ಬೂಸ್ಟರ್ ಡೋಸ್ ಪಡೆದವರಿಗೆ ಮೂಗಿನ ಮೂಲಕ ಲಸಿಕೆ ಬೇಡ – ತಜ್ಞರ ಸಲಹೆ

ಬೂಸ್ಟರ್ ಡೋಸ್ ಪಡೆದವರಿಗೆ ಮೂಗಿನ ಮೂಲಕ ಲಸಿಕೆ ಬೇಡ – ತಜ್ಞರ ಸಲಹೆ

ಈಗಾಗ್ಲೇ ಬೂಸ್ಟರ್​ ಡೋಸ್ ಪಡೆದವರು ಭಾರತ್ ಬಯೋಟೆಕ್​ನ ನಸಾಲ್​ ವ್ಯಾಕ್ಸಿನ್​ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಕೊರೊನಾ ಟಾಸ್ಕ್​​ಫೋರ್ಸ್ ಮುಖ್ಯಸ್ಥ ಡಾಕ್ಟರ್ ಎನ್​.ಕೆ.ಅರೋರ ಹೇಳಿದ್ದಾರೆ. ನಸಾಲ್​​ ವ್ಯಾಕ್ಸಿನ್​ನನ್ನ ಬೂಸ್ಟರ್​ ಡೋಸ್ ಅಂತಾನೆ ಪರಿಗಣಿಸಲಾಗಿದೆ. ಹೀಗಾಗಿ ಈ ಹಿಂದೆಯೇ ಬೂಸ್ಟರ್ ಡೋಸ್ ಪಡೆದವರು ನಸಾಲ್ ವ್ಯಾಕ್ಸಿನ್ ಪಡೆಯಬೇಕಾಗಿಲ್ಲ ಅಂತಾ ಡಾಕ್ಟರ್ ಎನ್​.ಕೆ.ಅರೋರ ಹೇಳಿದ್ದಾರೆ. ಮುಂದಿನ ತಿಂಗಳಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಸಾಲ್ ವ್ಯಾಕ್ಸಿನ್ ಲಭ್ಯವಾಗಲಿದೆ.

ಇದನ್ನೂ ಓದಿ:  ಮೂಗಿನ ಮೂಲಕ ಹಾಕುವ ಲಸಿಕೆಗೆ ದರ ನಿಗದಿ – ಜನವರಿ ನಾಲ್ಕನೇ ವಾರದಿಂದ ಲಸಿಕೆ ಲಭ್ಯ

ಮೂಗಿನ ಮೂಲಕ ತೆಗೆದುಕೊಳ್ಳಬಹುದಾದ ಲಸಿಕೆಯನ್ನು ಕಳೆದ ವಾರ ಬಿಡುಗಡೆ ಮಾಡಲಾಗಿದೆ. ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಮೊದಲ ಬೂಸ್ಟರ್ ಡೋಸ್ ಆಗಿ ಶಿಫಾರಸು ಮಾಡಲಾಗಿದೆ. ಲಸಿಕಾಕರಣದ ಭಾಗವಾಗಿ ಕೋವಿನ್ ಪೋರ್ಟಲ್​ನಲ್ಲಿ ನಾಲ್ಕನೇ ಡೋಸ್ ಆಗಿ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಆಯ್ದುಕೊಳ್ಳಲು ಅವಕಾಶವಿಲ್ಲ. ಮತ್ತೊಂದು ಡೋಸ್ ಲಸಿಕೆ ಪಡೆಯುವುದರಿಂದ ದೇಹವು ಅದಕ್ಕೆ ಪೂರಕವಾಗಿ ಸ್ಪಂದಿಸುವುದಿಲ್ಲ. ಲಸಿಕೆಯ ಪರಿಣಾಮವೂ ಕಡಿಮೆಯಾಗುತ್ತದೆ. ಹೀಗಾಗಬಾರದು ಎಂಬ ಕಾರಣಕ್ಕೆ ಆರಂಭದಲ್ಲಿ ಎಂಆರ್​ಎನ್​ಎ ಲಸಿಕೆಯನ್ನು ಆರು ತಿಂಗಳ ಅವಧಿಯ ನಂತರ ನೀಡಲಾಗುತ್ತದೆ. ಆದರೂ ಅದು ನಿರೀಕ್ಷೆಗಿಂತಲೂ ಹೆಚ್ಚಿನ ಪರಿಣಾಮ ಬೀರಿಲ್ಲ. ಹೀಗಾಗಿ ಸದ್ಯಕ್ಕೆ ನಾಲ್ಕನೇ ಡೋಸ್ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಕೊರೊನಾ ಟಾಸ್ಕ್​​ಫೋರ್ಸ್ ಮುಖ್ಯಸ್ಥ ಡಾಕ್ಟರ್ ಎನ್​.ಕೆ.ಅರೋರ ಮಾಹಿತಿ ನೀಡಿದ್ದಾರೆ. ಇನ್ನು ಮೂಗಿನ ಮೂಲಕ ನೀಡುವ ಕೋವಿಡ್ ಲಸಿಕೆ ಪರಿಣಾಮಕಾರಿ ಎಂದು ಅರೋರ ತಿಳಿಸಿದ್ದಾರೆ. ಈ ಲಸಿಕೆಯು ನೇರವಾಗಿ ಉಸಿರಾಟ ವ್ಯವಸ್ಥೆಯ ಪ್ರವೇಶ ಬಿಂದುವನ್ನೇ ತಲುಪಿರುತ್ತದೆ. ಮೂಗು ಮತ್ತು ಬಾಯಿಯಲ್ಲಿ ನಿರೋಧಕ ಶಕ್ತಿ ಉಂಟಾಗುವುದರಿಂದ ವೈರಸ್ ಸುಲಭವಾಗಿ ದೇಹ ಪ್ರವೇಶಿಸಲಾಗದು. ಈ ಲಸಿಕೆಯು ಕೋವಿಡ್ ವಿರುದ್ಧ ಮಾತ್ರ ಹೋರಾಡುವುದಿಲ್ಲ. ಉಸಿರಾಟ ವ್ಯವಸ್ಥೆ ಮೇಲೆ ದಾಳಿ ನಡೆಸುವ ಇತರ ವೈರಸ್​ಗಳಿಂದಲೂ ರಕ್ಷಣೆ ನೀಡುತ್ತದೆ ಎಂದು ಅವರು ಹೇಳಿದ್ದಾರೆ.

suddiyaana