ಥ್ರೋಡೌನ್ ಸ್ಪೆಷಲಿಸ್ಟ್ ರಘು ರಾಘವೇಂದ್ರ – ಕೊಹ್ಲಿ, ಗಿಲ್, ರೋಹಿತ್‌ಶರ್ಮಾಗೆ ಈ ಕನ್ನಡಿಗನೇ ಬೇಕು..!
ಉತ್ತರ ಕನ್ನಡ ಮೂಲದ ಶರವೇಗಿ ಸರಳಜೀವಿ ರಘು ಟೀಮ್ ಇಂಡಿಯಾದ ಬೆನ್ನೆಲುಬು!
ಟೀಂ ಇಂಡಿಯಾ ಫೀಲ್ಡಿಂಗ್ ಮಾಡುವಾಗಲೆಲ್ಲಾ ತಂಡದ ಸ್ಟಾಫ್ ಮೆಂಬರ್ ಒಬ್ಬರು ಕೈಯಲ್ಲೊಂದು ಬ್ರೆಷ್ ಹಿಡ್ಕೊಂಡು ಗ್ರೌಂಡ್ಗೆ ರೌಂಡ್ಸ್ ಹೊಡೀತಾ ಇರ್ತಾರೆ. ಬೌಂಡರಿ ಬಳಿ ನಿಂತ ಟೀಂ ಇಂಡಿಯಾ ಪ್ಲೇಯರ್ಸ್ಗಳ ಶೂವಿನ ಅಡಿ ಭಾಗವನ್ನ ಬ್ರೆಷ್ನಲ್ಲಿ ಕ್ಲೀನ್ ಮಾಡ್ತಿರ್ತಾರೆ. ನಿಮಗೆ ಗೊತ್ತಿರಲಿ ಆ ವ್ಯಕ್ತಿ ಕರ್ನಾಟಕದವರೇ. ಇವರ ಬಗ್ಗೆ ವಿಶೇಷ ವರದಿ ಇಲ್ಲಿದೆ.
ಇದನ್ನೂ ಓದಿ: ಮ್ಯಾಕ್ಸಿ ಬೆಂಕಿ ಆಟಕ್ಕೆ ಅಫ್ಘಾನಿಸ್ತಾನ ಧೂಳಿಪಟ – ಗ್ಲೇನ್ ಮ್ಯಾಕ್ಸ್ವೆಲ್ ದಾಖಲೆಯ ಭರ್ಜರಿ ದ್ವಿಶತಕ
ಹೆಸರು ರಘು ರಾಘವೇಂದ್ರ. ಟೀಂ ಇಂಡಿಯಾದ ಜೊತೆಗೆ ಇರುವ ರಾಘವೇಂದ್ರ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಎಂ.ಎಸ್.ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶುಬ್ಮನ್ ಗಿಲ್ ಹೀಗೆ ಟೀಂ ಇಂಡಿಯಾದ ಬ್ಯಾಟ್ಸ್ಮನ್ಗಳ ಸಾಧನೆಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. 2023ರ ವರ್ಲ್ಡ್ಕಪ್ನಲ್ಲಿ ಅಂತೇನಲ್ಲ.. ಕಳೆದ 7 ವರ್ಷಗಳಿಂದಲೇ ರಘು ರಾಘವೇಂದ್ರ ಟೀಂ ಇಂಡಿಯಾದ ಪ್ರಮುಖ ಆಸ್ತಿಯಾಗಿದ್ದಾರೆ. ರಘು ನೆಟ್ಸ್ನಲ್ಲಿ ಪ್ರಾಕ್ಟೀಸ್ ಸೆಷನ್ ವೇಳೆ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳಿಗೆ ಅಕ್ಷರಶ: ಬೆಂಕಿ ಚೆಂಡನ್ನೇ ಎಸೀತಾರೆ. ಟೀಂ ಇಂಡಿಯಾ ಪ್ಲೇಯರ್ಸ್ಗಳ ನೆಟ್ ಪ್ರಾಕ್ಟೀಸ್ ವೇಳೆ ಫಸ್ಟ್ ಫೀಲ್ಡಿಗೆ ಎಂಟ್ರಿ ಕೊಡೋದು ಮತ್ತು ಫೀಲ್ಡ್ನ್ನ ಲಾಸ್ಟ್ಗೆ ತೊರೆಯೋದು ಅಂದ್ರೆ ಅದು ರಘು ರಾಘವೇಂದ್ರ. ಇವರು ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್. ಅಂದ್ರೆ ಬಾಲ್ ಎಸೆಯೋ ಸ್ಪೆಷಲಿಸ್ಟ್.. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ಶುಬ್ಮನ್ ಗಿಲ್ ಸೇರಿದಂತೆ ಟೀಂ ಇಂಡಿಯಾದ ಪ್ರತಿಯೊಬ್ಬ ಬ್ಯಾಟ್ಸ್ಮನ್ ಕೂಡ ನೆಟ್ಸ್ನಲ್ಲಿ ರಘು ರಾಘವೇಂದ್ರ ಎಸೆಯೋ ಶರವೇಗದ ಬಾಲ್ನ್ನ ಎದುರಿಸಬೇಕಾಗುತ್ತೆ. ಎಲ್ಲಾ ಬ್ಯಾಟ್ಸ್ಮನ್ಗಳಿಗೂ ನೆಟ್ಸ್ನಲ್ಲಿ ರಘು ರಾಘವೇಂದ್ರರಿಂದ ಅಗ್ನಿಪರೀಕ್ಷೆಯಾಗುತ್ತೆ. ಗಂಟೆಗಟ್ಟಲೆ ಬ್ಯಾಟ್ಸ್ಮನ್ಗಳ ಬೆವರಿಳಿಸ್ತಾರೆ. ಸ್ಟಿಕ್ ಒಂದರ ಮೂಲಕ ನೆಟ್ಸ್ನಲ್ಲಿ ರಘು ಬ್ಯಾಟ್ಸ್ಮನ್ಗಳಿಗೆ ಬಾಲ್ ಎಸೀತಾರೆ. ನೀವು ಬೌಲಿಂಗ್ ಮಷೀನ್ನನ್ನ ನೋಡಿರ್ತೀರಾ. ಅದ್ರಲ್ಲಿ ಇಷ್ಟು ಕಿಲೋ ಮೀಟರ್ ವೇಗ ಅಂತಾ ಸೆಟ್ ಮಾಡಿದ್ರೆ ಅಷ್ಟು ವೇಗದಲ್ಲಿ ಬಾಲ್ ಬ್ಯಾಟ್ಸ್ಮನ್ನತ್ತ ನುಗ್ಗುತ್ತೆ. ಹಿಂದೆಲ್ಲಾ ನೆಟ್ಪ್ರಾಕ್ಟೀಸ್ ವೇಳೆ ಈ ಬೌಲಿಂಗ್ ಮಷಿನ್ನನ್ನ ಹೆಚ್ಚಾಗಿ ಯೂಸ್ ಮಾಡ್ತಿದ್ರು. ಆದ್ರೆ ಅದು ಅಷ್ಟೊಂದು ಎಫೆಕ್ಟಿವ್ ಆಗಿ ಇರೋದಿಲ್ಲ. ಈಗ ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳ ಪಾಲಿನ ಬೌಲಿಂಗ್ ಮಷೀನ್ ಅಂದ್ರೆ ಕನ್ನಡಿಗ ರಘು ರಾಘವೇಂದ್ರ. ಸ್ಟಿಕ್ ಒಂದರಲ್ಲಿ ಅದನ್ನ ಸೈಡ್ಆರ್ಮ್ ಅಂತಾ ಕರೀತಾರೆ. ಈ ಸೈಡ್ಆರ್ಮ್ನಲ್ಲಿ ಬಾಲ್ನ್ನ ಫಿಕ್ಸ್ ಮಾಡಿ ಬ್ಯಾಟ್ಸ್ಮನ್ನತ್ತ ರಭಸವಾಗಿ ಎಸೀತಾರೆ. ಇದಕ್ಕೆ ಥ್ರೋಡೌನ್ ಸ್ಪೆಷಲಿಸ್ಟ್ ಅಂತಾರೆ. ರಘು ರಾಘವೇಂದ್ರ ಕಳೆದ ಹಲವು ವರ್ಷಗಳಿಂದ ಭಾರತೀಯ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿದ್ದಾರೆ. ರಘು ಥ್ರೋನಲ್ಲೇ ಪೇಸ್.. ಬೌನ್ಸ್ ಮತ್ತು ಸ್ವಿಂಗ್ ಮಾಡಬಲ್ಲರು. ಮಾಮೂಲು ಸ್ವಿಂಗ್ ಅಷ್ಟೇ ಅಲ್ಲ, ರಿವರ್ಸ್ ಸ್ವಿಂಗ್ ಕೂಡ ಮಾಡ್ತಾರೆ. ಸುಮಾರು 140-150 ಕಿಲೋಮೀಟರ್ ಸ್ಪೀಡ್ನಲ್ಲಿ ಕನ್ಸಿಸ್ಟೆಂಟ್ ಆಗಿ ರಘು ಬಾಲ್ ಎಸೀತಾರೆ. ಇದು ಟೀಂ ಇಂಡಿಯಾ ಬ್ಯಾಟ್ಸ್ಮನ್ಗಳಿಗೆ ಎದುರಾಳಿ ಫಾಸ್ಟ್ ಬೌಲರ್ಸ್ಗಳನ್ನ ಎದುರಿಸೋಕೆ ಸಾಕಷ್ಟು ಹೆಲ್ಪ್ ಆಗ್ತಿದೆ. ವಿರಾಟ್ ಕೊಹ್ಲಿಯಂತೂ ರಘು ರಾಘವೇಂದ್ರ ಥ್ರೋಡೌನ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ರು. ರಘು ರಾಘವೇಂದ್ರ ಬಾಲ್ ಥ್ರೋದಿಂದಾಗಿ ನನ್ನ ಬ್ಯಾಟಿಂಗ್ ಸ್ಕಿಲ್ನ್ನ ಇನ್ನಷ್ಟು ಫೈನ್ ಟ್ಯೂನ್ ಮಾಡಿಕೊಳ್ಳೋಕೆ ಸಾಧ್ಯವಾಯ್ತು ಅಂತಾ ಕೊಹ್ಲಿ ಹೇಳಿಕೊಂಡಿದ್ದಾರೆ. ಆ್ಯಕ್ಚುವಲಿ ಥ್ರೋಡೌನ್ ಅನ್ನೋದು ಕೂಡ ಒಂದು ಕಲೆಯೇ. ರಘು ಮಾದರಿಯಲ್ಲಿ ಥ್ರೋಡೌನ್ ಮಾಡೋದು ಅಷ್ಟೊಂದು ಸುಲಭ ಇಲ್ಲ ಮತ್ತು ಎಲ್ಲರಿಗೂ ಸಾಧ್ಯವಿಲ್ಲ. ಇದೇ ಕಾರಣಕ್ಕೆ ರಾಘವೇಂದ್ರರದ್ದು ಗೋಲ್ಡನ್ ಆರ್ಮ್ ಅಂತಾನೆ ಹೇಳಲಾಗುತ್ತೆ. ಸದ್ಯ ರಾಘವೇಂದ್ರ ಅವರಿಗೆ ಟೀಂ ಇಂಡಿಯಾದ ಅಸಿಸ್ಟೆಂಟ್ ಟ್ರೈನರ್ ಪೋಸ್ಟ್ ನೀಡಲಾಗಿದೆ.
ಇಲ್ಲಿ ಇನ್ನೊಂದು ವಿಚಾರವನ್ನ ಹೇಳಲೇಬೇಕು. ರಾಘವೇಂದ್ರ ಅವರು ನೆಟ್ಸ್ನಲ್ಲಿ ಎಲ್ಲಾ ಬ್ಯಾಟ್ಸ್ಮನ್ಗಳಿಗೂ ಗಂಟೆಗಟ್ಟಲೆ ನಿರಂತವಾಗಿ ಬಾಲ್ ಎಸೆಯಲೇಬೇಕು. 140-150 ಕಿಲೋ ಮೀಟರ್ ಸ್ಪೀಡ್ನಲ್ಲಿ ಪ್ರತಿ ಬಾಲ್ ಎಸೆಯೋದು ಅಂದ್ರೆ ಸುಮ್ನೆ ಅಲ್ವಲ್ಲಾ. ಬಲಗೈನಲ್ಲಿ ಬಾಲ್ ಎಸೆಯೋ ರಘು ಕೈ ಮೇಲೆ ಎಷ್ಟು ಪ್ರೆಷರ್ ಬೀಳಬಹುದು ಅನ್ನೋದನ್ನ ಊಹಿಸ್ಕೊಳ್ಳಿ. ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ ಆಗಿದ್ದಾಗಲೇ ರಘು ಟೀಂ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ತಂಡಕ್ಕೆ ಸೇರ್ಪಡೆಯಾಗಿದ್ರು. ಈವನ್ ಧೋನಿ ಕೂಡ ರಾಘವೇಂದ್ರ ಥ್ರೋಡೌನ್ ಸ್ಪೆಷಾಲಿಟಿಯನ್ನ ನೋಟ್ ಮಾಡಿದ್ದಾರೆ. ಫುಲ್ ಸ್ಪೀಡ್ನಲ್ಲಿ ಬಾಲ್ ಎಸೆಯೋದಷ್ಟೇ ಅಲ್ಲ, ಇಂಡಿಯನ್ ಪೇಸ್ ಬೌಲರ್ಸ್ಗಳು ಕೂಡ ಎಸೆಯೋಕೆ ಆಗದಂಥಾ ಬಾಲ್ಗಳನ್ನ ರಘು ಎಸೀತಾರೆ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಬೌಲರ್ಸ್ಗಳು ಎಸೆಯುವಂಥಾ ಬಾಲ್ಗಳನ್ನ, ಅಲ್ಲಿನ ಪಿಚ್ನಲ್ಲಿ ಬೀಳುವಂಥಾ ಬಾಲ್ಗಳನ್ನ ರಘು ಎಸೀತಾರೆ. ಹೀಗಾಗಿ ಫಾಸ್ಟ್ ಮತ್ತು ಬೌನ್ಸಿ ಪಿಚ್ಗಳನ್ನ ಆಡೋವಾಗ ಸಹಕಾರಿಯಾಗುತ್ತೆ ಅಂತಾ ಧೋನಿ ಹೇಳಿದ್ರು. ನೆಟ್ಸ್ನಲ್ಲಿ ರಘು ಎಸೆಯೋ ಶರವೇಗದ ಬಾಲ್ಗಳನ್ನ ಎದುರಿಸಿ ಈಗ ನಮ್ಮ ಬ್ಯಾಟ್ಸ್ಮನ್ಗಳು ಆಸ್ಟ್ರೇಲಿಯಾ, ಇಂಗ್ಲೆಂಡ್, ಸೌತ್ಆಫ್ರಿಕಾದಲ್ಲಿನ ಪೇಸ್ ಪಿಚ್ಗಳನ್ನ ಇನ್ನಷ್ಟು ಧೈರ್ಯವಾಗಿ ಆಡ್ತಾರೆ.
ಉತ್ತರ ಕನ್ನಡ ಮೂಲದ ಶರವೇಗಿ ಸರಳಜೀವಿ ರಘು!
ರಾಘವೆಂದ್ರ ಅವರು ಮೂಲತ: ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ವಿದ್ಯಾಭ್ಯಾಸವನ್ನ ಅರ್ಧಕ್ಕೆ ನಿಲ್ಲಿಸಿದ ರಘು, ಕ್ರಿಕೆಟ್ನಲ್ಲಿ ಕೆರಿಯನ್ನ ನಿರ್ಮಿಸಿಕೊಳ್ಳಬೇಕು ಅಂತಾ 1990ರಲ್ಲಿ ಮನೆಯನ್ನ ತೊರೆದು ಮುಂಬೈಗೆ ತೆರಳಿದ್ರು. ಆದ್ರೆ ಮುಂಬೈನಲ್ಲಿ ರಾಘವೆಂದ್ರರಿಗೆ ಅಂದುಕೊಂಡಿದ್ದನ್ನ ಅಚೀವ್ ಮಾಡೋಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ ಬೆಂಗಳೂರಿಗೆ ಬಂದು ಎನ್ಸಿಎ ಅಂದ್ರೆ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯನ್ನ ಸೇರಿಕೊಂಡ್ರು. ಅಲ್ಲಿ ಟ್ರೈನಿಂಗ್ ಪಡೀತಿದ್ದ ಪ್ಲೇಯರ್ಸ್ಗಳಿಗೆ ರಘು ನಿತ್ಯವೂ ಗಂಟೆಗಟ್ಟಲೆ ಥ್ರೋಡೌನ್ ಮಾಡ್ತಿದ್ರು. ಆ್ಯಕ್ಚುವಲಿ ರಘು ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಮೊದಲಿಗೆ ಗುರುತಿಸಿಕೊಂಡಿದ್ದೇ ಎನ್ಸಿಎನಲ್ಲಿ. ಇದನ್ನ ಮೊದಲಿಗೆ ನೋಟಿಸ್ ಮಾಡಿದ್ದು ಈಗಿನ ಕೋಚ್ ರಾಹುಲ್ ದ್ರಾವಿಡ್. ಆ ವೇಳೆಗೆ ರಾಹುಲ್ ದ್ರಾವಿಡ್ ಟೀಂ ಇಂಡಿಯಾದಲ್ಲಿ ಆಡ್ತಾ ಇದ್ರು. ಹೀಗಾಗಿ 2000ನೇ ಇಸವಿಯಲ್ಲಿ ರಘು ಅವರನ್ನ ಎನ್ಸಿಎನಲ್ಲಿ ಟೀಂ ಇಂಡಿಯಾ ಪ್ಲೇಯರ್ಸ್ಗಳಿಗೆ ಥ್ರೋಡೌನ್ ಮಾಡೋಕೆ ಹೈಯರ್ ಮಾಡಲಾಗಿತ್ತು. ಆಗ ರಘು ತಂಡದಲ್ಲಿ ಪರ್ಮನೆಂಟ್ ಮೆಂಬರ್ ಆಗಿರಲಿಲ್ಲ. ಅದೆಷ್ಟೋ ಸಂದರ್ಭದಲ್ಲಿ ರಘು ಎನ್ಸಿಎನಲ್ಲಿ ಬರೀ ನೆಟ್ಸ್ಗೆ ಗಂಟೆಗಟ್ಟಲೆ ಬಾಲ್ ಎಸೀತಾನೆ ಇರ್ತಿದ್ರು. ರಘು ಥ್ರೋಡೌನ್ನಿಂದ ಇಂಪ್ರೆಸ್ ಆಗಿದ್ದ ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟಿಂಗ್ ಪ್ರಾಕ್ಟೀಸ್ಗೆ ಅಂತಾ ಅದೆಷ್ಟೋ ಬಾರಿ ರಾಘವೇಂದ್ರರನ್ನ ಮುಂಬೈಗೆ ಕರೆಸಿಕೊಂಡಿದ್ರು. 2011ರಲ್ಲಿ ರಘು ಅವರನ್ನ ಟೀಂ ಇಂಡಿಯಾದ ಹೆಚ್ಚುವರಿ ಸಪೋರ್ಟ್ ಸ್ಟಾಫ್ ಆಗಿಯೂ ನೇಮಕ ಮಾಡಲಾಗಿತ್ತು.
ರಾಘವೇಂದ್ರ ಅವರು ತುಂಬಾ ಸರಳ ಮತ್ತು ಸಜ್ಜನಿಕೆ ವ್ಯಕ್ತಿ. ಯಾವಾಗಲೂ ಹಣೆಗೆ ಕುಂಕುಮ ಧರಿಸ್ತಾರೆ. ಹಣೆಯಲ್ಲಿರುವ ಕುಂಕಮವೇ ರಘು ಅವರ ಮತ್ತೊಂದು ಐಡೆಂಟಿಟಿ. ಟೀಂ ಇಂಡಿಯಾದ ಜೊತೆಗಿದ್ದಾಗ ರಘು ಯಾವಾಗಲೂ ಆ್ಯಕ್ಟೀವ್ ಆಗಿಯೇ ಇರ್ತಾರೆ. ಪ್ಲೇಯರ್ಸ್ಗಳನ್ನ ಕಿಟ್ಗಳನ್ನ ಮ್ಯಾನೇಜ್ ಮಾಡೋದು. ಸ್ಟೇಡಿಯಂಗೆ ಬಂದಾಗ ಆಟಗಾರರ ಸ್ನೇಹಿತರು, ಕುಟುಂಬಸ್ಥರಿಗೆ ಹೆಲ್ಪ್ ಮಾಡೋದು. ಹೀಗೆ ಮುಖದಲ್ಲಿ ಒಂದು ಮಂದಹಾಸ ಇಟ್ಟುಕೊಂಡು ಏನಾದ್ರು ಒಂದು ಚಟುವಟಿಕೆಯನ್ನ ತೊಡಗಿರ್ತಾರೆ. ಆಟಗಾರರ ಶೂ ಕ್ಲೀನಿಂಗ್ನ್ನ ಕೂಡ ರಾಘವೇಂದ್ರ ಅತ್ಯಂತ ಶ್ರದ್ಧೆಯಿಂದ ಮಾಡ್ತಾರೆ. ಯಾರೂ ಸಲಹೆ ನೀಡದೆ, ಯಾರು ಕರೆಯದೆ ಖುದ್ದು ತಾವಾಗಿಯೇ ಪ್ಲೇಯರ್ಸ್ಗಳ ಬಳಿ ಹೋಗಿ ರಾಘವೇಂದ್ರ ಈ ಕೆಲಸ ಮಾಡ್ತಾರೆ. ಇನ್ನು ಅದೆಷ್ಟೋ ಸಂದರ್ಭದಲ್ಲಿ ಫಾರಿನ್ ಕ್ರಿಕೆಟರ್ಸ್ಗಳು ತಮಗೂ ನೆಟ್ಸ್ನಲ್ಲಿ ಥ್ರೋಡೌನ್ ಮಾಡುವಂತೆ ರಾಘವೇಂದ್ರರನ್ನ ಕೇಳಿಕೊಂಡಿದ್ರು. ಆದ್ರೆ ರಘು ಮಾತ್ರ ಇದನ್ನ ನಯವಾಗಿಯೇ ನಿರಾಕರಿಸಿದ್ರು. ಹಣದ ಪ್ರವಾಹವೇ ಹರಿಯೋ ಐಪಿಎಲ್ನಲ್ಲಿ ಕೂಡ ರಾಘವೇಂದ್ರ ಯಾವ ತಂಡದ ಪರವೂ ಥ್ರೋಡೌನ್ ಮಾಡೋದಿಲ್ಲ. 2023ರಲ್ಲಿ ಟೀಂ ಇಂಡಿಯಾ ಏಷ್ಯಾಕಪ್ ಗೆದ್ದಾಗ ಕ್ಯಾಪ್ಟನ್ ರೋಹಿತ್ ಶರ್ಮಾ ಟ್ರೋಫಿಯನ್ನ ರಾಘವೇಂದ್ರ ಕೈಗೆ ಕೊಟ್ಟಿದ್ರು. ಗ್ರೂಪ್ ಫೋಟೋ ವೇಳೆ ರಘು ಟ್ರೋಫಿಯನ್ನ ಎತ್ತಿ ಹಿಡಿದು ಸಂಭ್ರಮಿಸಿದ್ರು. ಇದು ಟೀಂ ಇಂಡಿಯಾದ ಸಕ್ಸಸ್ ಹಿಂದೆ.. ನಮ್ಮ ಬ್ಯಾಟ್ಸ್ಮನ್ಗಳ ಸೆಂಚೂರಿ, ರನ್ಗಳ ಹಿಂದೆ ಇರುವ ಮಾಂತ್ರಿಕನ ಸ್ಟೋರಿ.