ಆರ್ ಎಸ್ ಎಸ್ ನಾಯಕರನ್ನು ಟಾರ್ಗೆಟ್ ಮಾಡಿದ್ಯಾ ಉಗ್ರ ಸಂಘಟನೆ? – ಲಿಸ್ಟ್ ನಲ್ಲಿ ಯಾರ್ಯಾರ ಹೆಸರು?
ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆ 30 ಮಂದಿ ಆರ್ಎಸ್ಎಸ್ ನಾಯಕರನ್ನು ಟಾರ್ಗೆಟ್ ಮಾಡಿದೆ. ಕಾಶ್ಮೀರದಲ್ಲಿರುವ ದಿ ರೆಸಿಸ್ಟೆಂಟ್ ಫ್ರಂಟ್ ಅನ್ನುವ ಲಷ್ಕರ್ ಬೆಂಬಲಿತ ಉಗ್ರ ಸಂಘಟನೆ ಆರ್ಎಸ್ಎಸ್ ನಾಯಕರನ್ನು ಹತ್ಯೆಗೈಯ್ಯಲು ಸಂಚು ರೂಪಿಸಿದ್ದು, ತನ್ನ ಟಾರ್ಗೆಟ್ ಲಿಸ್ಟ್ನಲ್ಲಿರುವ ಮಂದಿಯ ಹೆಸರನ್ನ ಕೂಡ ಬಹಿರಂಗಗೊಳಿಸಿದೆ.
ಇದನ್ನೂ ಓದಿ: ಚೀನಾದಿಂದ ಮತ್ತೊಂದು ಕುತಂತ್ರ – ಅರುಣಾಚಲದಲ್ಲಿ ಊರುಗಳ ಹೆಸರು ಬದಲಿಸಿದ್ದೇಕೆ?
ಜಮ್ಮು-ಕಾಶ್ಮೀರದಲ್ಲಿ ಆರ್ಎಸ್ಎಸ್ ಸಂಘಟನೆಯಲ್ಲಿ ಗುರುತಿಸಿಕೊಂಡಿರುವ ಮುಸ್ಲಿಂ ಸಮುದಾಯದ ನಾಯಕರನ್ನೇ ಕೊಲ್ಲೋಕೆ ಉಗ್ರರು ಸಂಚು ಹೂಡಿದ್ದಾರೆ. ಆದರೆ ಉಗ್ರರು ಈ ಟಾರ್ಗೆಟ್ ಲಿಸ್ಟ್ನಲ್ಲಿ ಆರ್ಎಸ್ಎಸ್ನ ಯಾವುದೇ ಉನ್ನತ ಮಟ್ಟದ ನಾಯಕರ ಹೆಸರು ಉಲ್ಲೇಖವಾಗಿಲ್ಲ.
ಏಪ್ರಿಲ್ 1ರಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಮ್ಮ ಭಾಷಣದಲ್ಲಿ ಅಖಂಡ ಭಾರತದ ಮರು ನಿರ್ಮಾಣದ ಬಗ್ಗೆ ಮಾತನಾಡಿದ್ದರು. ಇದರ ಬೆನ್ನಲ್ಲೇ ಲಷ್ಕರ್ ಬೆಂಬಲಿತ ಕಾಶ್ಮೀರಿ ಉಗ್ರ ಸಂಘಟನೆ ಆರ್ಎಸ್ಎಸ್ ನಾಯಕರನ್ನ ಹತ್ಯೆಗೈಯ್ಯೋದಾಗಿ ಬೆದರಿಕೆ ಒಡ್ಡಿದೆ.