ಯಾವ ಅಪರಾಧಕ್ಕೆ ಮರವನ್ನು ಬಂಧಿಸಿದ್ರು ಗೊತ್ತಾ? – ಪಾಕಿಸ್ತಾನದಲ್ಲಿ‌ ಇಂತಹ‌ ಶಿಕ್ಷೆ ಕೊಟ್ಟಿದ್ದು ಯಾರು?

ಯಾವ ಅಪರಾಧಕ್ಕೆ ಮರವನ್ನು ಬಂಧಿಸಿದ್ರು ಗೊತ್ತಾ? – ಪಾಕಿಸ್ತಾನದಲ್ಲಿ‌ ಇಂತಹ‌ ಶಿಕ್ಷೆ ಕೊಟ್ಟಿದ್ದು ಯಾರು?

ಯಾರಾದ್ರೂ ತಪ್ಪು ಮಾಡಿದ್ರೆ ಅವರನ್ನ ಅರೆಸ್ಟ್ ಮಾಡೋದನ್ನ ನೋಡಿರ್ತೀರಿ.. ಕೇಳಿರ್ತೀರಿ.. ಇನ್ನೂ ಪ್ರಾಣಿ, ಪಕ್ಷಿಗಳು ತಪ್ಪು ಮಾಡಿದ್ರೂ ಬೋನಿನಲ್ಲಿ ಕೂಡಿ ಹಾಕ್ತಾರೆ.. ಆದ್ರೆ ಇಲ್ಲೊಂದು ಕಡೆ ಮರವೊಂದನ್ನ ಅರೆಸ್ಟ್ ಮಾಡಲಾಗಿದೆ.. ಇದು.. ನಿನ್ನೆ.. ಮೊನ್ನೆಯಲ್ಲ.. ಬತೋಬ್ಬರಿ 125 ವರ್ಷಗಳ ಹಿಂದೆ! ಅಷ್ಟಕ್ಕೂ ಆ ಮರವನ್ನ ಯಾಕೆ ಅರೆಸ್ಟ್ ಮಾಡಲಾಗಿದೆ? ಆ ಮರ ಮಾಡಿರೋ ತಪ್ಪಾದ್ರೂ ಏನು ಅನ್ನೋ ಬಗ್ಗೆ ಮಾಹಿತಿ ಇಲ್ಲಿದೆ..

ಇದನ್ನೂ ಓದಿ: ಹಾವಿಗೆ ನಿಜಕ್ಕೂ 12 ವರ್ಷ ದ್ವೇಷವಿರುತ್ತಾ? – ಕಾಮಕೇಳಿಗೆ ಹಾವುಗಳು ಸಜ್ಜಾಗೋದ್ಯಾವಾಗ?

ಯಾರಾದ್ರೂ ಕಳ್ಳತನ, ದರೋಡೆಯಂತಹ ಪ್ರಕರಣಗಳಲ್ಲಿ ಸಿಕ್ಕಿಬಿದ್ರೆ, ಪೊಲೀಸರು ಕ್ರಮಕೈಗೊಳ್ತಾರೆ.. ಆರೋಪಿಯನ್ನ ಬಂಧಿಸ್ತಾರೆ..  ಮನುಷ್ಯ ಅಂದ ಮೇಲೆ ಕಾನೂನಿಗೆ ತಲೆಬಾಗಲೇಬೇಕಾಗುತ್ತೆ. ಇನ್ನು ಕೆಲವು ಸಂದರ್ಭಗಳಲ್ಲಿ ಪ್ರಾಣಿ, ಪಕ್ಷಿಗನ್ನು ವಶಕ್ಕೆ ಪಡಿತಾರೆ. ಆದ್ರೆ ಯಾವುದೇ ಪ್ರಾಣಿ ಅಥವಾ ಪಕ್ಷಿಯನ್ನು ಅಪರಾಧ ಮಾಡಿದ್ದಕ್ಕೆ ಬಂಧಿಸಿ ಇಡೋಕೆ ಸಾಧ್ಯವೇ ಇಲ್ಲ ಇಲ್ವಾ? ಕೇವಲ ಮನುಷ್ಯರು ಮಾತ್ರ ಕಾನೂನಿನಲ್ಲಿ ಅಪರಾಧಿಯಾಗ್ತಾರೆ ಎಂದು ನೀವು ಅಂದು ಕೊಂಡಿದ್ದರೆ ಅದು ತಪ್ಪು. ಯಾಕಂದ್ರೆ ಪಾಕಿಸ್ತಾನದ ಪೇಶಾವರದಲ್ಲಿ ಒಂದು ಮರವನ್ನು ಆರೋಪಿ ಅಂತಾ ಅರೆಸ್ಟ್ ಮಾಡಲಾಗಿದೆ. ಅದೂ ಇತ್ತೀಚೆಗೆ ಅಲ್ಲ, ಬರೋಬ್ಬರಿ 125 ವರ್ಷಗಳಿಂದ ಸರಪಳಿಗಳಲ್ಲಿ ಆ ಮರವನ್ನು ಬಂಧಿಸಲಾಗಿದೆ.

ಈ‌ ಪ್ರಸಂಗ 125 ವರ್ಷಗಳ ಹಿಂದೆ ಟೋರ್ಖಾನ್ ಗಡಿಯ ಬಳಿಯ ಲ್ಯಾಂಡಿ ಕೊಟಾಲ್ ಎಂಬ ವಸಾಹತುವಿನಲ್ಲಿ ಬ್ರಿಟಿಷ್ ಅಧಿಕಾರಿಯಿಂದಾಗಿ ನಡೆಯಿತು.  ಕಥೆಯ ಪ್ರಕಾರ, ಜೇಮ್ಸ್ ಸ್ಕ್ವಿಡ್ ಎಂಬ ಈ ಅಧಿಕಾರಿ ಒಂದು ದಿನ ಮಾದಕ ಪದಾರ್ಥದ ಸೇವನೆಯ ಮತ್ತಿನಲ್ಲಿದ್ದನು, ಈ ಸಂದರ್ಭದಲ್ಲಿ ಆತನಿಗೆ ಈ ಮರವನ್ನು ಹಿಡಿಯಲು ಆಗುತ್ತಿಲ್ಲ, ತಾನು ಹಿಡ್ಕೊಳ್ಳಲು ಹೋದ್ರೆ ಆ ಮರ ಮತ್ತೆ ಮತ್ತೆ ಓಡಿ ಹೋಗುತ್ತಿದೆ ಅಂತಾ ಹೇಳಿಕೊಂಡನು. ಅಷ್ಟೇ ಅಲ್ಲ ಈ ಮರವನ್ನು ಬಂಧಿಸಲು ಅವನು ತನ್ನ ಸೈನಿಕರಿಗೆ ಆದೇಶಿಸಿದನು. ಜೇಮ್ಸ್ ಒಬ್ಬ ಕುಡುಕನಾಗಿದ್ದು, ಬಂಧನದ ಅಗತ್ಯ ಇಲ್ಲ ಎಂದು ಸೈನಿಕರು ಅರ್ಥಮಾಡಿಕೊಂಡರು. ಆದರೆ ಅಧಿಕಾರಿಯ ಮುಂದೆ ಮಾತನಾಡಲು ಯಾರು ಧೈರ್ಯ ಮಾಡಲಿಲ್ಲ. ಅದನ್ನು ತಡೆಯಲು ಅವರು ಪ್ರಯತ್ನಿಸಲಿಲ್ಲ, ಬದಲಾಗಿ ಅಧಿಕಾರಿ ಹೇಳಿದಂತೆ ಅವರು ಮರವನ್ನು ಅದರ ಸುತ್ತಲೂ ಸರಪಳಿಗಳಿಂದ ಕಟ್ಟಿದರು. ಅಂದಿನಿಂದ, ಮರವನ್ನು ಬಂಧಿಸಲಾಗಿದೆ ಮತ್ತು ಅದರ ಸರಪಳಿಗಳು ಹಾಗೇ ಉಳಿದಿವೆ.

ಅರೆಸ್ಟ್ ಮಾಡಲಾದ ಮರ ಈಗಲೂ ಇದೆ. ಈ ಮರದ ಮೇಲೆ ಬೋರ್ಡ್ ಗಳನ್ನ ಹಾಕಲಾಗಿದೆ. ಇದ್ರಲ್ಲಿ ಮರದ ಇಡೀ ಕತೆಯನ್ನ ಪ್ರವಾಸಿಗರಿಗೆ ವಿವರಿಸಲಾಗಿದೆ. ‘ನನ್ನನ್ನು ಬಂಧಿಸಲಾಗಿದೆ’ ಎನ್ನುವ ತಲೆಬರಹದೊಂದಿಗೆ ಇಡೀ ಕಥೆಯ ಉಳಿದ ಭಾಗವನ್ನು ಸಹ ವಿವರವಾಗಿ ಬರೆಯಲಾಗಿದೆ. ಲಾಂಡಿ ಕೊಟಾಲ್ ಮಾರ್ಗದ ಖೈಬರ್ ರೈಫಲ್ಸ್ ಅಧಿಕಾರಿಗಳ ಮೆಸ್ ಬಳಿ ಇರುವ ಈ ಸರಪಳಿ ಮರವು ಪ್ರವಾಸಿಗರ ಗಮನ ಸೆಳೆಯುತ್ತದೆ. ಅದ್ರೂ, ಸ್ಥಳೀಯರು ಈ ಮರವನ್ನು ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯ ದಬ್ಬಾಳಿಕೆಯ ಸಂಕೇತವೆಂದು ಪರಿಗಣಿಸುತ್ತಾರೆ.

“ಈ ಮರವನ್ನು ಬಂಧಿಸುವ ಮೂಲಕ, ಬ್ರಿಟಿಷರು ಮೂಲತಃ ಬುಡಕಟ್ಟು ಜನಾಂಗದವರಿಗೆ ಬ್ರಿಟಿಷ್ ಸರ್ಕಾರದ ವಿರುದ್ಧ ತಿರುಗಿ ಬೀಳುವ ಧೈರ್ಯ  ಮಾಡಿದರೆ, ಅವರನ್ನು ಸಹ ಇದೇ ರೀತಿಯಲ್ಲಿ ಶಿಕ್ಷಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು” ಎಂದು ಸ್ಥಳೀಯರು ಹೇಳ್ತಾರೆ. ಮರದ ವಿವಾದಾತ್ಮಕ ಗತಕಾಲದ ಹೊರತಾಗಿಯೂ, ಪೇಶಾವರದ ಸರಪಳಿ ಮರವು ಇಂದಿಗೂ ಪ್ರಮುಖ ಪ್ರವಾಸಿ ತಾಣವಾಗಿ ಉಳಿದಿದೆ. ಬ್ರಿಟಿಷರ ಕಾಲದಲ್ಲಿ ಭಾರತದಲ್ಲಿ ಯಾವ ಸ್ವರೂಪದ ಹುಚ್ಚಾಟವನ್ನು ಬ್ರಿಟಿಷ್ ಅಧಿಕಾರಿಗಳು ಪ್ರದರ್ಶಿಸುತ್ತಿದ್ದರು ಎನ್ನುವುದಕ್ಕೆ ಈ ಮರದ‌ ಬಂಧನವೇ ಸಾಕ್ಷಿ.

Shwetha M