ಮೂರು ಟೀಮ್.. ಮೂವರು ಕ್ಯಾಪ್ಟನ್ – ಬಿಸಿಸಿಐ ತಂತ್ರಗಾರಿಕೆ ಹಿಂದಿರುವ ರಹಸ್ಯವೇನು?
ಟೀಂ ಇಂಡಿಯಾ ಸೌತ್ ಆಫ್ರಿಕಾ ಟೂರ್ಗೆ ತೆರಳ್ತಾ ಇದೆ. ಡಿಸೆಂಬರ್ 10ರಿಂದ ಒಟ್ಟು ಮೂರು ಸೀರಿಸ್ಗಳನ್ನ ಆಡಲಿದೆ ಟಿ-20.. ವಂಡೇ ಮತ್ತು ಟೆಸ್ಟ್.. ಈ ಮೂರೂ ಸೀರಿಸ್ಗೂ ಈಗಾಗ್ಲೇ ಟೀಂ ಅನೌನ್ಸ್ ಆಗಿದೆ. ಟಿ-20ಗೆ ಒಂದು ಟೀಂ.. ವಂಡೇಗೆ ಇನ್ನೊಂದು ಟೀಂ.. ಟೆಸ್ಟ್ಗೆ ಮತ್ತೊಂದು ಟೀಂ. ಮೂರೂ ಸೀರಿಸ್ಗೆ ಪ್ರತ್ಯೇಕ ಟೀಂಗಳು. ದಕ್ಷಿಣ ಆಫ್ರಿಕಾಗೆ ಟೀಂ ಇಂಡಿಯಾದ ಒಟ್ಟು ಮೂರು ಟೀಂಗಳು ತೆರಳಲಿವೆ. ಇನ್ನೊಂದು ಇಂಟ್ರೆಸ್ಟಿಂಗ್ ಏನಂದ್ರೆ, ಕೇವಲ ಮೂರು ಟೀಮ್ಗಳು ಮಾತ್ರವಲ್ಲ ಮೂರೂ ಟೀಂಗಳಿಗೂ ಮೂವರು ಕ್ಯಾಪ್ಟನ್ಗಳನ್ನ ಸೆಲೆಕ್ಟ್ ಮಾಡಲಾಗಿದೆ. ಟಿ-20ಗೆ ಒಬ್ಬ ಕ್ಯಾಪ್ಟನ್.. ವಂಡೇಗೆ ಒಬ್ಬ ಕ್ಯಾಪ್ಟನ್.. ಟೆಸ್ಟ್ಗೆ ಅಂತಾನೆ ಒಬ್ಬ ಕ್ಯಾಪ್ಟನ್. ಇದು ಟೀಂ ಇಂಡಿಯಾದಲ್ಲಾಗುತ್ತಿರುವ ಮತ್ತೊಂದು ಹೊಸ ಪ್ರಯೋಗ. ಆದ್ರೆ ಸುಮ್ನೆ ಈ ಪ್ರಯೋಗ ಮಾಡ್ತಾ ಇಲ್ಲ. ಇದರ ಹಿಂದೆ ಭವಿಷ್ಯದಲ್ಲಿ ಟೀಂ ಇಂಡಿಯಾದಲ್ಲಿ ಆಗಬಹುದಾದ ಬದಲಾವಣೆಗಳ ಬಗ್ಗೆ ಬಿಸಿಸಿಐ ಸೂಕ್ಷ್ಮವಾಗಿಯೇ ಸುಳಿವು ನೀಡಿದೆ. ಮೂರು ಟೀಂ.. ಮೂವರು ಕ್ಯಾಪ್ಟನ್..ಇದರ ರಹಸ್ಯದ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ:
ರಾಹುಲ್ ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಿ ಮುಂದುವರೆಯುತ್ತಾರೆ ಅಂದ ಮೇಲೆ ತಂಡದಲ್ಲೂ ಇನ್ನೊಂದಷ್ಟು ಪ್ರಯೋಗಗಳು ನಡೆಯಲೇಬೇಕಲ್ವಾ? ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸೀರಿಸ್ಗೆ ಸೂರ್ಯಕುಮಾರ್ ಯಾದವ್ ಕ್ಯಾಪ್ಟನ್. ಏಕದಿನ ಸರಣಿಗೆ ಗೆ ಕೆಎಲ್ ರಾಹುಲ್ ಕ್ಯಾಪ್ಟನ್.. ಟೆಸ್ಟ್ ಸೀರಿಸ್ಗೆ ರೋಹಿತ್ ಶರ್ಮಾ ಕ್ಯಾಪ್ಟನ್. ಇನ್ನು ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧ ವಂಡೇ ಮತ್ತು ಟಿ-20 ಆಡಲ್ಲ ಎಂದಿದ್ದಾರೆ. ಅವರು ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಹೀಗಾಗಿ ಹೊಸ ಕ್ಯಾಪ್ಟನ್ ಆಯ್ಕೆ ಮಾಡಲೇಬೇಕಿತ್ತು. ಆದ್ರೆ ಇದು ಇಷ್ಟಕ್ಕೇ ಸೀಮಿತವಾಗಿಲ್ಲ. ಇದರ ಹಿಂದೆಯೂ ಬಿಸಿಸಿಆ ಹೆಣೆದಿರುವ ತಂತ್ರಗಾರಿಕೆಯನ್ನೂ ಅಲ್ಲಗೆಳೆಯುವಂತಿಲ್ಲ. ಯಾಕೆಂದರೆ, ಇಲ್ಲಿ ಕೇವಲ ಮೂವರು ಕ್ಯಾಪ್ಟನ್ಗಳಷ್ಟೇ ಅಲ್ಲ, ಮೂರು ಬೇರೆ ಬೇರೆ ತಂಡವನ್ನೂ ಕೂಡಾ ರಚಿಸಲಾಗಿದೆ. ಟಿ-20ಗೆ ಅಂತಾನೆ ಒಂದು ಟೀಂ.. ವಂಡೇಗೆ ಅಂತಾನೆ ಇನ್ನೊಂದು ಟೀಂ.. ಟೆಸ್ಟ್ಗೆ ಅಂತಾನೆ ಮತ್ತೊಂದು ಟೀಂ. ಅದಕ್ಕೆ ಸರಿಯಾಗಿ ಮೂವರು ನಾಯಕರು.
ಭವಿಷ್ಯದಲ್ಲಿ ಟೀಂ ಇಂಡಿಯಾ ಇದೇ ರೀತಿ ಸೆಟ್ಅಪ್ ಆಗುವ ಸಾಧ್ಯತೆ ಇದೆ. ಕ್ರಿಕೆಟ್ ಅತ್ಯಂತ ಫಾಸ್ಟ್ ಆಗಿ ಬದಲಾಗುತ್ತಿದೆ. ಟಿ-20 ಕ್ರೇಜ್ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಟೂರ್ನ್ಮೆಂಟ್ಗಳ ಸಂಖ್ಯೆಯೂ ಹೆಚ್ಚಾಗ್ತಿದೆ. ಅದ್ರ ಜೊತೆಗೆ ಫ್ರಾಂಚೈಸಿ ಲೀಗ್ಗಳು ಬೇರೆ ನಡೀತಾನೆ ಇರುತ್ತೆ. ಕ್ರಿಕೆಟರ್ಸ್ಗಳ ಶೆಡ್ಯೂಲ್ ಕೂಡ ಬ್ಯುಸಿಯಾಗ್ತಿದೆ. ಇದ್ರ ಜೊತೆಗೆ ಮೂರೂ ಫಾರ್ಮೆಟ್ಗಳಲ್ಲೂ ಆಡುವವರ ಸಂಖ್ಯೆಯೂ ಕಡಿಮೆಯಾಗ್ತಾ ಇದೆ. ಟೆಸ್ಟ್ ಮತ್ತು ವಂಡೇ ಟೀಂನಲ್ಲಿ ಹೆಚ್ಚೇನೂ ವ್ಯತ್ಯಾಸ ಇರುತ್ತಿರಲಿಲ್ಲ. ಆದ್ರೆ ಟಿ-20 ಕ್ರಿಕೆಟ್ ಹೆಚ್ಚಾದ ಮೇಲೆ ಟೆಸ್ಟ್ನಲ್ಲೂ ಆಡಬಲ್ಲ ಪ್ಲೇಯರ್ಗಳ ಸಂಖ್ಯೆ ಕಡಿಮೆಯಾಗಿದೆ. ಟೆಸ್ಟ್ ಯಾಕೆ, ಟಿ-20ಯಲ್ಲಿ ಆಡೋ ಹಲವರು ವಂಡೇ ಫಾರ್ಮೆಟ್ಗೂ ಸರಿಯಾಗಿ ಸೆಟ್ ಆಗಲ್ಲ. ಹೀಗಾಗಿ ಫ್ಯೂಚರ್ನಲ್ಲಿ ಫಾರ್ಮೆಟ್ಗೆ ತಕ್ಕಂತೆ ಟೀಮ್ನ್ನ ಕೂಡ ರೆಡಿ ಮಾಡೋಕೆ ಬಿಸಿಸಿಐ ಪ್ಲ್ಯಾನ್ ಮಾಡ್ತಾ ಇರುವಂತೆ ಕಾಣ್ತಿದೆ. ಹೀಗಾಗಿ ಟೆಸ್ಟ್ಗೆ ಒಂದು ಸಪರೇಟ್ ಟೀಂ..ಅದಕ್ಕೆ ಒಬ್ಬ ಸಪರೇಟ್ ಕ್ಯಾಪ್ಟನ್.. ವಂಡೆಗೆ ಅಂತಾನೆ ಒಂದು ಟೀಂ..ಅದಕ್ಕೂ ಒಬ್ಬ ಸಪರೇಟ್ ಕ್ಯಾಪ್ಟನ್.. ಟಿ-20ಗೆ ಅಂತಾನೆ ಒಂದು ಟೀಂ..ಅದಕ್ಕೂ ಒಬ್ಬ ಸಪರೇಟ್ ಕ್ಯಾಪ್ಟನ್. ಸದ್ಯ ಟೀಂ ಇಂಡಿಯಾದಲ್ಲಿ ಮೂರೂ ಫಾರ್ಮೆಟ್ಗೂ ರೋಹಿತ್ ಶರ್ಮಾರೇ ಫುಲ್ ಟೈಮ್ ಕ್ಯಾಪ್ಟನ್. 2022ರಲ್ಲಿ ಟಿ-20 ವರ್ಲ್ಡ್ಕಪ್ ಸೋತ ಬಳಿಕ ರೋಹಿತ್ ಶರ್ಮಾ ಟಿ-20 ಟೀಮ್ನ್ನ ಲೀಡ್ ಮಾಡ್ತಾ ಇಲ್ಲ. ವಂಡೇ ಮತ್ತು ಟೆಸ್ಟ್ಗೆ ಮಾತ್ರ ಕ್ಯಾಪ್ಟನ್ ಆಗಿದ್ದಾರೆ. ಅದ್ರೀಗ ಫಾರ್ ದ ಫಸ್ಟ್ ಟೈಮ್ ವಂಡೆ, ಟೆಸ್ಟ್ ಮತ್ತು ಟಿ-20ಗೆ ಮೂವರು ಸಪರೇಟ್ ಕ್ಯಾಪ್ಟನ್ಸ್ಗಳನ್ನ ನೇಮಕ ಮಾಡಲಾಗಿದೆ. ಒಂದು ವೇಳೆ ಸೌತ್ ಆಫ್ರಿಕಾದಲ್ಲಿ ಈ ಪ್ರಯೋಗ ಸಕ್ಸಸ್ ಆಯ್ತು ಅಂದ್ರೆ, ಮುಂದಿನ ವರ್ಷಗಳಲ್ಲಿ ಇಂಡಿಯನ್ ಕ್ರಿಕೆಟ್ನಲ್ಲಿ ಮೂರು ಫಾರ್ಮೆಟ್ಗೆ ಮೂರು ಪ್ರತ್ಯೇಕ ಟೀಮ್ನ್ನ, ಮೂವರು ಪ್ರತ್ಯೇಕ ಕ್ಯಾಪ್ಟನ್ಗಳು ಲೀಡ್ ಮಾಡಿದ್ರೂ ಆಶ್ಚರ್ಯ ಇಲ್ಲ. ಯಾಕಂದ್ರೆ ಮೂರೂ ಟೀಂಗಳನ್ನ ಒಬ್ಬನೇ ಕ್ಯಾಪ್ಟನ್ ಲೀಡ್ ಮಾಡೋದು ಅಷ್ಟೊಂದು ಸುಲಭ ಇಲ್ಲ. ಕ್ಯಾಪ್ಟನ್ ಮೇಲೆ ಪ್ರೆಷರ್ ಕೂಡ ಹೆಚ್ಚಿರುತ್ತೆ. ಈಗ ದಕ್ಷಿಣ ಆಫ್ರಿಕಾ ಟೂರ್ ವೇಳೆ ಮೂರು ಸೀರಿಸ್ಗಳನ್ನ ಆಡ್ತಾ ಇದ್ದಾರೆ. ಒಬ್ಬರೇ ಕ್ಯಾಪ್ಟನ್ ಅಂತಾ ಇಟ್ಕೊಳ್ಳಿ. ಟಿ-20 ಸೀರಿಸ್ ಮುಗಿದ ಬೆನ್ನಲ್ಲೇ ವಂಡೇ ಸೀರಿಸ್ ಆಡಬೇಕು. ಆಗ ಕ್ಯಾಪ್ಟನ್ ವಂಡೇ ಫಾರ್ಮೆಟ್ಗೆ ಮೆಂಟಲಿ ಸೆಟ್ ಆಗಬೇಕು. ತನಗೆ ಬೇಕಾದ ಪ್ಲೇಯಿಂಗ್-11ನನ್ನ ಪಿಕ್ ಮಾಡಬೇಕು. ವಂಡೆ ಮ್ಯಾಚ್ಗಳಿಗೆ ಸಪರೇಟ್ ಸ್ಟ್ರ್ಯಾಟಜಿ ಮಾಡಬೇಕು. ಸೀರಿಸ್ ಗೆಲ್ಲಬೇಕು. ನಂತರ ಕೂಡ ಟೆಸ್ಟ್ ಸೀರಿಸ್ ಶುರುವಾಗುತ್ತೆ. ಐದು ದಿನಗಳ ಕಾಲ ನಿರಂತರವಾಗಿ ಸ್ಟ್ರ್ಯಾಟಜಿ ಮಾಡಬೇಕು. ಆಗ ನಾಯಕನಿಗೂ ವಿಶ್ರಾಂತಿ ಸಿಗುವುದಿಲ್ಲ. ಇದು ಪರ್ಫಾಮೆನ್ಸ್ ಮೇಲೂ ಎಫೆಕ್ಟ್ ಆಗಬಹುದು. ರಿಸಲ್ಟ್ ಮೇಲೂ ಎಫೆಕ್ಟ್ ಆಗಬಹುದು. ಈ ಎಲ್ಲಾ ಕಾರಣಕ್ಕಾಗಿ ಕ್ಯಾಪ್ಟನ್ ಮತ್ತು ತಂಡದ ವಿಚಾರವಾಗಿ ಈಗ ಬಿಸಿಸಿಐ ನಡೆಸ್ತಾ ಇರೋದು ವೆರಿ ವೆರಿ ಇಂಪಾರ್ಟೆಂಟ್ ಎಕ್ಸ್ಪರಿಮೆಂಟ್.
ಹಾಗಂತಾ ಟಿ-20 ಮತ್ತು ವಂಡೇ ಆಡುವವರು ಟೆಸ್ಟ್ನಲ್ಲಿ ಆಡಬಾರದು. ಟಿ-20 ಟೀಂನಲ್ಲಿರೋರನ್ನ ಟೆಸ್ಟ್ ಸೆಲೆಕ್ಟ್ ಮಾಡೋದೆ ಇಲ್ಲ ಅಂತೇನಲ್ಲ. ಒಂದು ವೇಳೆ ಮೂರೂ ಫಾರ್ಮೆಟ್ನಲ್ಲೂ ಪರ್ಫಾಮ್ ಮಾಡುವಂತಾ ಪ್ಲೇಯರ್ ಆಗಿದ್ರೆ ಟಿ-20, ವಂಡೇ ಮತ್ತು ಟೆಸ್ಟ್ ಎಲ್ಲಾ ಟೀಂನಲ್ಲೂ ಅವರನ್ನ ಸೇರಿಸಬಹುದು. ಮೂರೂ ಫಾರ್ಮೆಟ್ಗೆ ಫಿಟ್ ಆಗಿದ್ರಷ್ಟೇ ಆತ ಪರ್ಫೆಕ್ಟ್ ಕ್ರಿಕೆಟರ್ ಆಗೋಕೆ ಸಾಧ್ಯ. ಎಸ್ಪೆಷಲಿ ಟೆಸ್ಟ್ ಆಡೋ ಕೆಪಾಸಿಟಿ ಇರಬೇಕು. ಈಗ ನೋಡಿ, ಸೌತ್ ಆಫ್ರಿಕಾ ಸೀರಿಸ್ಗೆ ಟಿ-20, ವಂಡೇ ಮತ್ತು ಟೆಸ್ಟ್ ಈ ಮೂರೂ ತಂಡಗಳಲ್ಲಿ ಕೇವಲ ಮೂವರು ಆಟಗಾರರು ಮಾತ್ರ ಎಲ್ಲಾ ಮೂರು ಫಾರ್ಮೆಟ್ನ ಟೀಂನಲ್ಲಿ ಸೆಲೆಕ್ಟ್ ಆಗಿದ್ದಾರೆ. ಶ್ರೇಯಸ್ ಅಯ್ಯರ್, ಮುಕೇಶ್ ಕುಮಾರ್ ಮತ್ತು ರುತುರಾಜ್ ಗಾಯಕ್ವಾಡ್. ಈ ಮೂವರು ಮಾತ್ರ ದಕ್ಷಿಣ ಆಫ್ರಿಕಾದಲ್ಲಿ ಟಿ-20, ವಂಡೇ ಮತ್ತು ಟೆಸ್ಟ್ ಸೀರಿಸ್ಗಳಲ್ಲಿ ಆಡಲಿದ್ದಾರೆ. ಇನ್ಯಾವುದೇ ಪ್ಲೇಯರ್ ಕೂಡ ಮೂರೂ ಫಾರ್ಮೆಟ್ಗಳ ಟೀಂಗೆ ಆಯ್ಕೆಯಾಗಿಲ್ಲ.
ಇವಿಷ್ಟು ಟೀಂ ಇಂಡಿಯಾದ ಮೂವರು ಕ್ಯಾಪ್ಟನ್ಸ್ ಮತ್ತು ಮೂರು ಟೀಂಗಳ ವಿಚಾರ ಆಯ್ತು. ಇನ್ನು ಕೋಚ್ ವಿಚಾರದಲ್ಲೂ ಮುಂದಿನ ದಿನಗಳಲ್ಲಿ ಬದಲಾವಣೆಗಳಾಗಬಹುದು. ರಾಹುಲ್ ದ್ರಾವಿಡ್ ಬಳಿಕ ಇಬ್ಬರು ಟೀಂ ಇಂಡಿಯಾದ ಹೆಡ್ ಕೋಚ್ಗಳಾಗುವ ಸಾಧ್ಯತೆ ಇದೆ. ವಿವಿಎಸ್ ಲಕ್ಷ್ಮಣ್ ಮತ್ತು ಆಶಿಶ್ ನೆಹ್ರಾ. ಲಕ್ಷ್ಮಣ್ ವಂಡೇ ಮತ್ತು ಟೆಸ್ಟ್ ಟೀಂಗೆ ಮೇನ್ ಕೋಚ್ ಆಗಬಹುದು. ಆಶಿಶ್ ನೆಹ್ರಾರನ್ನ ಟಿ-20 ಕೋಚ್ ಆಗಿ ನೇಮಕ ಮಾಡಬಹುದು. ಹೀಗೆ ಟೀಂ, ಕ್ಯಾಪ್ಟನ್ ಮತ್ತು ಕೋಚ್ ಈ ಮೂರೂ ವಿಚಾರಗಳಲ್ಲಿ ಇಂಡಿಯನ್ ಕ್ರಿಕೆಟ್ನಲ್ಲಿ ಮುಂದಿನ ವರ್ಷಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಳಾಗುವ ಸಾಧ್ಯತೆ ಇದೆ.