ವ್ಯಕ್ತಿಯ ಮೈತುಂಬಾ ಜೇನುನೊಣಗಳು! – ಮುಂದೆ ಏನಾಯ್ತು ಗೊತ್ತಾ?
ಜೇನು ಅಂದಾಗ ಜೇನು ತುಪ್ಪದ ಸಿಹಿ ನೆನಪಾಗುತ್ತದೆ. ಆದರೆ ಜೇನುನೊಣಗಳನ್ನು ದೂರದಿಂದ ಕಂಡಾಗಲೇ ಅನೇಕರು ಭಯಭೀತರಾಗುತ್ತಾರೆ. ಒಂದು ವೇಳೆ ಅವು ಆಕ್ರಮಣಕ್ಕೆ ಮುಂದಾದರೆ ಅವುಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡಬೇಕು. ಹೀಗಾಗಿ ಅದರ ಸುತ್ತಲೂ ಅಲೆದಾಡುವುದಿರಲಿ ಅವು ಇರುವ ದಿಕ್ಕಿನತ್ತ ಸಾಗಲು ಜನ ನೂರು ಬಾರಿ ಯೋಚನೆ ಮಾಡುತ್ತಾರೆ. ಕೆಲವೊಂದು ಅಪಾಯಕಾರಿ ಜೇನುನೊಣಗಳು ಕಚ್ಚಿದರೆ ಅಪಾಯ ತಪ್ಪಿದ್ದಲ್ಲ. ಆದರೆ ಇಲ್ಲೊಬ್ಬ ವ್ಯಕ್ತಿಯ ಮೈತುಂಬಾ ನೂರಾರು ಜೇನುನೊಣಗಳು ತುಂಬಿಕೊಂಡಿವೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಈ ಹಾವು ಹಾರುತ್ತೆ ಹುಷಾರ್! – ಕರ್ನಾಟಕದಲ್ಲೇ ಇದೆ ಫ್ಲೈಯಿಂಗ್ ಸ್ನೇಕ್
ಜೇನುನೊಣಗಳ ದಾಳಿಯ ಬಗ್ಗೆ ನಾವು ಕೇಳಿರುತ್ತೇವೆ. ಕೆಲವೊಮ್ಮೆ ಜೇನುನೊಣಗಳಿಗೆ ಭಯ ಆದಾಗ, ಯಾರಾದರು ತೊಂದರೆ ಕೊಟ್ಟಾಗ ತುಂಬಾ ಆಕ್ರಮಣಕಾರಿಯಾಗುತ್ತವೆ. ಅವುಗಳಿಗೆ ಯಾವುದೇ ರೀತಿಯ ಅಪಾಯವನ್ನು ಉಂಟುಮಾಡದಿದ್ದರೆ, ಅವು ಉತ್ತಮ ಸ್ನೇಹಿತರಾಗಬಹುದು ಎಂಬುದನ್ನು ಈ ವೈರಲ್ ವಿಡಿಯೋದಿಂದ ಕಂಡುಕೊಳ್ಳಬಹುದಾಗಿದೆ. ಈ ವಿಡಿಯೋದಲ್ಲಿ ಜಾನಿ ಎಂಬಾತನ ಮೈತುಂಬಾ ನೂರಾರು ಜೇನುನೊಣಗಳು ಕುಳಿತುಕೊಂಡಿವೆ. ಆದರೂ ಆತ ನಿರ್ಭೀತನಾಗಿ ಮಾತನಾಡುತ್ತಿದ್ದಾನೆ.
ಜಾನಿ ಜೇನು ಸಾಕಾಣಿಕೆ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ. ಆತ ಈ ವಿಡಿಯೋದಲ್ಲಿ ಜೇನು ಸಾಕುವವರು ಜೇನುನೊಣಗಳೊಂದಿಗೆ ಹೇಗೆ ಉತ್ತಮ ಸಂಬಂಧ ನಿರ್ಮಿಸಿಕೊಳ್ಳಬೇಕು. ಅವುಗಳಿಗೆ ಹೇಗೆ ಹತ್ತಿರವಾಗಬೇಕು. ಹೇಗೆ ಪ್ರೀತಿಸಬೇಕು ಎಂಬುದನ್ನು ಹೇಳಿದ್ದಾನೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಜೇನುನೊಣಗಳು ಈ ವ್ಯಕ್ತಿಗೆ ಹೇಗೆ ಹಾನಿ ಮಾಡುತ್ತಿಲ್ಲ. ಇದು ಆಶ್ಚರ್ಯಕರವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
View this post on Instagram