ಸತ್ತ ಪ್ರೇಯಸಿಯ ಮೃತದೇಹದೊಂದಿಗೆ 7 ವರ್ಷ ಜೀವನ – ಡಾ.ಡೆತ್ ರಹಸ್ಯ ಬಯಲಾಗಿದ್ದು ಹೇಗೆ?
ಪ್ರೀತಿ ಅನ್ನೋದೇ ಹಾಗೆ. ಪವಿತ್ರ ಪ್ರೀತಿಯೂ ಇದೆ. ಹುಚ್ಚು ಪ್ರೇಮವೂ ಇದೆ. ಆದರೆ, ಇಲ್ಲೊಂದು ಪ್ರೇಮಕಥೆಯನ್ನು ಯಾವ ರೀತಿ ಹೇಳುವುದು ಸ್ವಲ್ಪ ಕಷ್ಟವೇ. ಯಾಕೆಂದರೆ ಇಲ್ಲಿ ಪ್ರೀತಿ ಹುಟ್ಟಿದ್ದು ಸಮಾಧಿಯೊಳಗಿರುವ ಹೆಣದ ಮೇಲೆ. ಸಮಾಧಿಯಿಂದ ಹೊರತೆಗೆದ ಹೆಣದ ಮೇಲೆ ಹುಚ್ಚು ಪ್ರೀತಿಯಿಟ್ಟಿರುವುದು ಕೂಡಾ ಒಬ್ಬ ವೈದ್ಯ ಅನ್ನೋದನ್ನೂ ಕೂಡಾ ನಂಬಲೇಬೇಕು. ಈ ವಿಚಿತ್ರ ಪ್ರೀತಿಗೆ ಜನ ನಾನಾ ರೀತಿಯಲ್ಲಿ ಕರೆಯುತ್ತಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಕೊರೊನಾ ತಾಂಡವ – 5 ತಿಂಗಳಲ್ಲೇ ಮೊದಲ ಬಾರಿಗೆ 4 ಸಾವಿರ ಗಡಿ ದಾಟಿದ ಪಾಸಿಟಿವ್ ಕೇಸ್
ಯುಎಸ್ಎಯ ಫ್ಲೋರಿಡಾದ ಕಾರ್ಲ್ ಟಾಂಜ್ಲರ್ ಎಂಬ ವ್ಯಕ್ತಿಯೇ ಈ ವಿಚಿತ್ರ ಪ್ರೇಮಿ. ಈತ ವೃತ್ತಿಯಲ್ಲಿ ಡಾಕ್ಟರ್. ಈತನನ್ನು ಡಾ.ಡೆತ್ ಎಂದು ಕೂಡಾ ಕರೆಯುತ್ತಾರೆ. ಈತನ ಕಥೆ ಕೇಳಿದ್ರೆ ಎಲ್ಲರಿಗೂ ವಿಚಿತ್ರ ಅನ್ನಿಸದೇ ಇರುವುದಿಲ್ಲ. ಈತ ಸಮಾಧಿಯಿಂದ ಹೊರತೆಗೆದ ಹೆಣವನ್ನೇ ಪ್ರೀತಿಸಿದ್ದ. ಅಷ್ಟೇ ಅಲ್ಲ ಬರೋಬ್ಬರಿ 7 ವರ್ಷಗಳ ಕಾಲ ಅದರ ಜೊತೆಯಲ್ಲೇ ವಾಸಿಸಿದ್ದ.
ಸತ್ತ ಮಹಿಳೆಯ ಹೆಸರು ಮರಿಯಾ ಎಲ್ಲಾ ಮಿಲಾಗೋ ಡಿ ಹೊಯೊಸ್. 21 ವರ್ಷದ ಆಕೆ ಚಿಕಿತ್ಸೆಗೆಂದು ಕೀ ವೆಸ್ಟ್ ಫ್ಲೋರಿಡಾದ ಆಸ್ಪತ್ರೆಗೆ ಬಂದಿದ್ದಾಗ, ಡಾ.ಟಾಂಜರ್‌ಗೆ ಆಕೆಯನ್ನ ನೋಡಿದ ಮೊದಲ ನೋಟದಲ್ಲೇ ಪ್ರೇಮವಾಗಿತ್ತು. ಆದರೆ ಕೆಲ ದಿನಗಳ ನಂತರ ಆಕೆ ಸಾವನ್ನಪ್ಪಿದ್ದಳು. ಆಕೆಯ ಕುಟುಂಬದವರು ಆಕೆಯ ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಡಾಕ್ಟರ್‌ಗೆ ಮಾತ್ರ ಆಕೆ ಬಗ್ಗೆ ಇದ್ದ ಪ್ರೀತಿ ಕಡಿಮೆ ಆಗಿರಲಿಲ್ಲ. ಕೊನೆಗೂ ಸಮಾಧಿಯಿಂದ ತನ್ನ ಪ್ರೇಯಸಿಯ ಹೆಣವನ್ನು ಕದ್ದು ಹೊರತಂದಿದ್ದ. ನಂತರ ಏನೇನೋ ಪ್ರಯೋಗ ಮಾಡಿ ಯುವತಿಯನ್ನು ಬದುಕಿಸಲು ಯತ್ನಿಸಿದ್ದ.
ಡಾ ಟಾಂಜ್ಲರ್ ಯುವತಿಯ ಮೃತದೇಹವನ್ನು ಸಂರಕ್ಷಿಸಿ, ಆಕೆಯ ಕಣ್ಣುಗಳನ್ನು ಗಾಜಿನಿಂದ ಮತ್ತು ಅವಳ ಮುಖವನ್ನು ಮುಖವಾಡದಿಂದ ಬದಲಾಯಿಸಿದ್ದ. ಯುವತಿಯನ್ನು ಆತ ತನ್ನ ವಧುವೆಂದು ಪರಿಗಣಿಸಿದ್ದ. ಅಷ್ಟೇ ಅಲ್ಲ, ಸತ್ತ ಯುವತಿಯ ಜೊತೆ ದೈಹಿಕ ಸಂಬಂಧವನ್ನೂ ಹೊಂದಿದ್ದ. ಈ ವಿಚಾರ ಹೇಗೋ ಸತ್ತ ಯುವತಿಯ ಕುಟುಂಬಕ್ಕೆ ತಿಳಿದಾಗ, ಅವರು ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ಅಲ್ಲಿಯವರೆಗೂ ಡಾ.ಡೆತ್ ಮೃತದೇಹದೊಂದಿಗೆ ಬದುಕುತ್ತಿದ್ದ. ಕೊನೆಗೂ ತನ್ನ ಪ್ರೇಯಸಿಯನ್ನು ಬದುಕಿಸುವಲ್ಲಿ ಸೋತ ಡಾ.ಡೆತ್ ಪೊಲೀಸರ ವಶದಲ್ಲಿದ್ದಾನೆ.