ಸಚಿವ ಜಮೀರ್ ಮನೆಯಲ್ಲಿ ಕೋಟಿ ಮೌಲ್ಯದ ಚಿನ್ನ ಕದ್ದವರು ಲಾಕ್ – ಸಂಬಂಧಿಗಳಿಂದಲೇ ಸಚಿವರ ಮನೆಯಲ್ಲಿ ಕಳ್ಳತನ

ಸಚಿವ ಜಮೀರ್ ಮನೆಯಲ್ಲಿ ಕೋಟಿ ಮೌಲ್ಯದ ಚಿನ್ನ ಕದ್ದವರು ಲಾಕ್ –  ಸಂಬಂಧಿಗಳಿಂದಲೇ ಸಚಿವರ ಮನೆಯಲ್ಲಿ ಕಳ್ಳತನ

ಸಚಿವ ಜಮೀರ್​ ಅಹ್ಮದ್​ ಅವರ ಮನೆಯಲ್ಲಿ ಚಿನ್ನಾಭರಣ ಕಳ್ಳತನವಾಗಿದೆ. ಅದು ಕೂಡಾ ಕೋಟಿ ಮೌಲ್ಯದ ಚಿನ್ನ ಕಳ್ಳತನವಾಗಿದೆ. ಹೈಸೆಕ್ಯೂರಿಟಿ ಹಾಗೂ ಸಿಸಿಟಿವಿ ಕಣ್ಗಾವಲು ಇರೋ ಐಷಾರಾಮಿ ಮನೆಯಲ್ಲಿ ಕಳ್ಳತನವಾಗಿದ್ದು, ಪೊಲೀಸರ ಕೈಗೆ ಕಳ್ಳರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ:ಮದುವೆಯಾಗಲು ನಿರಾಕರಿಸಿದ 40 ವರ್ಷದ ಮಹಿಳೆಯನ್ನ ಕೊಂದು ರೈಲಿಗೆ ತಲೆ ಕೊಟ್ಟ ಪಾಗಲ್

ಸಚಿವ ಜಮೀರ್ ಅಹ್ಮದ್ ಅವರ ಮನೆಯಲ್ಲಿ  1 ಕೋಟಿ 13 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ನಡೆದಿತ್ತು. ಒಂದು ತಿಂಗಳ ಹಿಂದೆ ನಡೆದಿದ್ದ ಕಳ್ಳತನ ಕೇಸ್​​ಗೆ ಸಂಬಂಧಿಸಿದಂತೆ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಸೈಯದ್ ಅಮೀರ್ ಹಾಗೂ ಅಮೀರ್ ಅಹ್ಮದ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಬ್ಬರೂ ಸೇರಿ ಸಚಿವ ಜಮೀರ್ ಖಾನ್ ಮನೆಯಲ್ಲೇ 1 ಕೋಟಿ 13 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದರು ಎನ್ನಲಾಗ್ತಿದೆ. ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಆರೋಪಿಗಳು ಯಾರು ಅನ್ನೋ ಸತ್ಯ ಬಯಲಾಗಿದೆ.

ಸಚಿವ ಜಮೀರ್ ಖಾನ್ ಮನೆಯಲ್ಲಿ 1 ಕೋಟಿ ಮೌಲ್ಯದ ಚಿನ್ನ ಕದ್ದವರು ಬೇರೆ ಯಾರು ಅಲ್ಲ, ಜಮೀರ್ ಅಹ್ಮದ್ ಸಂಬಂಧಿಗಳೇ ಅನ್ನೋದು ಪೊಲೀಸ್ ತನಿಖೆಯಿಂದ ಬಯಲಾಗಿದೆ. ಜಮೀರ್ ಮನೆ ಬಗ್ಗೆ ಚೆನ್ನಾಗಿ ಗೊತ್ತಿದ್ದ ಈ ಕದೀಮರೇ ಕೃತ್ಯವೆಸಗಿದ್ದಾರೆ ಎಂದು ತಿಳಿದು ಬಂದಿದೆ. ಇಬ್ಬರನ್ನು ಬಂಧಿಸಿದ ತನಿಖೆ ಈ ಪ್ರಕರಣ ಸಂಬಂಧ ಶಿವಾಜಿನಗರ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಟ್ರಾವೆಲ್ಸ್ ಬ್ಯುಸಿನೆಸ್ ಅಲ್ಲಿ ಲಾಸ್ ಅಗಿದ್ದಕ್ಕೆ ಸೈಯದ್ ಅಮೀರ್ ಹಾಗೂ ಅಮೀರ್ ಅಹ್ಮದ್ ಮನೆ ಕಳ್ಳತನಕ್ಕೆ ಇಳಿದಿದ್ರು ಎನ್ನಲಾಗ್ತಿದೆ. ಫೈನಾನ್ಸ್ ಎಲ್ಲಿಯೂ ಸಿಗದೆ ಇದ್ದಿದ್ದಕ್ಕೆ ಮನೆಯಲ್ಲೇ ಕಳ್ಳತನ ಮಾಡಿದ್ದಾರೆ.  ಈ ಕಳ್ಳರು ಪ್ರತಿ ದಿನ ಜಮೀರ್ ಮನೆಗೆ ಬರುತ್ತಿದ್ದರು. ಈ ಇಬ್ಬರು ಆರೋಪಿಗಳು  ಒಳ್ಳೆಯವರಂತೆ ನಟಿಸಿ ಮನೆಗೆ ಕನ್ನ ಹಾಕಿದ್ದಾರೆ. ಸೈಯದ್ ಅಮೀರ್ ಜೊತೆಗೆ ಟ್ರಾವೆಲ್ಸ್ ನಲ್ಲಿ ಕೆಲಸ ಮಾಡ್ತಿದ್ದ ಅಮೀರ್ ಅಹ್ಮದ್ ಸೇರಿಕೊಂಡು ಜಮೀರ್​ ಮನೆಗೆ ಕನ್ನ ಹಾಕಿದ್ದಾರೆ. ಚಿನ್ನಾಭರಣ ಕಳ್ಳತನ ಮಾಡಿದ ಬಳಿಕ ಆರೋಪಿಗಳು ಆಭರಣ ಅಡವಿಟ್ಟು ಹಣ ಪಡೆದಿದ್ದಾರೆ. 1 ಕೋಟಿ 13 ಲಕ್ಷ ಮೌಲ್ಯದ ಚಿನ್ನಾಭರಣ ಮಾರಿ ಆ ಹಣವನ್ನ ರಿಯಲ್ ಎಸ್ಟೇಟ್​ನಲ್ಲಿ ಹೂಡಿಕೆ ಮಾಡಿ ಲಾಭ ಮಾಡಲು ಯತ್ನಿಸಿದ್ರು ಎನ್ನುವ ವಿಚಾರ ಬಯಲಾಗಿದೆ. ಪ್ರತಿ ದಿನ ಜಮೀರ್​ ಮನೆಗೆ ಬರುತ್ತಿದ್ದವನು ಕಳ್ಳತನವಾದ ನಂತರ ಬರೋದನ್ನೇ ನಿಲ್ಲಿಸಿದ್ದರು. ಸಿಬ್ಬಂದಿ ಕಾಲ್ ಮಾಡಿದ್ರು ರಿಸಿವ್ ಮಾಡುತ್ತಿರಲಿಲ್ಲವಂತೆ. ಆಗ ಈತನ ಮೇಲೆ ಅನುಮಾನ ಹೆಚ್ಚಿದೆ. ಯಾವಾಗ ಇವನ ಮೊಬೈಲ್ ಸ್ವಿಚ್ ಆಫ್ ಆಯ್ತೋ ಆಗಲೇ ಇತನನ್ನ ಪೊಲೀಸರು ಲಾಕ್ ಮಾಡಿದ್ದಾರೆ. ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು.

Sulekha