ಭುವಿಗೆ ಬಾಗಿಲು ಮುಚ್ಚಿದ BCCI – ಬುಮ್ರಾಗೆ ಬ್ಯಾಕಪ್ ಬೇಕಿಲ್ವಾ?
ವಿಶ್ವಕಪ್ ಬೌಲಿಂಗ್ ಬ್ಯಾಲೆನ್ಸ್ ಮಿಸ್!

ಐಪಿಎಲ್ನಲ್ಲಿ ಆರ್ಸಿಬಿ ಬ್ಯಾಕ್ ಟು ಬ್ಯಾಕ್ ಟೈಟಲ್ ವಿನ್ ಆದ್ರೂ ತಂಡದ ಆಟಗಾರರಿಗೆ ಮಾತ್ರ ಟೀಂ ಇಂಡಿಯಾದಲ್ಲಿ ಅವಕಾಶಗಳು ಸಿಗ್ತಿಲ್ಲ. ದೇವದತ್ ಪಡಿಕ್ಕಲ್ ಲಂಕಾ ವಿರುದ್ಧ ಟೆಸ್ಟ್ ತಂಡದಲ್ಲಿ ಆಡಿದ್ರೂ ಕೂಡ ವೈಟ್ ಬಾಲ್ ಫಾರ್ಮೆಟ್ನಲ್ಲಿ ವಿರಾಟ್ ಕೊಹ್ಲಿಯವ್ರನ್ನ ಬಿಟ್ರೆ ಬೇರೆ ಯಾರನ್ನೂ ಪಿಕ್ ಮಾಡಿಲ್ಲ. ರಜತ್ ಪಾಟಿದಾರ್, ಭುವನೇಶ್ವರ್ ಕುಮಾರ್, ಕೃನಾಲ್ ಪಾಂಡ್ಯ ಹೀಗೆ ಸಾಕಷ್ಟು ಪ್ಲೇಯರ್ಸ್ ಭಾರತದ ಪರ ಆಡೋಕೆ ಸಮರ್ಥರಿದ್ರೂ ಚಾನ್ಸ್ ಕೊಡ್ತಿಲ್ಲ. ಈ ಬಗ್ಗೆ ಭುವನೇಶ್ವರ್ ಕುಮಾರ್ ಮಾತನಾಡಿದ್ದಾರೆ.
ಇದನ್ನೂ ಓದಿ : ಯೋಗ.. ಧ್ಯಾನ.. ಹಾಲೆಂಡ್ ಕಾಪಿ – ಅಭಿಷೇಕ್ ಸೆಲೆಬ್ರೇಷನ್ ಸುನಾಮಿ
2027ರ ಏಕದಿನ ವಿಶ್ವಕಪ್‌ಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಬಟ್ ಈಗಿನಿಂದಲೇ ಟೀಂ ಫಾರ್ಮ್ ಆಗ್ಬೇಕು. ಇದಕ್ಕಾಗಿಯೇ ಬಿಸಿಸಿಐ ಆಟಗಾರರ ಆಯ್ಕೆಯಲ್ಲೂ ಸಾಕಷ್ಟು ಎಕ್ಸ್ಪೆರಿಮೆಂಟ್ಸ್ ಮಾಡ್ತಿದೆ. ಆದ್ರೆ ತಂಡದ ಆಯ್ಕೆಯಲ್ಲಿ ಜಸ್ಪ್ರೀತ್ ಬುಮ್ರಾ ಅವ್ರ ಇಂಜುರಿ ಸಮಸ್ಯೆಗಳನ್ನ ನೋಡಿದಾಗ ಭುವಿಯನ್ನ ತಂಡಕ್ಕೆ ಕರೆತರೋ ಅವಶ್ಯಕತೆ ಇದೆ. ಟೀಂ ಇಂಡಿಯಾದ ಲಿಸ್ಟ್ನಲ್ಲಿ ಮೊಹಮ್ಮದ್ ಶಮಿ ಕೂಡ ಇಲ್ಲದೇ ಇರೋದ್ರಿಂದ ಭುವಿ ಅವ್ರ ಅನುಭವವನ್ನ ಬಳಸಿಕೊಳ್ಬೋದಿತ್ತು. ಆದ್ರೆ ಬಿಸಿಸಿಐ ವಿಂಡೀಸ್ ವಿರುದ್ಧದ ಸರಣಿಗೂ ಆಯ್ಕೆ ಮಾಡಿಲ್ಲ.
ಭಾರತದ ಪರ ಆಡಲು ಖುಷಿ.. ಆದ್ರೆ ಸಮಯ ಮೀರಿದೆ ಎಂದ ಭುವಿ!
ಭುವನೇಶ್ವರ್ ಕುಮಾರ್ ಟೀಂ ಇಂಡಿಯಾ ಕಂ ಬ್ಯಾಕ್ ಬಗ್ಗೆ ಸಾಕಷ್ಟು ಮಾಜಿ ಸ್ಟಾರ್ಸ್ ಬೆನ್ನಿಗೆ ನಿಂತಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭುವನೇಶ್ವರ್ ಭಾರತ ತಂಡಕ್ಕೆ ಮರಳಬೇಕು. ಹಾಗೇ 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಆಡಬೇಕು ಅಂತಾ ಸಪೋರ್ಟ್ ಮಾಡಿದ್ರು. ಆದ್ರೆ ಬಿಸಿಸಿಐನ ಲೆಕ್ಕಾಚಾರವೇ ಬೇರೆ ಇದೆ. ಇದನ್ನ ಮನಗಂಡಿರೋ ಭುವಿ ತಮ್ಮ ಕಂ ಬ್ಯಾಕ್ ಕಷ್ಟ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ಇತ್ತೀಚೆಗೆ ಜತಿನ್ ಸಪ್ರು ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರೋ ಭುವಿ ಹಲವು ವಿಚಾರಗಳನ್ನ ಶೇರ್ ಮಾಡಿದ್ದಾರೆ. ನಾನೀನ ಏನನ್ನೂ ಪ್ರೂ ಮಾಡೋಕೆ ಆಡ್ತಾ ಇಲ್ಲ. ಆದ್ರೆ ಭಾರತ ಪರ ಮತ್ತೆ ಆಡಲು ನನಗೆ ಸಂತೋಷವಾಗುತ್ತದೆ. ಮುಂದಿನ ಸರಣಿಯಲ್ಲಿ ಅವಕಾಶ ಸಿಗ್ಬೋದು ಅಂತಾ ಕಾಯ್ತಾ ಇದ್ದೆ. ಆದ್ರೆ ನಾನು ಈಗಾಗ್ಲೇ ಸಮಯವನ್ನ ದಾಟಿದ್ದೇನೆ ಎನ್ನುವುದು ಅರ್ಥವಾಗಿದೆ ಎಂದಿದ್ದಾರೆ. ಕೆಲ ಸರಣಿಗಳಿಗೆ ಆಯ್ಕೆಯಾಗುತ್ತೀರಿ ಎಂದು ಕರೆಗಳು ಬಂದಿದ್ವು. ಬಹುಶಃ ಮುಂದಿನ ಎರಡು ಸರಣಿಗಳಲ್ಲಿ ಕಾಲ್ ಬರುತ್ತೆ ಎಂದುಕೊಂಡಿದ್ದೆ. ಆದ್ರೆ ನನ್ನ ಊಹೆ ತಪ್ಪಾಗಿದೆ ಅನ್ನೋದು ಗೊತ್ತಾಯ್ತು. ಹೀಗಾಗಿ ನನ್ನನ್ನು ನಾನು ಸಮಾಧಾನ ಮಾಡಿಕೊಂಡೆ ಎಂದಿದ್ದಾರೆ.
2022ರಿಂದ ಭಾರತದ ಪರ ಆಡದ ಭುವನೇಶ್ವರ್!
ಇನ್ನು ಭುವನೇಶ್ವರ್ ಕುಮಾರ್ ಕೊನೇ ಬಾರಿಗೆ 2022ರ ನವೆಂಬರ್ನಲ್ಲಿ ಆಡಿದ್ದು ಬಿಟ್ರೆ ಆ ನಂತ್ರ ಮತ್ತೆ ಭಾರತದ ಪರ ಆಡಿಲ್ಲ. ಹೀಗಾಗಿ ಅವ್ರ ಕಂ ಬ್ಯಾಕ್ ಪ್ರಶ್ನೆಯಾಗಿಯೇ ಇದೆ. ಇನ್ನು ಭಾರತದ ಪರ ಎಲ್ಲಾ ಮಾದರಿಗಳಲ್ಲಿ 229 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ, 29.50 ರ ಸರಾಸರಿಯಲ್ಲಿ 294 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇನ್ನು ಏಕದಿನ ವಿಶ್ವಕಪ್ ಅಂತಾ ನೋಡಿದ್ರೆ 2027 ರ ಏಕದಿನ ವಿಶ್ವಕಪ್‌ಗೆ ಭುವನೇಶ್ವರ್ ಅವರನ್ನು ಆಯ್ಕೆ ಮಾಡಿದರೆ, ಅದು ಅವರ 3 ನೇ ಆವೃತ್ತಿಯಾಗಲಿದೆ. ಅವರು 2015 ಮತ್ತು 2019 ರಲ್ಲಿ ಆಡಿದ ತಂಡದ ಭಾಗವಾಗಿದ್ದರು ಮತ್ತು ಎರಡೂ ಸಂದರ್ಭಗಳಲ್ಲಿ ಭಾರತ ಸೆಮಿಫೈನಲ್‌ಗೆ ತಲುಪಿತು. ಆದ್ರೆ 2027ರ ತಂಡದಲ್ಲಿ ಆಡಲು ಎಲ್ಲಾ ಸಾಮರ್ಥ್ಯ ಇದ್ರೂ ಬಿಸಿಸಿಐ ಭುವಿಗೆ ಪ್ರಿಯಾರಿಟಿ ನೀಡ್ತಿಲ್ಲ.

ನೋಡಿರಿ

