ಮೂರು ಟೀಮ್.. ಮೂವರು ಕ್ಯಾಪ್ಟನ್ – ಬಿಸಿಸಿಐ ತಂತ್ರಗಾರಿಕೆ ಹಿಂದಿರುವ ರಹಸ್ಯವೇನು?

ಮೂರು ಟೀಮ್.. ಮೂವರು ಕ್ಯಾಪ್ಟನ್ – ಬಿಸಿಸಿಐ ತಂತ್ರಗಾರಿಕೆ ಹಿಂದಿರುವ ರಹಸ್ಯವೇನು?

ಟೀಂ ಇಂಡಿಯಾ ಸೌತ್​ ಆಫ್ರಿಕಾ ಟೂರ್​ಗೆ ತೆರಳ್ತಾ ಇದೆ. ಡಿಸೆಂಬರ್ 10ರಿಂದ ಒಟ್ಟು ಮೂರು ಸೀರಿಸ್​ಗಳನ್ನ ಆಡಲಿದೆ ಟಿ-20.. ವಂಡೇ ಮತ್ತು ಟೆಸ್ಟ್.. ಈ ಮೂರೂ ಸೀರಿಸ್​ಗೂ ಈಗಾಗ್ಲೇ ಟೀಂ ಅನೌನ್ಸ್ ಆಗಿದೆ. ಟಿ-20ಗೆ ಒಂದು ಟೀಂ.. ವಂಡೇಗೆ ಇನ್ನೊಂದು ಟೀಂ.. ಟೆಸ್ಟ್​ಗೆ ಮತ್ತೊಂದು ಟೀಂ. ಮೂರೂ ಸೀರಿಸ್​ಗೆ ಪ್ರತ್ಯೇಕ ಟೀಂಗಳು. ದಕ್ಷಿಣ ಆಫ್ರಿಕಾಗೆ ಟೀಂ ಇಂಡಿಯಾದ ಒಟ್ಟು ಮೂರು ಟೀಂಗಳು ತೆರಳಲಿವೆ. ಇನ್ನೊಂದು ಇಂಟ್ರೆಸ್ಟಿಂಗ್ ಏನಂದ್ರೆ, ಕೇವಲ ಮೂರು ಟೀಮ್​ಗಳು ಮಾತ್ರವಲ್ಲ ಮೂರೂ ಟೀಂಗಳಿಗೂ ಮೂವರು ಕ್ಯಾಪ್ಟನ್​​ಗಳನ್ನ ಸೆಲೆಕ್ಟ್ ಮಾಡಲಾಗಿದೆ. ಟಿ-20ಗೆ ಒಬ್ಬ ಕ್ಯಾಪ್ಟನ್.. ವಂಡೇಗೆ ಒಬ್ಬ ಕ್ಯಾಪ್ಟನ್.. ಟೆಸ್ಟ್​ಗೆ ಅಂತಾನೆ ಒಬ್ಬ ಕ್ಯಾಪ್ಟನ್. ಇದು ಟೀಂ ಇಂಡಿಯಾದಲ್ಲಾಗುತ್ತಿರುವ ಮತ್ತೊಂದು ಹೊಸ ಪ್ರಯೋಗ. ಆದ್ರೆ ಸುಮ್ನೆ ಈ ಪ್ರಯೋಗ ಮಾಡ್ತಾ ಇಲ್ಲ. ಇದರ ಹಿಂದೆ ಭವಿಷ್ಯದಲ್ಲಿ ಟೀಂ ಇಂಡಿಯಾದಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಬಿಸಿಸಿಐ ಸೂಕ್ಷ್ಮವಾಗಿಯೇ ಸುಳಿವು ನೀಡಿದೆ. ಮೂರು ಟೀಂ.. ಮೂವರು ಕ್ಯಾಪ್ಟನ್​​..ಇದರ ರಹಸ್ಯದ ಬಗ್ಗೆ ವಿವರಣೆ ಇಲ್ಲಿದೆ.

ಇದನ್ನೂ ಓದಿ:

ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರೆಯುತ್ತಾರೆ ಅಂದ ಮೇಲೆ ತಂಡದಲ್ಲೂ ಇನ್ನೊಂದಷ್ಟು ಪ್ರಯೋಗಗಳು ನಡೆಯಲೇಬೇಕಲ್ವಾ? ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸೀರಿಸ್​ಗೆ ಸೂರ್ಯಕುಮಾರ್ ಯಾದವ್​ ಕ್ಯಾಪ್ಟನ್. ಏಕದಿನ ಸರಣಿಗೆ ಗೆ ಕೆಎಲ್ ರಾಹುಲ್ ಕ್ಯಾಪ್ಟನ್.. ಟೆಸ್ಟ್​ ಸೀರಿಸ್​ಗೆ ರೋಹಿತ್​ ಶರ್ಮಾ ಕ್ಯಾಪ್ಟನ್.  ಇನ್ನು ರೋಹಿತ್​ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ವಂಡೇ ಮತ್ತು ಟಿ-20 ಆಡಲ್ಲ ಎಂದಿದ್ದಾರೆ. ಅವರು ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಹೀಗಾಗಿ ಹೊಸ ಕ್ಯಾಪ್ಟನ್​ ಆಯ್ಕೆ ಮಾಡಲೇಬೇಕಿತ್ತು. ಆದ್ರೆ ಇದು ಇಷ್ಟಕ್ಕೇ ಸೀಮಿತವಾಗಿಲ್ಲ. ಇದರ ಹಿಂದೆಯೂ ಬಿಸಿಸಿಆ ಹೆಣೆದಿರುವ ತಂತ್ರಗಾರಿಕೆಯನ್ನೂ ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ, ಇಲ್ಲಿ ಕೇವಲ ಮೂವರು ಕ್ಯಾಪ್ಟನ್​​ಗಳಷ್ಟೇ ಅಲ್ಲ, ಮೂರು ಬೇರೆ ಬೇರೆ ತಂಡವನ್ನೂ ಕೂಡಾ ರಚಿಸಲಾಗಿದೆ. ಟಿ-20ಗೆ ಅಂತಾನೆ ಒಂದು ಟೀಂ.. ವಂಡೇಗೆ ಅಂತಾನೆ ಇನ್ನೊಂದು ಟೀಂ.. ಟೆಸ್ಟ್​ಗೆ ಅಂತಾನೆ ಮತ್ತೊಂದು ಟೀಂ. ಅದಕ್ಕೆ ಸರಿಯಾಗಿ ಮೂವರು ನಾಯಕರು.

ಭವಿಷ್ಯದಲ್ಲಿ ಟೀಂ ಇಂಡಿಯಾ ಇದೇ ರೀತಿ ಸೆಟ್​​ಅಪ್​ ಆಗುವ ಸಾಧ್ಯತೆ ಇದೆ. ಕ್ರಿಕೆಟ್​​ ಅತ್ಯಂತ ಫಾಸ್ಟ್ ಆಗಿ ಬದಲಾಗುತ್ತಿದೆ. ಟಿ-20 ಕ್ರೇಜ್​​ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಟೂರ್ನ್‌ಮೆಂಟ್​​ಗಳ ಸಂಖ್ಯೆಯೂ ಹೆಚ್ಚಾಗ್ತಿದೆ. ಅದ್ರ ಜೊತೆಗೆ ಫ್ರಾಂಚೈಸಿ ಲೀಗ್​ಗಳು ಬೇರೆ ನಡೀತಾನೆ ಇರುತ್ತೆ. ಕ್ರಿಕೆಟರ್ಸ್​ಗಳ ಶೆಡ್ಯೂಲ್ ಕೂಡ ಬ್ಯುಸಿಯಾಗ್ತಿದೆ. ಇದ್ರ ಜೊತೆಗೆ ಮೂರೂ ಫಾರ್ಮೆಟ್​ಗಳಲ್ಲೂ ಆಡುವವರ ಸಂಖ್ಯೆಯೂ ಕಡಿಮೆಯಾಗ್ತಾ ಇದೆ. ಟೆಸ್ಟ್ ಮತ್ತು ವಂಡೇ ಟೀಂನಲ್ಲಿ ಹೆಚ್ಚೇನೂ ವ್ಯತ್ಯಾಸ ಇರುತ್ತಿರಲಿಲ್ಲ. ಆದ್ರೆ ಟಿ-20 ಕ್ರಿಕೆಟ್ ಹೆಚ್ಚಾದ ಮೇಲೆ ಟೆಸ್ಟ್​​ನಲ್ಲೂ ಆಡಬಲ್ಲ​​ ಪ್ಲೇಯರ್​​ಗಳ ಸಂಖ್ಯೆ ಕಡಿಮೆಯಾಗಿದೆ. ಟೆಸ್ಟ್ ಯಾಕೆ, ಟಿ-20ಯಲ್ಲಿ ಆಡೋ ಹಲವರು ವಂಡೇ ಫಾರ್ಮೆಟ್​ಗೂ ಸರಿಯಾಗಿ ಸೆಟ್ ಆಗಲ್ಲ. ಹೀಗಾಗಿ ಫ್ಯೂಚರ್​ನಲ್ಲಿ ಫಾರ್ಮೆಟ್​​ಗೆ ತಕ್ಕಂತೆ ಟೀಮ್​ನ್ನ ಕೂಡ ರೆಡಿ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡ್ತಾ ಇರುವಂತೆ ಕಾಣ್ತಿದೆ. ಹೀಗಾಗಿ ಟೆಸ್ಟ್​ಗೆ ಒಂದು ಸಪರೇಟ್ ಟೀಂ..ಅದಕ್ಕೆ ಒಬ್ಬ ಸಪರೇಟ್ ಕ್ಯಾಪ್ಟನ್.. ವಂಡೆಗೆ ಅಂತಾನೆ ಒಂದು ಟೀಂ..ಅದಕ್ಕೂ ಒಬ್ಬ ಸಪರೇಟ್ ಕ್ಯಾಪ್ಟನ್.. ಟಿ-20ಗೆ ಅಂತಾನೆ ಒಂದು ಟೀಂ..ಅದಕ್ಕೂ ಒಬ್ಬ ಸಪರೇಟ್ ಕ್ಯಾಪ್ಟನ್. ಸದ್ಯ ಟೀಂ ಇಂಡಿಯಾದಲ್ಲಿ ಮೂರೂ ಫಾರ್ಮೆಟ್​ಗೂ ರೋಹಿತ್ ಶರ್ಮಾರೇ ಫುಲ್ ಟೈಮ್ ಕ್ಯಾಪ್ಟನ್. 2022ರಲ್ಲಿ ಟಿ-20 ವರ್ಲ್ಡ್​ಕಪ್ ಸೋತ ಬಳಿಕ ರೋಹಿತ್ ಶರ್ಮಾ ಟಿ-20 ಟೀಮ್​​ನ್ನ ಲೀಡ್ ಮಾಡ್ತಾ ಇಲ್ಲ. ವಂಡೇ ಮತ್ತು ಟೆಸ್ಟ್​ಗೆ ಮಾತ್ರ ಕ್ಯಾಪ್ಟನ್ ಆಗಿದ್ದಾರೆ. ಅದ್ರೀಗ ಫಾರ್ ದ ಫಸ್ಟ್ ಟೈಮ್​ ವಂಡೆ, ಟೆಸ್ಟ್​ ಮತ್ತು ಟಿ-20ಗೆ ಮೂವರು ಸಪರೇಟ್ ಕ್ಯಾಪ್ಟನ್ಸ್​ಗಳನ್ನ ನೇಮಕ ಮಾಡಲಾಗಿದೆ. ಒಂದು ವೇಳೆ ಸೌತ್​ ಆಫ್ರಿಕಾದಲ್ಲಿ ಈ ಪ್ರಯೋಗ ಸಕ್ಸಸ್ ಆಯ್ತು ಅಂದ್ರೆ, ಮುಂದಿನ ವರ್ಷಗಳಲ್ಲಿ ಇಂಡಿಯನ್ ಕ್ರಿಕೆಟ್​​ನಲ್ಲಿ ಮೂರು ಫಾರ್ಮೆಟ್​​ಗೆ ಮೂರು ಪ್ರತ್ಯೇಕ ಟೀಮ್​ನ್ನ, ಮೂವರು ಪ್ರತ್ಯೇಕ ಕ್ಯಾಪ್ಟನ್​​ಗಳು ಲೀಡ್​ ಮಾಡಿದ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಮೂರೂ ಟೀಂಗಳನ್ನ ಒಬ್ಬನೇ ಕ್ಯಾಪ್ಟನ್​ ಲೀಡ್ ಮಾಡೋದು ಅಷ್ಟೊಂದು ಸುಲಭ ಇಲ್ಲ. ಕ್ಯಾಪ್ಟನ್ ಮೇಲೆ ಪ್ರೆಷರ್ ಕೂಡ ಹೆಚ್ಚಿರುತ್ತೆ. ಈಗ ದಕ್ಷಿಣ ಆಫ್ರಿಕಾ ಟೂರ್ ವೇಳೆ ಮೂರು ಸೀರಿಸ್​ಗಳನ್ನ ಆಡ್ತಾ ಇದ್ದಾರೆ. ಒಬ್ಬರೇ ಕ್ಯಾಪ್ಟನ್ ಅಂತಾ ಇಟ್ಕೊಳ್ಳಿ. ಟಿ-20 ಸೀರಿಸ್ ಮುಗಿದ ಬೆನ್ನಲ್ಲೇ ವಂಡೇ ಸೀರಿಸ್​ ಆಡಬೇಕು. ಆಗ ಕ್ಯಾಪ್ಟನ್​ ವಂಡೇ ಫಾರ್ಮೆಟ್​ಗೆ ಮೆಂಟಲಿ ಸೆಟ್ ಆಗಬೇಕು. ತನಗೆ ಬೇಕಾದ ಪ್ಲೇಯಿಂಗ್-11ನನ್ನ ಪಿಕ್ ಮಾಡಬೇಕು. ವಂಡೆ ಮ್ಯಾಚ್​ಗಳಿಗೆ ಸಪರೇಟ್ ಸ್ಟ್ರ್ಯಾಟಜಿ ಮಾಡಬೇಕು. ಸೀರಿಸ್​ ಗೆಲ್ಲಬೇಕು. ನಂತರ ಕೂಡ ಟೆಸ್ಟ್​ ಸೀರಿಸ್​ ಶುರುವಾಗುತ್ತೆ. ಐದು ದಿನಗಳ ಕಾಲ ನಿರಂತರವಾಗಿ ಸ್ಟ್ರ್ಯಾಟಜಿ ಮಾಡಬೇಕು. ಆಗ ನಾಯಕನಿಗೂ ವಿಶ್ರಾಂತಿ ಸಿಗುವುದಿಲ್ಲ. ಇದು ಪರ್ಫಾಮೆನ್ಸ್ ಮೇಲೂ ಎಫೆಕ್ಟ್ ಆಗಬಹುದು. ರಿಸಲ್ಟ್ ಮೇಲೂ ಎಫೆಕ್ಟ್ ಆಗಬಹುದು. ಈ ಎಲ್ಲಾ ಕಾರಣಕ್ಕಾಗಿ ಕ್ಯಾಪ್ಟನ್ ಮತ್ತು ತಂಡದ ವಿಚಾರವಾಗಿ ಈಗ ಬಿಸಿಸಿಐ ನಡೆಸ್ತಾ ಇರೋದು ವೆರಿ ವೆರಿ ಇಂಪಾರ್ಟೆಂಟ್ ಎಕ್ಸ್​ಪರಿಮೆಂಟ್.

 

ಹಾಗಂತಾ ಟಿ-20 ಮತ್ತು ವಂಡೇ ಆಡುವವರು ಟೆಸ್ಟ್​ನಲ್ಲಿ ಆಡಬಾರದು. ಟಿ-20 ಟೀಂನಲ್ಲಿರೋರನ್ನ ಟೆಸ್ಟ್​ ಸೆಲೆಕ್ಟ್ ಮಾಡೋದೆ ಇಲ್ಲ ಅಂತೇನಲ್ಲ. ಒಂದು ವೇಳೆ ಮೂರೂ ಫಾರ್ಮೆಟ್​ನಲ್ಲೂ ಪರ್ಫಾಮ್​​ ಮಾಡುವಂತಾ ಪ್ಲೇಯರ್ ಆಗಿದ್ರೆ ಟಿ-20, ವಂಡೇ ಮತ್ತು ಟೆಸ್ಟ್​ ಎಲ್ಲಾ ಟೀಂನಲ್ಲೂ ಅವರನ್ನ ಸೇರಿಸಬಹುದು. ಮೂರೂ ಫಾರ್ಮೆಟ್​ಗೆ ಫಿಟ್ ಆಗಿದ್ರಷ್ಟೇ ಆತ ಪರ್ಫೆಕ್ಟ್ ಕ್ರಿಕೆಟರ್ ಆಗೋಕೆ ಸಾಧ್ಯ. ಎಸ್ಪೆಷಲಿ ಟೆಸ್ಟ್ ಆಡೋ ಕೆಪಾಸಿಟಿ ಇರಬೇಕು. ಈಗ ನೋಡಿ, ಸೌತ್ ಆಫ್ರಿಕಾ ಸೀರಿಸ್​ಗೆ ಟಿ-20, ವಂಡೇ ಮತ್ತು ಟೆಸ್ಟ್​ ಈ ಮೂರೂ ತಂಡಗಳಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಎಲ್ಲಾ ಮೂರು ಫಾರ್ಮೆಟ್​ನ ಟೀಂನಲ್ಲಿ ಸೆಲೆಕ್ಟ್ ಆಗಿದ್ದಾರೆ. ಶ್ರೇಯಸ್ ಅಯ್ಯರ್, ಮುಕೇಶ್ ಕುಮಾರ್ ಮತ್ತು ರುತುರಾಜ್​ ಗಾಯಕ್ವಾಡ್. ಈ ಮೂವರು ಮಾತ್ರ ದಕ್ಷಿಣ ಆಫ್ರಿಕಾದಲ್ಲಿ ಟಿ-20, ವಂಡೇ ಮತ್ತು ಟೆಸ್ಟ್​ ಸೀರಿಸ್​​ಗಳಲ್ಲಿ ಆಡಲಿದ್ದಾರೆ. ಇನ್ಯಾವುದೇ ಪ್ಲೇಯರ್ ಕೂಡ ಮೂರೂ ಫಾರ್ಮೆಟ್​​ಗಳ ಟೀಂಗೆ ಆಯ್ಕೆಯಾಗಿಲ್ಲ.

ಇವಿಷ್ಟು ಟೀಂ ಇಂಡಿಯಾದ ಮೂವರು ಕ್ಯಾಪ್ಟನ್ಸ್ ಮತ್ತು ಮೂರು ಟೀಂಗಳ ವಿ​ಚಾರ ಆಯ್ತು. ಇನ್ನು ಕೋಚ್​​ ವಿಚಾರದಲ್ಲೂ ಮುಂದಿನ ದಿನಗಳಲ್ಲಿ ಬದಲಾವಣೆಗಳಾಗಬಹುದು. ರಾಹುಲ್ ದ್ರಾವಿಡ್ ಬಳಿಕ ಇಬ್ಬರು ಟೀಂ ಇಂಡಿಯಾದ ಹೆಡ್​ ಕೋಚ್​ಗಳಾಗುವ ಸಾಧ್ಯತೆ ಇದೆ. ವಿವಿಎಸ್​ ಲಕ್ಷ್ಮಣ್ ಮತ್ತು ಆಶಿಶ್​ ನೆಹ್ರಾ. ಲಕ್ಷ್ಮಣ್ ವಂಡೇ ಮತ್ತು ಟೆಸ್ಟ್​ ಟೀಂಗೆ ಮೇನ್ ಕೋಚ್ ಆಗಬಹುದು. ಆಶಿಶ್ ನೆಹ್ರಾರನ್ನ ಟಿ-20 ಕೋಚ್ ಆಗಿ ನೇಮಕ ಮಾಡಬಹುದು. ಹೀಗೆ ಟೀಂ, ಕ್ಯಾಪ್ಟನ್ ಮತ್ತು ಕೋಚ್ ಈ ಮೂರೂ ವಿಚಾರಗಳಲ್ಲಿ ಇಂಡಿಯನ್​ ಕ್ರಿಕೆಟ್​ನಲ್ಲಿ ಮುಂದಿನ ವರ್ಷಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುವ ಸಾಧ್ಯತೆ ಇದೆ.

 

Sulekha