ಮಹಿಳೆಯರ ಸಿಂಗಾರಕ್ಕೂ ಸರ್ಕಾರದ ತಕರಾರು – ಸಾವಿರಾರು ಬ್ಯೂಟಿ ಪಾರ್ಲರ್‌ಗಳಿಗೆ ಬೀಗಮುದ್ರೆ..!

ಮಹಿಳೆಯರ ಸಿಂಗಾರಕ್ಕೂ ಸರ್ಕಾರದ ತಕರಾರು – ಸಾವಿರಾರು ಬ್ಯೂಟಿ ಪಾರ್ಲರ್‌ಗಳಿಗೆ ಬೀಗಮುದ್ರೆ..!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಆಡಳಿತಕ್ಕೆ ಬಂದಿದ್ದೇ ಬಂದಿದ್ದು. ಅಲ್ಲಿನ ಹೆಣ್ಣುಮಕ್ಕಳ ಜೀವನ ಅಕ್ಷರಶಃ ನರಕವಾಗಿದೆ. ಒಂದಿಲ್ಲೊಂದು ಕಾನೂನುಗಳನ್ನ ಹೇರಿ ಮಹಿಳೆಯರು ಮನೆಯಿಂದ ಹೊರಗೆ ಹೆಜ್ಜೆ ಇಡದಂತೆ  ಮಾಡುತ್ತಿದೆ. ಇದೀಗ ಪ್ರತಿಭಟನೆ, ಗೋಳಾಟ, ಆಕ್ರೋಶದ ನಡುವೆಯೇ ಸಾವಿರಾರು ಬ್ಯೂಟಿ ಪಾರ್ಲರ್​ಗಳಿಗೆ ತಾಲಿಬಾನಿಗಳು ಕೊನೆಗೂ ಬೀಗಮುದ್ರೆ ಜಡಿದಿದ್ದಾರೆ.

ಇದನ್ನೂ ಓದಿ:  ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಪತ್ನಿ ಗರ್ಭಿಣಿ – ಭಾರತೀಯ ಸಂಪ್ರದಾಯದ ಪ್ರಕಾರ ಸೀಮಂತ ಸಂಭ್ರಮ

ಬ್ಯೂಟಿಪಾರ್ಲರ್​ಗಳು ಮುಚ್ಚಬೇಕು ಎನ್ನುವ ತಾಲಿಬಾನ್ ಸರ್ಕಾರದ ಆದೇಶ ಖಂಡಿಸಿ ಸಾವಿರಾರು ಮಹಿಳೆಯರು ಕಳೆದೊಂದು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಹೋರಾಟಕ್ಕೆ ಜಗ್ಗದ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾನಿರತರನ್ನ ಬೆದರಿಸಿದ್ದರು.  ಇದೀಗ ಬ್ಯೂಟಿ ಪಾರ್ಲರ್​ಗಳನ್ನ ಶಾಶ್ವತವಾಗಿ ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ.  ಮಹಿಳೆಯರ ಬ್ಯೂಟಿ ಸಲೂನ್‌ಗಳನ್ನು ಬಲವಂತವಾಗಿ ಮುಚ್ಚುವುದರಿಂದ ಮಹಿಳೆಯರ ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಿಶ್ವಸಂಸ್ಥೆ ಹೇಳಿದೆ. ಸೆಕ್ರೆಟರಿ ಜನರಲ್ ಫರ್ಹಾನ್ ಹಕ್ ಅವರ ಉಪ ವಕ್ತಾರರು ಬ್ಯೂಟಿ ಸಲೂನ್‌ಗಳನ್ನು ಮುಚ್ಚುವ ಆದೇಶವನ್ನು ನಿಲ್ಲಿಸುವಂತೆ ತಾಲಿಬಾನ್ ಅಧಿಕಾರಿಗಳನ್ನು ಕೇಳಿದ್ದಾರೆ. ಕೆಲವು ಕುಟುಂಬಗಳಲ್ಲಿ ಮಹಿಳೆಯರೇ ದುಡಿಯುತ್ತಿದ್ದಾರೆ, ಈ ಆದೇಶದಿಂದ ಅವರ ಕುಟುಂಬವು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗಬಹುದು ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ 12,000ಕ್ಕೂ ಹೆಚ್ಚು ಮಹಿಳಾ ಬ್ಯೂಟಿ ಸಲೂನ್‌ಗಳಿವೆ.

 

suddiyaana