ಕನಸು ನನಸಾದ ಖುಷಿಯಲ್ಲಿ ತುಕಾಲಿ ಸಂತೋಷ್ – ಮನೆಗೆ ಹೊಸ ಅತಿಥಿಯ ಆಗಮನ

ಕನಸು ನನಸಾದ ಖುಷಿಯಲ್ಲಿ ತುಕಾಲಿ ಸಂತೋಷ್ – ಮನೆಗೆ ಹೊಸ ಅತಿಥಿಯ ಆಗಮನ

ಮಾತಿನಲ್ಲಿ ಹಾಸ್ಯ, ಗುಣದಲ್ಲೂ ನಯ ವಿನಯ, ಸ್ನೇಹಕ್ಕೆ ಸಿದ್ಧ, ಪ್ರೀತಿಗೆ ಬದ್ಧ. ಬಹುಶಃ ತುಕಾಲಿ ಸಂತೋಷ್ ಕನ್ನಡಿಗರಿಗೆ ಇಷ್ಟವಾಗಿದ್ದೇ ಇದಕ್ಕೆ. ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಕನ್ನಡಿಗರ ಮನಗೆದ್ದ ತುಕಾಲಿ ಸಂತೋಷ್ ಅವರ ಕನಸು ಈಗ ನನಸಾಗಿದೆ. ತುಕಾಲಿ ಸಂತೋಷ್ ಮನೆಗೆ ಹೊಸ ಅತಿಥಿಯ ಆಗಮನ ಆಗಿದೆ.

ಇದನ್ನೂ ಓದಿ:ಹಳ್ಳಿಕಾರ್‌ ಒಡೆಯನ ಮನೆಗೆ ಬಂದ ತುಕಾಲಿ ಸಂತುಗೆ ಭರ್ಜರಿ ಗಿಫ್ಟ್‌! – ಸ್ನೇಹಿತನ ಉಡುಗೊರೆಗೆ ಭಾವುಕರಾದ ತುಕಾಲಿ

ಹೊಸ ಕಾರನ್ನು ಖರೀದಿಸಬೇಕೆಂಬುದು ತುಕಾಲಿ ಸಂತೋಷ್ ಕನಸಾಗಿತ್ತು. ಇದೀಗ ಅದು ನೆರವೇರಿದೆ. ಹೊಸ ಕಾರಿನ ವಿಡಿಯೋವನ್ನು ತುಕಾಲಿ ಸಂತೋಷ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಫಿನಾಲೆವರೆಗೆ ಇದ್ದು ನಾಲ್ಕನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ ತುಕಾಲಿ ಸಂತೋಷ್ ದೊಡ್ಮನೆಯಿಂದ ಬಂದ ಸಂಭಾವನೆಯಿಂದ ಹೊಸ ಕಾರು ಖರೀದಿ ಮಾಡಿದ್ದಾರೆ. ಕಿಯಾ ಕಂಪನಿಯ ಕಾರನ್ನು ಅವರು ಖರೀದಿ ಮಾಡಿದ್ದಾರೆ. ಹೊಸ ಕಾರು ಖರೀದಿ ಮಾಡುವಾಗ ತುಕಾಲಿ ಸಂತೋಷ್ ಜೊತೆ ಪತ್ನಿ ಮಾನಸಾ ಕೂಡ ಇದ್ದು ದಂಪತಿ ಸಂಭ್ರಮಿಸಿದ್ದಾರೆ.

ಕಂಡ ಕನಸು ನನಸಾದ ದಿನ ಎಂದು ಅಡಿಬರಹ ನೀಡಿ, ತುಕಾಲಿ ಸಂತು ಕಾರು ಖರೀದಿಸುತ್ತಿರುವ ವಿಡಿಯೋ ಶೇರ್ ಮಾಡಿ ಸಂಭ್ರಮಿಸಿದ್ದಾರೆ. ನಟನ ಯಶಸ್ಸಿಗೆ ಫ್ಯಾನ್ಸ್ ವಿಶ್ ಮಾಡಿದ್ದಾರೆ. ಕಾಮಿಡಿ ಕಿಲಾಡಿಗಳು 3, ಜೋಡಿ ನಂಬರ್ ಒನ್, ಗಿಚ್ಚಿ ಗಿಲಿ ಗಿಲಿ 3 ಸೇರಿದಂತೆ ಹಲವು ಶೋಗಳ ಮೂಲಕ ತುಕಾಲಿ ಸಂತೋಷ್ ಜನಪ್ರಿಯತೆ ಗಳಿಸಿದ್ದಾರೆ. ಬಿಗ್ ಬಾಸ್ ಸೀಸನ್ 10ರ ಶೋ ಇವರಿಗೆ ಹೆಚ್ಚಿನ ಖ್ಯಾತಿ ತಂದು ಕೊಟ್ಟಿದೆ. ಅದರಲ್ಲೂ ವರ್ತೂರು ಸಂತೋಷ್ ಜೊತೆಗಿನ ಒಡನಾಟದ ವಿಚಾರವಾಗಿ ತುಕಾಲಿ ಸಂತು ಹೈಲೆಟ್ ಆಗಿದ್ದರು.

Sulekha