ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ – ಮಾಜಿ ಪ್ರಿಯತಮೆ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ!

ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ – ಮಾಜಿ ಪ್ರಿಯತಮೆ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ ಕ್ರಿಕೆಟಿಗ!

ಕರ್ನಾಟಕದ ಖ್ಯಾತ ಕ್ರಿಕೆಟಿಗ ಕೆ.ಸಿ ಕಾರ್ಯಪ್ಪ ಅವರು ತನ್ನ ಮಾಜಿ ಪ್ರಿಯತಮೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನಗೆ ಹಾಗೂ ತನ್ನ ಕುಟುಂಬಸ್ಥರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು  ಮಾಜಿ ಪ್ರಿಯತಮೆ ವಿರುದ್ಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ರುತುರಾಜ್ ಪ್ಲೇಸ್​ಗೆ ಮತ್ತೊಬ್ಬ ಬ್ಯಾಟ್ಸ್​ಮನ್! – ಮೂವರು ಬ್ಯಾಟ್ಸ್​​ಮನ್​ಗಳ ಪೈಕಿ ಯಾರನ್ನು ಆಯ್ಕೆ ಮಾಡ್ತಾರೆ ರೋಹಿತ್ ಶರ್ಮಾ?  

ಬೆಂಗಳೂರಿನ ನಾಗಸಂದ್ರದ ರಾಮಯ್ಯ ಲೇಔಟ್ ನಿವಾಸಿಯಾಗಿರುವ 29 ವರ್ಷದ ಕೆ.ಸಿ ಕಾರ್ಯಪ್ಪ ಕೊಡಗಿನ 24 ವರ್ಷದ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ ಈ ಪ್ರೇಮ್ ಕಹಾನಿ ಹೆಚ್ಚು ಕಾಲ ಮುಂದುವರೆದಿರಲಿಲ್ಲ. ಡ್ರಗ್ ವ್ಯಸನಿ, ಕುಡಿತದ ಚಟ ಮತ್ತು ಅನೈತಿಕ ಸಂಬಂಧ ಹೊಂದಿದ್ದ ಕಾರಣ ನಾನು ಆಕೆಯಿಂದ ದೂರವಾಗಿದ್ದೆ ಎಂದು ಕೆ.ಸಿ ಕಾರ್ಯಪ್ಪ ತಿಳಿಸಿದ್ದಾರೆ. ಆದರೆ ಈ ಬ್ರೇಕ್ ಅಪ್ ಬೆನ್ನಲ್ಲೇ ಡಿಸೆಂಬರ್ 31, 2022 ರಂದು ಆ ಯುವತಿ ಕೆಸಿ ಕಾರ್ಯಪ್ಪ ವಿರುದ್ಧ ಬಾಗಲಗುಂಟೆ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಪ್ಪ ನನ್ನನ್ನು ಗರ್ಭಿಣಿ ಮಾಡಿದ್ದಾನೆ. ಆ ಬಳಿಕ ಸೆಪ್ಟೆಂಬರ್‌ನಲ್ಲಿ ತನಗೆ ಬಲವಂತವಾಗಿ ಗರ್ಭಪಾತ ಮಾತ್ರೆಗಳನ್ನು ತಿನ್ನಿಸಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಈ ದೂರು ದಾಖಲಾಗಿ ಇದೀಗ ಒಂದು ವರ್ಷದ ಬಳಿಕ ಕೆಸಿ ಕಾರ್ಯಪ್ಪ ಗಂಭೀರ ಆರೋಪದೊಂದಿಗೆ ಮಾಜಿ ಪ್ರಿಯತಮೆ ವಿರುದ್ಧ ಆರ್​.ಟಿ ನಗರ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ. ಮಾಜಿ ಪ್ರಿಯತಮೆ ತನಗೆ ಹಾಗೂ ಕುಟುಂಬ ಸದಸ್ಯರಿಗೆ ಬೆದರಿಕೆಯೊಡ್ಡುತ್ತಿದ್ದಾರೆ. ಅಷ್ಟೇ ಅಲ್ಲದೆ ನನ್ನ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾಳೆ ಎಂದು ಕೆ.ಸಿ ಕಾರ್ಯಪ್ಪ ಆರೋಪಿಸಿದ್ದಾರೆ. ತನ್ನ ಹೆಸರನ್ನು ಬರೆದು ಆತ್ಮಹತ್ಯೆ ಪತ್ರವನ್ನು ಹಾಕಿದ್ದಾಳೆ ಎಂದು ಯುವತಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಯುವತಿ, ಕಾರ್ಯಪ್ಪ ತನ್ನನ್ನು ಮದುವೆಯಾಗುವುದಾಗಿ ಹೇಳಿ ಪ್ರಕರಣವನ್ನು ಇತ್ಯರ್ಥ ಪಡಿಸಲು ಮನವೊಲಿಸಲು ಮುಂದಾಗಿದ್ದರು. ಅವರ ಕ್ರಿಕೆಟ್ ವೃತ್ತಿಜೀವನವನ್ನು ಪರಿಗಣಿಸಿ ನಾನು ಪೊಲೀಸರಿಗೆ ಯಾವುದೇ ಸಾಕ್ಷ್ಯವನ್ನು ನೀಡಲಿಲ್ಲ. ಇದೀಗ ನಾನು ಯಾವುದೇ ಸಾಕ್ಷ್ಯವನ್ನು ನೀಡದ ಕಾರಣ, ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ ಎಂದರು.

ನಾನು ಮದ್ಯಪಾನ ತ್ಯಜಿಸುವಂತೆ ಆಕೆಗೆ ಮನವರಿಕೆ ಮಾಡಿಕೊಡಲು ಯತ್ನಿಸಿದ್ದೆ. ಆದರೆ ಆಕೆ ತನ್ನ ಮಾತಿಗೆ ಕಿವಿಗೊಡದ ಕಾರಣ ಬೇರ್ಪಡಲು ನಿರ್ಧರಿಸಿದ್ದಾಗಿ ಕಾರ್ಯಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಕಾರ್ಯಪ್ಪ ನೀಡಿದ ದೂರಿನ ಆಧಾರದ ಮೇಲೆ ನಾವು ಪ್ರಕರಣವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ವಿರುದ್ಧದ ದೂರಿನ ಬಗ್ಗೆ ತನಗೆ ಇನ್ನೂ ತಿಳಿದಿಲ್ಲ. ಆದರೆ ನನ್ನ ಹೋರಾಟ ಮುಂದುವರೆಯಲಿದೆ ಎಂದು ದಿವ್ಯಾ ತಿಳಿಸಿದ್ದಾರೆ.

Shwetha M