೃದ್ಧಿಯನ್ನು ತರುತ್ತದೆ. ಎಲ್ಲಾ ರೀತಿಯ ಅಡೆತಡೆಗಳಿಂದ ಮುಕ್ತಿಯನ್ನು ನೀಡುತ್ತದೆ ಎನ್ನುವ ನಂಬಿಕೆಯಿದೆ.
ಮೊದಲನೇ ಮಂತ್ರ:
”ಓಂ ನಮೋ ಭಗವತೇ ವಾಸುದೇವಾಯ ನಮಃ” ಈ ವಿಷ್ಣು ಮಂತ್ರವನ್ನು ನೀವು ಗುರುವಾರದ ದಿನದಂದು ಮಾತ್ರವಲ್ಲ, ನಿಯಮಿತವಾಗಿ ಪಠಿಸುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆ. ಈ ಒಂದು ಮಂತ್ರದ ಪಠಣವು ವಿಷ್ಣು ದೇವನನ್ನು ಸುಲಭವಾಗಿ ಸಂತುಷ್ಟಗೊಳ್ಳುವಂತೆ ಮಾಡುತ್ತದೆ.
2. ಎರಡನೇ ಮಂತ್ರ:
”ಓಂ ಶ್ರೀ ವಿಷ್ಣುವೇ ಚ ವಿದ್ಮಹೇ
ವಾಸುದೇವಾಯ ಧೀಮಹಿ
ತನ್ನೋ ವಿಷ್ಣುಃ ಪ್ರಚೋದಯಾತ್”
3. ಮೂರನೇ ಮಂತ್ರ:
”ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ
ಪ್ರಣತಃ ಕ್ಲೇಶನಾಶಾಯೇ ಗೋವಿಂದಾಯ ನಮೋ ನಮಃ”
4. ನಾಲ್ಕನೇ ಮಂತ್ರ:
”ಓಂ ಶ್ರೀ ಕೃಷ್ಣಃ ಶರಣಂ ಮಮಃ”
5. ಐದನೇ ಮಂತ್ರ:
ಹರೇ ಕೃಷ್ಣ ಹರೇ ಕೃಷ್ಣ
ಕೃಷ್ಣ ಕೃಷ್ಣ ಹರೇ ಹರೇ
ಹರೇ ರಾಮ ಹರೇ ರಾಮ
ರಾಮ ರಾಮ ಹರೇ ಹರೇ”.
5 ಕೃಷ್ಣ ಮಂತ್ರಗಳನ್ನು ಪಠಿಸುವುದರಿಂದಾಗುವ ಪ್ರಯೋಜನಗಳೇನು.?
ಗುರುವಾರದ ದಿನದಂದು ನಾವು ವಿಷ್ಣು ದೇವನ ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಬರುತ್ತದೆ ಎನ್ನುವ ನಂಬಿಕೆಯಿದೆ. ಈ ಮಂತ್ರಗಳ ನಿಯಮಿತವಾದ ಪಠನವು ನಮ್ಮನ್ನು ದುಃಖದಿಂದ ಮುಕ್ತಗೊಳಿಸುತ್ತದೆ. ಭಯವನ್ನು ಕೊನೆಗೊಳಿಸುತ್ತದೆ. ಉದ್ಯೋಗ ಹಾಗೂ ವೃತ್ತಿಯಲ್ಲಿ ಅಭಿವೃದ್ಧಿಯನ್ನು ತರುತ್ತದೆ. ಈ ಮಂತ್ರಗಳನ್ನು ಪಠಿಸುವುದರಿಂದ ಸಮೃದ್ಧಿ, ಸಂತೋಷ ಮತ್ತು ಅದೃಷ್ಟ ಬರುತ್ತದೆ. ಮುಖ್ಯವಾಗಿ, ಇದು ನಿಮ್ಮ ಹಿಂದಿನ ಪಾಪಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಗುರುವಾರದ ದಿನದಂದು ನೀವು ಈ ವಿಷ್ಣು ಮಂತ್ರಗಳ ಜೊತೆಗೆ ರಾಯರ ಮಂತ್ರಗಳನ್ನು, ಸಾಯಿಬಾಬಾರ ಮಂತ್ರಗಳನ್ನು ಕೂಡ ಪಠಿಸಬಹುದು. 3ದೈವಿಕ ಶಕ್ತಿಗಳನ್ನು ಗುರುವಾರದ ಒಂದೇ ದಿನ ಪೂಜಿಸುವುದರಿಂದ ಈ ದಿನದ ಮಹಿಮೆ ಅಪಾರವಾಗಿದೆ. ಈ ದಿನ ಮಂತ್ರಗಳನ್ನು ಪಠಿಸುವುದರಿಂದ ಅದು ಇನ್ನಿತರ ದಿನಗಳಿಗಿಂತಲೂ ಹೆಚ್ಚು ಪ್ರಭಾವವನ್ನು ನೀಡುತ್ತದೆ.

ನೋಡಿರಿ

