ನಾಯಿ ಮರಿ, ಆಮೆಯ ಫುಟ್ಬಾಲ್ – ಗೋಲ್ ಹೊಡೆದಿದ್ದು ಯಾರು?

ಕೆಲವೊಂದು ಸಾಕು ಪ್ರಾಣಿಗಳ ಆಟ, ತುಂಟಾಟ ನೋಡುವುದೇ ಚಂದ. ಪ್ರಾಣಿಗಳು ತಾವು ಇತರ ಪ್ರಭೇದದ ಪ್ರಾಣಿಗಳೊಂದಿಗೆ ಆಟವಾಡುವುದಕ್ಕಿಂತ ಜಗಳವಾಡುವುದೇ ಹೆಚ್ಚು. ಕೆಲವು ಪ್ರಾಣಿಗಳು ಮಾತ್ರ ಇತರ ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ಪೋಷಿಸುತ್ತವೆ. ಅವುಗಳೊಂದಿಗೆ ಆಟವಾಡುತ್ತವೆ. ಇದಕ್ಕೆ ಉದಾಹರಣೆಯೆಂಬಂತೆ ಇಲ್ಲೊಂದು ನಾಯಿ ಮರಿ ಆಮೆಯೊಂದಿಗೆ ಸೇರಿಕೊಂಡು ಫುಟ್ಬಾಲ್ ಆಟವಾಡುತ್ತಿದೆ. ಈ ನಾಯಿ ಮತ್ತು ಆಮೆ ಆಟವಾಡುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ವ್ಯಕ್ತಿ ಮುಂದೆ ಇದ್ದಕ್ಕಿಂದ್ದಂತೆ ಕರಡಿ ಪ್ರತ್ಯಕ್ಷ! – ಆಮೇಲೆ ಏನಾಯ್ತು ಗೊತ್ತಾ?
ವೈರಲ್ ಆದ ವಿಡಿಯೋದಲ್ಲಿ ಆಮೆ ಹಾಗೂ ನಾಯಿ ಮರಿ ಇರುತ್ತದೆ. ಪಕ್ಕದಲ್ಲೆ ಚೆಂಡೊಂದು ಇರುತ್ತದೆ. ಅದನ್ನು ನಾಯಿ ಕಾಲಿನಿಂದ ದೂಡುತ್ತದೆ. ಇದನ್ನು ಕಂಡ ಆಮೆ ಬೇಗ ಓಡಿಹೋಗಿ ತನ್ನ ತಲೆಯ ಸಹಾಯದಿಂದ ಫುಟ್ಬಾಲ್ನ್ನು ತಳ್ಳುತ್ತದೆ. ಇದನ್ನು ಕಂಡು ನಾಯಿ ಮರಿಯೂ ಕೂಡ ಸಂತೋಷದಿಂದ ಜಿಗಿಯುತ್ತಾ ಚೆಂಡಿನೊಂಡಿಗೆ ಆಟವಾಡಲು ಪ್ರಾರಂಭಿಸುತ್ತದೆ. ನಾಯಿ ಮರಿ ಒಮ್ಮೆ ಚೆಂಡನ್ನು ತಳ್ಳುತ್ತಾ, ಇನ್ನೊಮ್ಮೆ ಆಮೆಯ ಹಿಂದೆ ಮುಂದೆ ಕುಣಿದಾಡುತ್ತಾ ಆಟವಾಡುತ್ತದೆ.
ಈ ವಿಡಿಯೋವನ್ನು ಗೇಬ್ರಿಯೆಲ್ ಕಾರ್ನೋ ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಮುದ್ದಾದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈವರೆಗೆ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಯನ್ನು ಪಡೆದುಕೊಂಡಿದೆ. ಅನೇಕರು ಈ ಮುದ್ದಾದ ವಿಡಿಯೋಗೆ ಮನಸೋತು ಕಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾದರು ಅತೀ ವೇಗದ ಆಮೆ ಎಂದು ಕಮೆಂಟ್ ಮಾಡಿದ್ರೆ, ಇನ್ನೊಬ್ಬ ಬಳಕೆದಾರರು ಈ ಸುಂದರವಾದ ವಿಡಿಯೋ ನನ್ನ ದಿನವನ್ನು ಸಂಪೂರ್ಣಗೊಳಿಸಿದೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಅನೇಕರು ಈ ವಿಡಿಯೋ ತುಂಬಾ ಮುದ್ದಾಗಿದೆ ಎಂದು ತಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿದ್ದಾರೆ.
Watch Dachshund and Speedy Tortoise Playing Football Together
Rudy Janssens pic.twitter.com/daaMdBuGhL
— Gabriele Corno (@Gabriele_Corno) April 26, 2023