ವಿಮಾನ ಹತ್ತಲ್ಲ.. ಹೋಟೆಲ್‌ ಬುಕ್‌ ಮಾಡಲ್ಲ.. ಫ್ರೀಯಾಗಿ ಜಗತ್ತು ಸುತ್ತುತ್ತಾಳೆ ಈ ಯುವತಿ!

ವಿಮಾನ ಹತ್ತಲ್ಲ.. ಹೋಟೆಲ್‌ ಬುಕ್‌ ಮಾಡಲ್ಲ.. ಫ್ರೀಯಾಗಿ ಜಗತ್ತು ಸುತ್ತುತ್ತಾಳೆ ಈ ಯುವತಿ!

ಪ್ರವಾಸಕ್ಕೆ ಹೋಗುವುದೆಂದರೆ ಅನೇಕರಿಗೆ ಬಹಳ ಇಷ್ಟ. ಹೀಗಾಗಿ ರಜಾ ಅವಧಿಗಳಲ್ಲಿ ತಮ್ಮ ಬಜೆಟ್‌ಗೆ ತಕ್ಕಂತೆ ಪ್ಲಾನ್‌ ಮಾಡಿಕೊಂಡು ಟ್ರಿಪ್‌ ಹೋಗುತ್ತಾರೆ. ಇನ್ನೂ ಅನೇಕರು ವಲ್ಡ್‌ ಟೂರ್‌ ಹೋಗಬೇಕು ಅಂತಾ ಕನಸು ಕಾಣುತ್ತಾರೆ. ಆದರೆ ಏನು ಮಾಡುವುದು. ಕನಸಿಗೆ ತಕ್ಕಂತೆ ಕೈಯಲ್ಲಿ ಕಾಸು ಇರಬೇಕೆ? ಹೀಗಾಗಿಯೇ ಅನೇಕರ ಕನಸು, ಕನಸಾಗಿಯೇ ಉಳಿಸಿದೆ. ಆದರೆ ಇಲ್ಲೊಬ್ಬಳು ಕೈಯಲ್ಲಿ ಕೆಲಸ ಇಲ್ಲದೇ ಇದ್ರೂ, ಇಡೀ ಜಗತ್ತನ್ನೇ ಸುತ್ತುತ್ತಿದ್ದಾಳೆ!

ಎಲ್ಲಿ ಹೋಗಬೇಕಾದರೂ ಕೈಯಲ್ಲಿ ಒಂದಿಷ್ಟು ಕಾಸು ಇರಬೇಕು. ಕಾಸು ಇಲ್ಲ ಅಂದ್ರೆ ಜೀವನ ನಡೆಸೋಕೆ ಸಾಧ್ಯ ಇಲ್ಲ. ಆದರೆ ಲಂಡನ್‌ ನಿವಾಸಿ ಮೆಲ್ಲಿ ಮೈಯರ್ಸ್ ಎಂಬಾಕೆ ಎಲ್ಲಾ ಕಡೆಗೆ ತೆರಳುವಾಗಲೂ ಉಚಿತವಾಗಿ ಪ್ರಯಾಣಿಸುತ್ತಿದ್ದಾಳೆ. ಆಕೆ ತನ್ನ ಹೆಚ್ಚಿನ ಸಮಯವನ್ನು ಪ್ರಯಾಣಿಸಲು ಮತ್ತು ಜಗತ್ತನ್ನು ನೋಡುವುದರಲ್ಲಿ ಕಳೆಯುತ್ತಿದ್ದಾಳೆ. ಇಂಟ್ರೆಸ್ಟಿಂಗ್ ವಿಚಾರವೆಂದರೆ ಈಕೆ ಈ ಸ್ಥಳಗಳನ್ನು ನೋಡಲು ವಿಮಾನದಲ್ಲಿ ಹೋಗುವುದಾಗಲಿ ಅಥವಾ ಹೋಟೆಲ್ ಬುಕಿಂಗ್‌ ಮಾಡುವುದಾಗಲಿ ಮಾಡುವುದಿಲ್ಲ. ಹೀಗಿರುವಾಗ ಈಕೆಯ ಪ್ರವಾಸದ ಖರ್ಚು ಯಾರು ಭರಿಸುತ್ತಾರೆ ಎಂಬ ಪ್ರಶ್ನೆ ಮೂಡುತ್ತದೆ.

ಇದನ್ನೂ ಓದಿ: ಮಗಳಿಗೆ ಇಡೀ ಜಗತ್ತು ತೋರಿಸಬೇಕೆಂದು ಹೆತ್ತವರ ಪ್ರವಾಸ – ಶಾಲೆಗೆ ರಜೆ ಹಾಕದೆಯೇ 10ನೇ ವಯಸ್ಸಿಗೆ 50 ದೇಶಗಳನ್ನ ಸುತ್ತಿದ ಬಾಲಕಿ

ಮಾಹಿತಿಗಳ ಪ್ರಕಾರ, ಕೆಲವು ಸಮಯದ ಹಿಂದೆ ಮೆಲ್ಲಿ ಮೈಯರ್ಸ್ ಹಿಲ್ಸನ್ ಹೋಟೆಲ್​​​ನಲ್ಲಿ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಳು. ಆದರೆ ಕೋವಿಡ್ ಪರಿಣಾಮ ಹೋಟೆಲ್ 2 ವರ್ಷಗಳಿಂದ ಸಾಕಷ್ಟು ಸಂಕಷ್ಟ ಅನುಭವಿಸಿತು. ಇತರರಂತೆ ಮೆಲ್ಲಿ ಕೂಡ ತನ್ನ ಕೆಲಸ ಕಳೆದುಕೊಂಡಳು. ಇಂತಹ ಸಮಯದಲ್ಲಿ ಮೆಲ್ಲಿ ನೋಡಿದ ಅಕೆಯ ಸ್ನೇಹಿತರು ಸೋಶಿಯಲ್ ಮೀಡಿಯಾದ ಬಗ್ಗೆ ಸಲಹೆ ನೀಡಿದರು. ಕೊನೆಗೆ ಮೆಲ್ಲಿ ಸೋಶಿಯಲ್ ಮೀಡಿಯಾಗೆ ಎಂಟ್ರಿ ಕೊಟ್ಟಳು.

​ಮೆಲ್ಲಿ ತನ್ನ ಬಿಡುವಿನ ವೇಳೆಯನ್ನು ಉಪಯೋಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾದಳು. ಆಗ ಆಕೆಗೆ ಫಾಲೋವರ್ಸ್‌ ಹೆಚ್ಚಾಗತೊಡಗಿದರು. Instagram ನಲ್ಲಿ ಮೆಲ್ಲಿ ಸುಮಾರು 66,000 ಅನುಯಾಯಿಗಳನ್ನು ಹೊಂದಿದ್ದಾಳೆ. ಅಷ್ಟೇ ಅಲ್ಲ, ಅತ್ಯುತ್ತಮ ಕಂಟೆಂಟ್ ಕ್ರಿಯೇಟರ್ 2022 ವಿಜೇತರಾಗಿ, ಉಚಿತ ಕ್ರೂಸ್ ಪ್ರಯಾಣ ಪಡೆದಿದ್ದಾಳೆ. ಸೋಶಿಯಲ್ ಮೀಡಿಯಾ ಸ್ಟಾರ್ ಆಗಿರುವ ಮೆಲ್ಲಿ ಈಗ ಟ್ರೆಂಡಿಂಗ್ ಟ್ರಾವೆಲ್ ಮತ್ತು ಟೂರ್ ಆಪರೇಟರ್‌ಗಳ ಸಹಕಾರದೊಂದಿಗೆ ಪ್ರವಾಸ ಮಾಡುತ್ತಿದ್ದಾಳೆ. ಇತ್ತೀಚೆಗೆ ಬಾರ್ಸಿಲೋನಾ ಮತ್ತು ಐಬಿಜಾದಂತಹ ಸ್ಥಳಗಳಲ್ಲಿ 7-ದಿನದ ಮೆಡಿಟರೇನಿಯನ್ ಕ್ರೂಸ್​​ನಲ್ಲಿ ಅವರನ್ನು ಕರೆದೊಯ್ಯಲಾಯಿತು.

ವರ್ಜಿನ್ ವೊಯೇಜನ್ ಪ್ರವಾಸದಲ್ಲಿ ಕಾಂಪ್ಲಿಮೆಂಟರಿ ಪ್ರಯಾಣದ ಪ್ರಸ್ತಾಪದ ಬಗ್ಗೆ ಮೆಲ್ಲಿಗೆ ಕೇಳಿದಾಗ, “ನಾನು ತುಂಬಾ ಸಂತೋಷಪಟ್ಟೆ, ಪ್ರಯಾಣವು ಅದ್ಭುತವಾಗಿದೆ, ಹಾಗಾಗಿ ಟ್ರೆಂಡಿಂಗ್ ಟ್ರಾವೆಲ್‌ ಜೊತೆಗೆ ಕಂಟೆಂಟ್ ರಚನೆಕಾರರಾಗಿ ಕೆಲಸ ಮಾಡಲು ನನಗೆ ಸಂತೋಷವಾಗಿದೆ. ವಿಶ್ವ ಪರ್ಯಟನೆ ಆರಂಭಿಸಿದಾಗಿನಿಂದ ಕಳೆದ 2 ವರ್ಷಗಳಲ್ಲಿ 52.38 ಲಕ್ಷ ರೂಪಾಯಿ ಉಳಿತಾಯವಾಗಿದೆ” ಎನ್ನುತ್ತಾರೆ ಮೆಲ್ಲಿ.

suddiyaana